ಮನೀಷಾ ಮನೆಸುತ್ತಲೂ ಪೊಲೀಸರ ಸರ್ಪಕಾವಲು!
ಹೊಸ ವಿವಾದ : ನಾಯಿಯನ್ನೇ ಸಾಕಿಲ್ಲ, ಮುಸ್ಲಿಂ ಹೆಸರಿಡುವುದು ಎಲ್ಲಿಯ ಮಾತು...
ಮನೀಷಾ ತಮ್ಮ ನಾಯಿಯಾಂದಕ್ಕೆ ಮುಸ್ಲಿಂ ಧಾರ್ಮಿಕ ವ್ಯಕ್ತಿಯಾಬ್ಬರ ಹೆಸರಿಟ್ಟಿದ್ದಾರೆ ಎಂದು ಪ್ರತಿಭಟನೆಗಳು ನಡೆದಿವೆ. ಪ್ರತಿಭಟನಾಕಾರರಿಂದ ಉಂಟಾಗಬಹುದಾದ ತೊಂದರೆ ತಡೆಯುವ ಸಲುವಾಗಿ ಭದ್ರತೆ ನೀಡಲಾಗಿದೆ ಎಂದು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ ಬಿಪಿನ್ ಬಿಹಾರಿ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಇಂಗ್ಲಿಷ್ ದಿನಪತ್ರಿಕೆಯಾಂದು ಈ ಕುರಿತ ಸುದ್ದಿಯಾಂದನ್ನು ಪ್ರಕಟಿಸಿ ವಿವಾದ ಎಬ್ಬಿಸಿದೆ. ಆನಂತರ ನಗರದಲ್ಲಿ ಹಲವಾರು ಪ್ರತಿಭಟನೆಗಳು ನಡೆಯಲು ಈ ವರದಿ ಕಾರಣವಾಗಿದೆ.
ಎಲ್ಲವೂ ಸುಳ್ಳು : ಮನೀಷಾ ಯಾವುದೇ ನಾಯಿಯನ್ನು ಸಾಕಿಕೊಂಡಿಲ್ಲ. ಹಾಗಾಗಿ ಮುಸ್ಲಿಂ ವ್ಯಕ್ತಿಯ ಹೆಸರಿಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಹೇಳಿರುವ ಪೊಲೀಸರು, ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಮುಸ್ಲಿಂ ಧರ್ಮಗುರುವನ್ನು ವ್ಯಂಗ್ಯಚಿತ್ರದ ಮೂಲಕ ಅವಹೇಳನ ಮಾಡಲಾಗಿದೆ ಎಂದು ವಿಶ್ವದೆಲ್ಲೆಡೆ ಪ್ರತಿಭಟನೆಗಳು ನಡೆದಿವೆ.
(ಏಜೆನ್ಸೀಸ್)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications











