»   » ಚಿತ್ರಗಳ ಸೋಲಿಗೆ ಕೆಎಫ್ ಸಿಸಿಯೂ ಕಾರಣವಾಗಿದೆ; ಎಚ್ಡಿಕೆ

ಚಿತ್ರಗಳ ಸೋಲಿಗೆ ಕೆಎಫ್ ಸಿಸಿಯೂ ಕಾರಣವಾಗಿದೆ; ಎಚ್ಡಿಕೆ

Posted By:
Subscribe to Filmibeat Kannada

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ನೀತಿ ನಿಯಮಗಳ ಬಗ್ಗೆ ಎಚ್ಡಿಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಡಳಿ ತನಗೆ ಹೇಗೆ ಬೇಕೋ ಹಾಗೆ ನೀತಿ ನಿಯಮಗಳನ್ನು ರೂಪಿಸಿಕೊಳ್ಳುವುದು ಸರಿಯಾದ ಕ್ರಮವಲ್ಲ. ಮಂಡಳಿ ನಿರ್ಧಾರಗಳು ಕನ್ನಡ ಚಿತ್ರಗಳ ಸೋಲಿಗೆ ಕಾರಣವಾಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

'ಪ್ರೀತಿಯ ಲೋಕ' ಧ್ವನಿಸುರುಳಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು. ಪೈರಸಿಯನ್ನು ತಡೆಯಲು ಗೂಂಡಾ ಕಾಯಿದೆ ಜಾರಿಗೆ ಬಂದರೆ ನಕಲಿ ಹಾವಳಿ ಕಡಿಮೆಯಾಗಲಿದೆ. ತಾವು ಮುಖ್ಯಮಂತ್ರಿಗಳಾಗಿದ್ದಾಗ ಗೂಂಡಾ ಕಾಯಿದೆಯನ್ನು ರೂಪಿಸಲಾಗಿತ್ತು ಎಂದರು.

ಚಿತ್ರರಂಗದಲ್ಲಿನ ಪೈರಸಿಯನ್ನು ತಡೆಯಲು ರೂಪಿಸಿರುವ ಗೂಂಡಾ ವಿರೋಧಿ ಕಾಯಿದೆಗೆ ಅಂಕಿತ ಹಾಕಿಸಲು ಖುದ್ದು ರಾಷ್ಟ್ರಪತಿ ಪ್ರತಿಭಾ ಪಾಟೀಲರನ್ನು ಭೇಟಿ ಮಾಡಿ ಮನವಿ ಮಾಡುವುದಾಗಿ ಕುಮಾರಸ್ವಾಮಿ ತಿಳಿಸಿದರು. ನಕಲಿ ಹಾವಳಿಯಿಂದ ಕನ್ನಡ ಚಿತ್ರರಂಗಕ್ಕೆ ಭಾರಿ ನಷ್ಟ ಉಂಟಾಗುತ್ತಿದೆ.

ಪೈರಸಿಯಿಂದ ಕನ್ನಡ ನಿರ್ಮಾಪಕರಿಗೆ ಹಾಗೂ ಆಡಿಯೋ ಕಂಪನಿಗಳಿಗೆ ತೀವ್ರ ನಷ್ಟ ಉಂಟಾಗುತ್ತಿದೆ. ಈ ಸಂಬಂಧ ಶೀಘ್ರದಲ್ಲೆ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಪೈರಸಿ ತಡೆ ಕಾಯಿದೆಗೆ ಅಂಕಿತ ಹಾಕಿಸಲು ಮನವಿ ಮಾಡುವುದಾಗಿ ಅವರು ಹೇಳಿದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada