ಅನುಷ್ಕಾ ಹೈದ್ರಾಬಾದ್ ಟು ಚೆನ್ನೈ ಟು ಬೆಂಗ್ಳೂರ್

By Mahesh

ದಕ್ಷಿಣ ಭಾರತದ ಪ್ರತಿಭಾವಂತ ನಟಿ ಅನುಷ್ಕಾ ಶೆಟ್ಟಿ ಟಾಲಿವುಡ್ ಗೆ ಗುಡ್ ಬೈ ಹೇಳಿದ್ದಾಳಂತೆ ಎಂಬ ಸುದ್ದಿಗಿಂತ ಆಕೆ ಯಾಕೆ ತೆಲುಗು ಚಿತ್ರರಂಗ ತೊರೆಯುತ್ತಿದ್ದಾಳೆ ಎಂಬುದು ಗಾಸಿಪ್ ಕಾಲಂಗಳಲ್ಲಿ ಟಾಪ್ ಆಗುತ್ತಿದೆ.

ಮಂಗಳೂರು ಮೂಲದ ಬಂಟರ ಹುಡುಗಿ ಅನುಷ್ಕಾ, ಕ್ಲಾಸ್ ಹಾಗೂ ಮಾಸ್ ಎರಡಲ್ಲೂ ಸಲ್ಲುವ ಚಾಲ್ತಿಯಲ್ಲಿರುವ ನಟಿ. ತೆಲುಗು ಚಿತ್ರರಂಗಕ್ಕೆ ಹೊಸ ಜೀವ ನೀಡಿದ್ದಲ್ಲದೆ, ನಾಯಕಿ ಪ್ರಧಾನ ಚಿತ್ರಗಳ ಮರು ಹುಟ್ಟಿಗೆ ಕಾರಣಳಾದವಳು. ಆದರೆ, ಈಗ ತೆಲುಗು ಚಿತ್ರರಂಗವನ್ನೇ ತೊರೆಯುವುತ್ತಿರುವುದಾದರೂ ಏಕೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ಕಾಲಿವುಡ್ ಸೇರಿ ಒಂದೆರಡು ಚಿತ್ರಗಳಲ್ಲಿ ಕುಣಿದ ತಕ್ಷಣ ತೆಲುಗು ನಿರ್ಮಾಪಕ ಅನುಷ್ಕಾಳನ್ನು ದೂರ ಇರಿಸಿದ ಸುದ್ದಿ ಸಿಕ್ಕಿದೆ. ಇದರ ಜೊತೆಗೆ ತೆಲುಗು ಚಿತ್ರ ಉದ್ಧಾರ ಮಾಡಿದ್ದು ಸಾಕು ಎಂದು ಎತ್ತರದ ನಟಿಗೂ ಅನ್ನಿಸಿದೆ.

ಇನ್ನೊಂದು ಮೂಲಗಳ ಪ್ರಕಾರ, ಸತತವಾಗಿ ಆದಾಯ ತೆರಿಗೆ ಇಲಾಖೆ ದಾಳಿಗೆ ಒಳಗಾದ ಅನುಷ್ಕಾ ಶೆಟ್ಟಿಗೆ ಟಾಲಿವುಡ್ ನಲ್ಲಿ ಯಾರೂ ಹೆಚ್ಚಿನ ಅನುಕಂಪ ತೋರಿಸಿರಲಿಲ್ಲ. ಇದು ಸಾಲದೆಂಬಂತೆ ನಾಗರ್ಜುನ ಹಾಗೂ ಕುಟುಂಬದ ಜೊತೆಗಿನ ಆಪ್ತ ಸಂಬಂಧದ ಬಗ್ಗೆ ಗಾಸಿಪ್ ಕಾಲಂನಲ್ಲಿ ಸುದ್ದಿ ಬಂದಿದ್ದು, ನಿಶ್ಚಿತಾರ್ಥ-ಮದುವೆ ಗಾಳಿಸುದ್ದಿ ಹಬ್ಬಿದ್ದು ಅನುಷ್ಕಾ ಮನಸ್ಸನ್ನು ಘಾಸಿಗೊಳಿಸಿದೆ.

ಹೀಗಾಗಿ ಎಲ್ಲದರಿಂದ ಮುಕ್ತಿ ಹೊಂದಿ ಹೊಸ ನೆಲೆಯಲ್ಲಿ ವೃತ್ತಿಯನ್ನು ಮುಂದುವರೆಸಿರುವ ಅನುಷ್ಕಾ ಚೆನ್ನೈನಲ್ಲಿ ಕೆಲಕಾಲ ಉಳಿಯುವ ಸಂಭವವಿದೆ. ಬೆಂಗಳೂರಲ್ಲಿ ನೆಲೆಸಲು ಮನೆಯಿದೆ ಆದರೆ, ಅನುಷ್ಕಾಳನ್ನು ಕನ್ನಡ ಚಿತ್ರರಂಗಕ್ಕೆ ಕರೆತರುವ ಮನಸ್ಸುಗಳು ನಮ್ಮಲಿಲ್ಲ. ಅನುಷ್ಕಾಳಿಗೂ ಕೂಡಾ ಕನ್ನಡ ಚಿತ್ರದಲ್ಲಿ ನಟಿಸುವ ಆಸೆ ಇನ್ನೂ ತೀರಿಲ್ಲ.

More from Filmibeat

English summary
Actress Anushaka Shetty is said good bye to Tollywood and likely to settle in Kollywood and later move to Kannada cinema world if she gets good offers. Repeated Income Tax raids and gossip links with Nagarjuna Family has made Anushka to take this decision.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X