For Quick Alerts
  ALLOW NOTIFICATIONS  
  For Daily Alerts

  ಯೋಗರಾಜ್ ಭಟ್ 'ಡ್ರಾಮಾ'ದಿಂದ ಪ್ರಜ್ಞಾ ಔಟ್

  By Rajendra
  |

  ಯೋಗರಾಜ್ ಭಟ್ಟರ ಹೊಸ ಪ್ರೇಮ ಕಥಾನಕ 'ಡ್ರಾಮಾ' ಚಿತ್ರಕ್ಕೆ ಯಾಕೋ ಏನೋ ವಿಘ್ನಗಳ ಮೇಲೆ ವಿಘ್ನಗಳು ಎದುರಾಗುತ್ತಿವೆ. ಸ್ವಲ್ಪ ದಿನಗಳ ಹಿಂದಷ್ಟೇ ಡೇಟ್ಸ್ ಹೊಂದಾಣಿಕೆಯಾಗುತ್ತಿಲ್ಲ ಎಂದು ಹೇಳಿ ನಟಿ ಭಾಮಾ ಚಿತ್ರದಿಂದ ಹೊರಬಿದ್ದಿದ್ದರು. ಈಗ ಚಿತ್ರದ ಮತ್ತೊಬ್ಬ ನಾಯಕಿ ಪ್ರಜ್ಞಾ ಅದೇ ರೀತಿಯ ಸಮಸ್ಯೆ ಹೇಳಿ ಚಿತ್ರದಿಂದ ಔಟ್ ಆಗಿದ್ದಾರೆ.

  ಪ್ರಜ್ಞಾ ಜಾಗಕ್ಕೆ 'ಲೈಫು ಇಷ್ಟೇನೆ' ನಟಿ ಸಿಂಧು ಲೋಕನಾಥ್ ಅವರನ್ನು ಆಯ್ಕೆ ಮಾಡಲಾಗಿದೆ. ಏತನ್ಮಧ್ಯೆ 'ಡ್ರಾಮಾ' ಚಿತ್ರದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದೆ. ಸಾಧು ಕೋಕಿಲ ಆಕ್ಷನ್ ಕಟ್ ಹೇಳುತ್ತಿರುವ ಚಿತ್ರದಲ್ಲಿನ ತಮ್ಮ ಭಾಗದ ಚಿತ್ರೀಕರಣವನ್ನು ಪ್ರಜ್ಞಾ ಮುಗಿಸಿಕೊಡಲೇಬೇಕಾಗಿದೆ. ಹಾಗಾಗಿ ವಿಧಿಯಿಲ್ಲದೆ 'ಡ್ರಾಮಾ'ದಿಂದ ಹೊರಬಂದದ್ದಾಗಿ ಪ್ರಜ್ಞಾ ತಿಳಿಸಿದ್ದಾರೆ.

  'ಡ್ರಾಮಾ' ಚಿತ್ರದ ಅಡಿಬರಹವೂ ವಿಭಿನ್ನವಾಗಿದೆ. "ಇನ್ನೂ ಈ ಕಣ್ ನಲ್ಲಿ ಏನೇನ್ ನೋಡ್ಬೇಕಪ್ಪಾ" ಎಂಬುದೇ ಆ ಅಡಿಬರಹ. ಈ 'ಡ್ರಾಮಾ' ಪಾತ್ರಧಾರಿಗಳು ನಟ ಯಶ್, ರಾಧಿಕಾ ಪಂಡಿತ್, ನೀನಾಸಂ ಸತೀಶ್, ಹಾಗೂ ಸಿಂಧು ಲೋಕನಾಥ್. ವಿಶೇಷ ಪಾತ್ರದಲ್ಲಿ ರೆಬೆಲ್ ಸ್ಟಾರ್ ಅಂಬರೀಷ್ ಹಾಗೂ ಪ್ರಕಾಶ್ ರೈ ಕಾಣಿಸಲಿದ್ದಾರೆ. ಸಂಗೀತ ವಿ ಹರಿಕೃಷ್ಣ, ಛಾಯಾಗ್ರಹಣ ಎಸ್ ಕೃಷ್ಣ. (ಏಜೆನ್ಸೀಸ್)

  English summary
  Lifeu Ishtene fame actress Sindhu Loknath replaced by Pragna in Yograj Bhat's Drama because of dates problem. Yash, Radhika Pandit are in lead roles in this film in which Sathish is playing another important role. Rebel Star Ambareesh and Prakash Raj have also been working in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X