For Quick Alerts
  ALLOW NOTIFICATIONS  
  For Daily Alerts

  ‘ರಾಜ್‌ರಲ್ಲಿ ಸತ್ಯು ಕ್ಷಮಾಪಣೆ ಯಾಚಿಸಲಿ’

  By Staff
  |

  ಬೆಂಗಳೂರು : ‘ಅಣ್ಣಾವ್ರಂತೆ ಅಣ್ಣಾವ್ರು, ಯಾರ್ರೀ ಅದು ಅಣ್ಣಾವ್ರು...’ ಹೀಗೆ ನಟ ರಾಜ್‌ಕುಮಾರ್‌ರನ್ನು ಸಾರ್ವಜನಿಕ ವೇದಿಕೆಯಲ್ಲಿ ಟೀಕಿಸುವ ಮೂಲಕ, ರಂಗಕರ್ಮಿ ಡಾ. ಎಂ.ಎಸ್‌.ಸತ್ಯು ಕನ್ನಡ ಚಿತ್ರರಂಗದಲ್ಲಿ ವಿವಾದದ ಅಲೆಗಳನ್ನು ಸೃಷ್ಟಿಸಿದ್ದಾರೆ.

  ರಾಜ್‌ಕುಮಾರ್‌ ಹಾಗೂ ಚಿತ್ರರಂಗ ಕುರಿತಂತೆ ಸತ್ಯು ನೀಡಿದ್ದ ಹೇಳಿಕೆಗಳನ್ನು ಚಿತ್ರರಂಗ ಖಂಡಿಸಿದೆ. ಅವರು ಕೂಡಲೇ ಬೇಷರತ್ತು ಕ್ಷಮೆ ಕೇಳಬೇಕೆಂದು ಚಿತ್ರರಂಗದ ಗಣ್ಯರು ಆಗ್ರಹಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಸತ್ಯು ಅವರಿಗೆ ಪೋಲೀಸ್‌ ಭದ್ರತೆ ಒದಗಿಸಲಾಗಿದೆ.

  ಪೂರ್ವಗ್ರಹ ಪೀಡಿತರಾಗಿ ಡಾ.ರಾಜ್‌ ಬಗ್ಗೆ ಅನಗತ್ಯ ಟೀಕೆಗಳನ್ನು ಮಾಡಿರುವುದು ಸತ್ಯು ಅವರಿಗೆ ಘನತೆ ತರುವುದಿಲ್ಲ . ಈ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸಭೆಯಲ್ಲಿ ಚರ್ಚಿಸುವುದಾಗಿ ಮಂಡಳಿ ಅಧ್ಯಕ್ಷ ಗಂಗರಾಜು ತಿಳಿಸಿದ್ದಾರೆ.

  ಚಲನಚಿತ್ರ ಕಲಾವಿದರ ಸಂಘ, ಡಾ.ರಾಜ್‌ ಅಭಿಮಾನಿಗಳ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳು ಸತ್ಯು ಹೇಳಿಕೆ ಬಗ್ಗೆ ಕೆಂಡಕಾರಿದ್ದು, ಪ್ರತಿಭಟನೆಗೆ ಸಜ್ಜಾಗಿವೆ.

  ಕಿಡಿಗಳು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸತ್ಯು ಸಿಡಿಸಿದ ಒಂದೆರಡು ಕಿಡಿಗಳ ಸ್ಯಾಂಪಲ್‌ಗಳು ಇಲ್ಲಿವೆ.

  • ‘ಅಣ್ಣಾವ್ರಂತೆ ಅಣ್ಣಾವ್ರು, ಯಾರ್ರೀ ಅಣ್ಣಾವ್ರು? ರಾಜ್‌ಕುಮಾರ್‌ಒಳ್ಳೆಯ ನಟ ಎನ್ನುವ ಬಗ್ಗೆ ನನಗೆ ಗೌರವವಿದೆ. ಹಿಂದೆ ಕೆಲವು ಒಳ್ಳೆ ಚಿತ್ರಗಳ ನೀಡಿರಬಹುದು. ಆದರೆ ಅವರ ಬ್ಯಾನರ್‌ನಲ್ಲಿ ಪ್ರಸ್ತುತ ಎಂತೆಂತಹ ಕೆಟ್ಟ ಚಿತ್ರಗಳು ಮೂಡಿ ಬರುತ್ತಿವೆ. ಒಳ್ಳೆ ಚಿತ್ರ ಕೊಡಲಾಗದಿದ್ದರೆ ತೆಪ್ಪಗೆ ಮನೆಯಲ್ಲಿ ಕೂತಿರಬೇಕು’
  • ‘ಕಾಲೇಜು ಸೀನ್‌ಗಳು, ರೊಮ್ಯಾನ್ಸ್‌ , ರೌಡಿಸಂ ವೈಭವೀಕರಿಸುವ ಚಿತ್ರಗಳು ರಾಜ್‌ ಬ್ಯಾನರ್‌ನಲ್ಲಿ ಹೊರಬರುತ್ತಿವೆ. ಇದನ್ನೆಲ್ಲ ಜನ ಪ್ರಶ್ನಿಸಬೇಕು. ಪತ್ರಿಕೆಗಳು ಇದನ್ನು ಯಾಕೆ ಖಂಡಿಸೊಲ್ಲ. ಅಭಿಮಾನಿ ಸಂಘಗಳು ಮನಬಂದಂತೆ ಮೆರೆಯೋಕೆ ಇವರೆಲ್ಲ ದುಡ್ಡು ಖರ್ಚು ಮಾಡ್ತಾರೆ’
  • ‘ನನಗೆ ಕನ್ನಡದಲ್ಲಿ ಮಾತಾಡಿ ಅಂತ ಹೇಳೋಕೆ ನೀವು ಯಾರ್ರಿ? ಮಲ್ಟಿಕಲ್ಜರಲ್‌, ಮಲ್ಟಿ ಲಾಂಗ್ವೇಜ್‌ ಹೀಗಾಗಿ ಏನೂ ಮಾಡೋಕೆ ಆಗೊಲ್ಲ’ (ಕನ್ನಡ ಪ್ರಿಯವಾದ ಭಾಷೆ ಎನ್ನುವ ನೀವು, ನಿಮ್ಮ ಭಾಷಣದಲ್ಲಿ ಶೇ.75ರಷ್ಟು ಇಂಗ್ಲೀಷ್‌ ಬಳಸಿದ್ದು ಯಾಕೆ ಎನ್ನುವ ಪ್ರೇಕ್ಷಕರ ಪ್ರಶ್ನೆಗೆ ಸತ್ಯು ಸಿಡುಕಿದ್ದು)
  (ಇನ್ಫೋ ವಾರ್ತೆ)
  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X