ಭಟ್ಟರ ಜಾಕಿ ಗೀತ ಸಾಹಿತ್ಯಕ್ಕೆ ಕತ್ತರಿ ಪ್ರಯೋಗ!

By Mahesh

ಪುನೀತ್ ರ 'ಜಾಕಿ' ಚಿತ್ರದ ಹಾಡೊಂದು ಧ್ವನಿಸುರುಳಿ ಬಿಡುಗಡೆಗೂ ಮುನ್ನ ಅಂತರ್ಜಾಲದಲ್ಲಿ ಸೋರಿಕೆಯಾಗಿ ಪಡ್ಡೆ ಹುಡುಗರ ಮನ ತಣಿಸಿತ್ತು, 'ಕಳಪೆ ಗುಣಮಟ್ಟ ಪೈರಸಿ ಹಾಡು ಕೇಳ್ಬೇಡಿ ಪ್ಲೀಸ್ 'ಎಂದು ರಾಘಣ್ಣ ಫೇಸ್ ಬುಕ್ ನಲ್ಲಿ ಮನವಿ ಮಾಡಿದ್ದು ಆಯ್ತು. ಆದರೆ, ಜಾಕಿ ಚಿತ್ರದ 'ಯಕ್ಕಾ ರಾಜರಾಣಿ..' ಹಾಡು ಮಾತ್ರ ಮೊಬೈಲ್ , ಕಂಪ್ಯೂಟರ್ ಗಳಲ್ಲಿ ಹರಿದಾಡತೊಡಗಿದೆ. ಬಿಟ್ಟಿಯಾಗಿ ಹಾಡು ಡೌನ್ ಲೋಡ್ ಮಾಡಿಕೊಳ್ಳಲು ಲಿಂಕ್ ಗಾಗಿ ಸಿನಿರಸಿಕರು ಟೀಟ್ವರ್, ಬ್ಲಾಗ್ ಗಳಲ್ಲಿ ನಿರಂತರ ಹುಡುಕಾಟ ನಡೆಸುತ್ತಾ ಇದ್ದಾರೆ.

ಇದೆಲ್ಲದರ ಮಧ್ಯೆದಲ್ಲಿ ಬಹುನಿರೀಕ್ಷಿತ 'ಜಾಕಿ' ಧ್ವನಿಸುರಳಿ ಶುಭ ಶುಕ್ರವಾರದಂದು ಲೀ ಮೆರಿಡಿಯನ್ ಹೋಟೆಲ್ ನಲ್ಲಿ ಬಿಡುಗಡೆಗೊಂಡಿದೆ. ಈ ಸಮಾರಂಭ ಹೇಗಾಯ್ತು, ಯಾರಿದ್ದರು, ಏನೆಲ್ಲಾ ಮಾತಾಡಿದ್ರೂ ಅನ್ನೋ ಸಂಪೂರ್ಣ ವಿವರಣೆ ನಮ್ಮ ಪ್ರತಿನಿಧಿ ಉದಯರವಿ ಆಮೇಲೆ ನೀಡಲಿದ್ದಾರೆ. ಈಗ ಭಟ್ಟರ ವಿವಾದಿತ ಸಾಂಗ್ ಕತ್ತರಿ ಪ್ರಯೋಗದ ಬಗ್ಗೆ ಒಂದಿಷ್ಟು ಸುದ್ದಿ ತಿಳಿಯೋಣ.

ವಿ ಹರಿಕೃಷ್ಣ ಸಂಗೀತ ಸಂಯೋಜಿಸಿ "ಯಕ್ಕಾ ರಾಜಾ..."ಎಂಬ ಹಾಡಿನ ಸಾಹಿತ್ಯಕ್ಕೆ ಅಲ್ಲಲ್ಲಿ ಕತ್ತರಿ ಪ್ರಯೋಗ ನಡೆದಿದೆ. ನೀವು ಚಿತ್ರಮಂದಿರದಲ್ಲಿ ಈ ಹಾಡು ಕೇಳುವಾಗ ನೀವು ಕುತೂಹಲದಿಂದ ಕಾಯ್ದು ಕೇಳುವ ಶಬ್ದಗಳು ಕೇಳಿಸದಿದ್ದರೆ ಆ 'ಹರಿ'ಯೇ ಕಾರಣ .

