»   » ಮುಯ್ಯಿಗೆ ಮುಯ್ಯಿ!:ತಮಿಳು ಚಿತ್ರದ ಚಿತ್ರೀಕರಣಕ್ಕೆ ಅಡ್ಡಿ

ಮುಯ್ಯಿಗೆ ಮುಯ್ಯಿ!:ತಮಿಳು ಚಿತ್ರದ ಚಿತ್ರೀಕರಣಕ್ಕೆ ಅಡ್ಡಿ

Posted By:
Subscribe to Filmibeat Kannada


ಬೆಂಗಳೂರು : ವಿಷ್ಣುವರ್ಧನ್‌ ಚಿತ್ರಕ್ಕೆ ತಮಿಳರು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ, ತಮಿಳು ಚಿತ್ರದ ಚಿತ್ರೀಕರಣಕ್ಕೆ ಕನ್ನಡಪರ ಸಂಘಟನೆಗಳು ಅಡ್ಡಿಪಡಿಸಿವೆ.

ವಿರೋಧದ ಪರಿಣಾಮ, ಕುಶಾಲನಗರದ ವೀರಭೂಮಿಯಲ್ಲಿ ನಡೆಯುತ್ತಿದ್ದ ‘ಇಳಮೈ ಜೋಡಿ’ ಚಿತ್ರದ ಚಿತ್ರೀಕರಣ ಸ್ಥಗಿತಗೊಂಡಿದೆ. ನಿರ್ದೇಶಕ ಪಿರಿಯಾಸ್ವಾಮಿ ಮತ್ತು ನಿರ್ಮಾಪಕ ಸುರೇಶ್‌ ಮೈಕಲ್‌ ನಿರ್ಮಾಣದ ಈ ಚಿತ್ರದ ಚಿತ್ರೀಕರಣ, ಕಳೆದ ಮೂರು ದಿನಗಳಿಂದ ಇಲ್ಲಿ ನಡೆಯುತ್ತಿತ್ತು. ನಟ ನಿಲಗಳ್‌, ನಟಿ ಲಿಖಿತಾ, ಖಳನಟ ವಿನು ಚಕ್ರವರ್ತಿ ಚಿತ್ರೀಕರಣದಲ್ಲಿಪಾಲ್ಗೊಂಡಿದ್ದರು.

ಸ್ಥಳಕ್ಕೆ ತೆರಳಿದ ಕನ್ನಡಪರ ಸಂಘಟನೆಗಳು, ಚಿತ್ರೀಕರಣ ನಿಲ್ಲಿಸಿವಂತೆ ಮನವಿ ಸಲ್ಲಿಸಿದರು. ಕೂಡಲೇ ಚಿತ್ರತಂಡ ಚಿತ್ರೀಕರಣ ಸ್ಥಗಿತಗೊಳಿಸಿ, ತವರಿಗೆ ಮರಳಿತು.

ಊಟಿಯಲ್ಲಿ ನಡೆಯುತ್ತಿದ್ದ ವಿಷ್ಣು-ಸುಹಾಸಿನಿ ಅಭಿನಯದ, ‘ಮಾತಾಡ್‌ ಮಾತಾಡ್‌ ಮಲ್ಲಿಗೆ’ ಸಿನಿಮಾದ ಚಿತ್ರೀಕರಣಕ್ಕೆ ತಮಿಳರು ಅಡ್ಡಿಪಡಿಸಿದ್ದರು. ಈ ಘಟನೆಯ ಬೆನ್ನಲ್ಲಿ ಕನ್ನಡ ಪರ ಸಂಘಟನೆಗಳು, ತಮಿಳರ ಮೇಲೆ ಗರಂ ಆಗಿವೆ.

(ದಟ್ಸ್‌ ಕನ್ನಡ ವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada