ನನ್ನ ಮದುವೆಯಾಗಿ ಎಂದು ಕೇಳುತ್ತಿಲ್ಲ; ವಾರೆ ವ್ಹಾ!
ತಮ್ಮ ಹೊಸ ಚಿತ್ರಕ್ಕೆ ನಟಿ ರಾಗಿಣಿ ಕೈಕೊಟ್ಟ ಕಾರಣ ಹಾಸ್ಯ ನಟ ಕೋಮಲ್ ಕುಮಾರ್ ಪೆಚ್ಚಾಗಿದ್ದಾರೆ. ಕೋಮಲ್ ಹೊಸ ಚಿತ್ರ 'ವಾರೆ ವ್ಹಾ' ದಲ್ಲಿ ನಟಿಸಲು ರಾಗಿಣಿ ತಿರಸ್ಕರಿಸಿದ್ದರು. ಈ ಹಿಂದೆ ಕೋಮಲ್ ಜೊತೆ ನಟಿಸಲು ರಮ್ಯಾ ಸಹ ನಿರಾಕರಿಸಿದ್ದರು. ಆರಂಭದಲ್ಲಿ ಜಗ್ಗೇಶ್ ಜೊತೆ ನಟಿಸಲು ಬಹಳಷ್ಟು ನಟಿಯರು ಊಹುಂ ಎನ್ನುತ್ತಿದ್ದರು. ಇದೀಗ ಅದೇ ರೀತಿಯ ಸಮಸ್ಯೆ ಕೋಮಲ್ ಗೆ ಎದುರಾಗಿದೆ.
"ನನ್ನನ್ನು ಮದುವೆ ಮಾಡಿಕೊಳ್ಳಿ ಎಂದು ರಾಗಿಣಿಯನ್ನು ನಾನು ಕೇಳುತ್ತಿಲ್ಲ. ಚಿತ್ರದಲ್ಲಿ ಅಭಿನಯಿಸಿ ಎಂದು ಕೇಳುತ್ತಿದ್ದೇನೆ. ಮುಂದೊಂದು ದಿನ ನಾನು ಖ್ಯಾತ ನಟನಾದರೆ ದುಬಾರಿ ನಟಿಯನ್ನು ಕರೆತನ್ನಿ ಎಂದು ನಿರ್ಮಾಪಕರಿಗೆ ಕೇಳುತ್ತೇನೆ" ಎಂದು ಕೋಮಲ್ ತಮ್ಮ ಬೇಸರವನ್ನು ಹೊರಗೆಡಹಿದ್ದಾರೆ.
'ವಾರೆ ವ್ಹಾ' ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ವಿಜಯಲಕ್ಷ್ಮಿ ಸಿಂಗ್. ನಿರ್ಮಾಪಕರು ಜೈಜಗದೀಶ್. 'ವಾರೆ ವ್ಹಾ' ಚಿತ್ರದಲ್ಲಿ 30 ಪ್ಲಸ್ ಮಹಿಳೆಯರು ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಏಕೈಕ ಪುರುಷ ಅಂದ್ರೆ ಕೋಮಲ್ ಕುಮಾರ್. ಅಂದರೆ ಹುಡುಗಿಯರ ನಾಡಿಮಿಡಿತ ಅರಿಯುವ ಗಂಡಿನ ಪಾತ್ರವಂತೆ. ಹೆಣ್ಣು ಮಕ್ಕಳಿಗೆ ಇಷ್ಟವಾಗುವ ಪಾತ್ರ ಕೋಮಲ್ ರದ್ದು. ಆದರೆ ರಾಗಿಣಿಗೆ ಯಾಕೆ ಇಷ್ಟವಾಗಲಿಲ್ಲವೋ ಗೊತ್ತಿಲ್ಲ?


Click it and Unblock the Notifications