'ನೈಂಟಿ ಹೊಡಿ..', ' ಆಡಬೇಕು ಗ್ಯಾಪುಕೊಡದೆ ಮುಚ್ಚಿಕೊಂಡು..','ಹಿಡಿ ಮಣ್ಣು ನಿನ್ನ ಬಾಯೊಳಗೆ..', 'ಬೊ..ಮಗ' ಇತ್ಯಾದಿ ಇತ್ಯಾದಿ ಪದಗಳನ್ನು ಸ್ವಚ್ಛಂದವಾಗಿ ಬಳಿಸಿದ ಭಟ್ಟರಿಗೆ ತಮ್ಮ ಚಂದದ ಹಾಡಿನ ಇಡೀ ಸಾಹಿತ್ಯ ಉಳಿಸಿಕೊಳ್ಳುವ ಯೋಗವಿಲ್ಲ. ರಾಗ ಬದಲಾಗದು, ಆದರೆ ಸಾಹಿತ್ಯ ಬದಲಾಗುತ್ತದೆ ಎಂದಿರುವ ಹರಿಕೃಷ್ಣ, ಟ್ರ್ಯಾಕ್ ವಾಯ್ಸ್ ನಲ್ಲಿರುವ ಕೈಲಾಷ್ ಖೇರ್ ಧ್ವನಿಯನ್ನು ಉಳಿಸಿಕೊಳ್ಳ ಲಾಗುತ್ತಾ ಅಥವಾ ರೀ ರೆಕಾರ್ಡ್ ಮಾಡುತ್ತೀರಾ ಎಂದರೆ ಎಲ್ಲವನ್ನು ತೆರೆಯ ಮೇಲೆ ನೋಡಿ ಎನ್ನುತ್ತಾರೆ. ಅದೂ ಆಡಿಯೋ ರಿಲೀಸ್ ಆದಮೇಲೆ.

ಹಾಡಿನ ಸಾಹಿತ್ಯ ಸಂಪೂರ್ಣ ಬದಲಿಸುವುದರಿಂದ ಈಗಾಗಲೇ ಪ್ರೈರೇಟೆಡ್ ಹಾಡುವುಳ್ಳವರ ಟ್ರಾಕ್ ಮಾಡಬಹುದು ಎಂಬುದು ಹರಿಕೃಷ್ಣ ಕೊಡುವ ಇನ್ನೊಂದು ಕಾರಣ. ಅಲ್ರೀ ಸಂಗೀತ ನಿರ್ದೇಶಕರೇ ಏನೇ ಬದಲಾವಣೆ ಮಾಡಿದರೂ, ಊರಿಗೆ ಬಂದವಳು ನೀರಿಗೆ ಬರಲಾರಳೆ ಎಂಬಂತೆ, ಮಾರುಕಟ್ಟೆಗೆ ಸಿಡಿ ಬಂದ ಮೇಲೆ ಇಂಟರ್ ನೆಟ್ ಸೇರದೇ ಇರಲು ಸಾಧ್ಯವೇ? ಏನೋ... ತಮ್ಮ ಸಾಹಿತ್ಯಕ್ಕೆ ಕತ್ತರಿ ಹಾಕಿದ್ದು ಸಾಹಿತಿ ಭಟ್ಟರಿಗೆ ಏನ್ನನಿಸಿತೋ ಉತ್ತರ ತಿಳಿದಿಲ್ಲ. ಕಾರಣ.. ಭಟ್ಟರ ಮೊಬೈಲ್ ನಾಟ್ ರಿಚಬಲ್..

ಯಕ್ಕಾ ರಾಜ ರಾಣಿ ನನ್ನ ಕೈಯೊಳಗೆ ಹಾಡಿನ ಮೂಲ ಸಾಹಿತ್ಯ ಓದಿ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X