ಪೂನಂ ಪಾಂಡೆ ಐಫೋನ್ 4 ಕಸಿದುಕೊಂಡು ಪರಾರಿ
ತಮ್ಮ ಬಿಚ್ಚಾಟಗಳಿಂದ ಪಡ್ಡೆಗಳ ನಿದ್ದೆಗೆ ಕಿಚ್ಚು ಹಚ್ಚಿದ್ದ ಪೂನಂ ಪಾಂಡೆಯ ಬೆಲೆ ಬಾಳುವ ಮೊಬೈಲ್ ಫೋನ್ ಕಳುವಾಗಿದೆ. ಬೈಕಿನಲ್ಲಿ ಬಂದ ಗ್ಯಾಂಗ್ ಒಂದು ಪೂನಂರ ಐ ಫೋನ್ 4 (ಅಂದಾಜು ಬೆಲೆ ರು.45,000) ಕಸಿದುಕೊಂಡು ಪರಾರಿಯಾಗಿದೆ. ಈ ಘಟನೆ ಶುಕ್ರವಾರ ರಾತ್ರಿ ವೆಸ್ಟ್ ಅಂಧೇರಿಯ ಆದರ್ಶ್ ನಗರ್ ಸಿಗ್ನಲ್ ಬಳಿ ನಡೆದಿದೆ.
ಈ ಸಂಬಂಧ ಪೂನಂ ಪಾಂಡೆ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಸಿಗ್ನಲ್ ಬಳಿ ತನ್ನ ಕಾರಿನ್ನು ನಿಲ್ಲಿಸಿರಬೇಕಾದರೆ ಬೈಕ್ ಒಂದು ಪಕ್ಕ ಬಂದು ನಿಲ್ಲಿಸಿತು. ಆ ಸಂದರ್ಭದಲ್ಲಿ ತಾನು ಕಾರಿನ ಕಿಟಕಿ ಗಾಜನ್ನು ತೆರೆದೆ. ಆಗ ಬೈಕಿನಲ್ಲಿದ್ದವರು ತನ್ನ ಫೋನನ್ನು ಕಸಿದುಕೊಂಡು ಪರಾರಿಯಾದರು ಎಂದು ದೂರಿನಲ್ಲಿ ಪೂನಂ ತಿಳಿಸಿದ್ದಾರೆ.
ಈ ಸಿಗ್ನಲ್ ಬಳಿ ಪದೇ ಪದೇ ಇದೇ ರೀತಿಯ ಘಟನೆಗಳು ಮರುಕಳಿಸುತ್ತಿವೆ ಎಂದಿರುವ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಫೋನಿನಲ್ಲಿ ಪೂನಂರ ಹಲವಾರು ಖಾಸಗಿ ಫೋಟೋಗಳು ಇದ್ದವಂತೆ. ಅವು ಇನ್ಯಾರದೋ ಕೈ ಸೇರಿ ಇನ್ನೇನು ಎಡವಟ್ಟಾಗುತ್ತವೋ ಎಂಬ ಭೀತಿಯಲ್ಲಿ ಪೂನಂ ಇದ್ದಾರೆ. (ಏಜೆನ್ಸೀಸ್)


Click it and Unblock the Notifications











