ನೀಲಿ ಚಿತ್ರದಲ್ಲಿ ಕತ್ರಿನಾ; ಅಸಲಿಯೋ, ನಕಲಿಯೋ
ಬಾಲಿವುಡ್ ಶಿಲಾಬಾಲಿಕೆ ಕತ್ರಿನಾ ಕೈಫ್ ರನ್ನೇ ಹೋಲುವ ಸೆಕ್ಸ್ ವಿಡಿಯೋವೊಂದು ಅಂತರ್ಜಾಲದಲ್ಲಿ ಗುಲ್ಲೆಬ್ಬಿಸಿದೆ. ಕೆಲವು ಅಶ್ಲೀಲ ಜಾಲತಾಣಗಳು, ಅಂತರ್ಜಾಲ ಚರ್ಚಾ ವೇದಿಕೆಗಳಲ್ಲಿ ಈ ವಿಡಿಯೋ ಕ್ಲಿಪ್ಪಿಂಗ್ ಭಾರಿ ರಾದ್ಧಾಂತಕ್ಕೆ ಕಾರಣವಾಗಿದೆ. "ಈ ವಿಡಿಯೋದಲ್ಲಿರುವುದು ನಾನಲ್ಲ. ಈ ವಿಡಿಯೋವನ್ನು ಪ್ರಚಾರಗೊಳಿಸಲು ನನ್ನ ಹೆಸರನ್ನು ಬಳಸಿಕೊಂಡಿದ್ದಾರೆ" ಎಂದು ಕತ್ರಿನಾ ಕೈಫ್ ಬೇಸರದಿಂದ ನುಡಿದ್ದಾರೆ.
ಈ ಹಿಂದೆ ಕತ್ರಿನಾರ ಸಹೋದರಿ ಇಸಬೆಲ್ ಅವರ ಸೆಕ್ಸ್ ವಿಡಿಯೋವೊಂದು ಇದೇ ರೀತಿ ರಾದ್ಧಾಂತ ಮಾಡಿತ್ತು. ಆದರೆ ಆ ವಿಡಿಯೋದಲ್ಲಿರುವುದು ಇಸಬೆಲ್ ಅಲ್ಲ. ಆಕೆಯ ಮುಖಚಹರೆಯನ್ನೇ ಹೋಲುವ ಮತ್ತೊಬ್ಬರು ಆ ವಿಡಿಯೋದಲ್ಲಿದ್ದಾರೆ ಎಂಬುದು ಬಳಿಕ ಸಾಬೀತಾಗಿತ್ತು. ಇದು ನಕಲಿ ಎಂದು ಗೊತ್ತಾಗುವ ವೇಳೆಗೆ ಇಸಬೆಲ್ ನರಕಯಾತನೆ ಅನುಭವಿಸಬೇಕಾಯಿತು.
ಇದೀಗ ಅಂತಹದ್ದೇ ಪರಿಸ್ಥಿತಿ ಕತ್ರಿನಾ ಕೈಫ್ ಗೂ ಎದುರಾಗಿದೆ. ಒಟ್ಟಿನಲ್ಲಿ ಜನಪ್ರಿಯ ತಾರೆಗಳ ಹೆಸರುಗಳನ್ನು ಬಳಸಿಕೊಂಡು ಕೆಲವರು ಹೀಗೆ ಅಡ್ಡದಾರಿ ಹಿಡಿದಿರುವ ಬಗ್ಗೆ ಗಂಭೀರ ಚರ್ಚೆ ಶುರುವಾಗಿದೆ. ವಿಚಿತ್ರವೆಂದರೆ ಈ ವಿಡಿಯೋಗೆ 'Katrina Kaif sex scandal' ಎಂದು ಹೆಸರಿಟ್ಟಿದ್ದಾರೆ. ಪಡ್ಡೆಗಳು, ಚಪಲಚನ್ನಿಗರಾಯರು ಈ ವಿಡಿಯೋಗಾಗಿ ಹಾತೊರೆಯುತ್ತಿದ್ದಾರೆ.
ಅಂತರ್ಜಾಲದಲ್ಲಿ ಅತ್ಯಧಿಕ ಡೌನ್ ಲೋಡ್ ಮಾಡಿಕೊಳ್ಳಲ್ಪಟ್ಟ ವಿಡಿಯೋ ಎಂಬ ಖ್ಯಾತಿಗೆ ಕತ್ರಿನಾರ 'ಸೆಕ್ಸ್ ಸಿಡಿ' ಪಾತ್ರವಾಗಿದೆ. ಆಶ್ಚರ್ಯಕರ ಸಂಗತಿ ಎಂದರೆ ಬಾಲಿವುಡ್ ತಾರೆಗಳಲ್ಲಿ ಅತಿಹೆಚ್ಚು ಶೋಧಿಸಿರುವ ಪದ Katrina Kaif. ಈ ವಿಡಿಯೋವನ್ನು ಪ್ರಚಾರ ಮಾಡುತ್ತಿರುವವರ ವಿರುದ್ಧ ಹಾಗೂ ಅದನ್ನು ತಮ್ಮ ಜಾಲತಾಣಗಳಲ್ಲಿ ಹಾಕಿಕೊಳ್ಳುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೂವುದಾಗಿ ಕತ್ರಿನಾ ಎಚ್ಚರಿಸಿದ್ದಾರೆ.
ವಿಡಿಯೋದಲ್ಲಿನ ಯುವತಿ ಹೆಚ್ಚುಕಡಿಮೆ ಕತ್ರಿನಾರನ್ನೇ ಹೋಲುತ್ತಾರೆ. ಬಿಕಿನಿ ಬಿಚ್ಚುವ, ಹಲವು ಯುವಕರೊಂದಿಗಿನ ಕಾಮಲೀಲೆಗಳು ವಿಡಿಯೋದಲ್ಲಿವೆ. ಚಿತ್ರದಲ್ಲಿರುವುದು ನನ್ನಂತೆಯೇ ಕಾಣುವ ಯುವತಿ ಎಂಬುದು ಸುಳ್ಳು. ಆಕೆಗೂ ನನಗೂ ಯಾವುದೇ ಹೋಲಿಕೆಯಿಲ್ಲ. ಈ ಬಗ್ಗೆ ಮಾತನಾಡುವುದೇ ಮೂರ್ಖತನ ಎಂದಿದ್ದಾರೆ ಕತ್ರಿನಾ.


Click it and Unblock the Notifications











