»   » ಸಿನಿಬಿಕ್ಕಟ್ಟು ಸಂಧಾನಕ್ಕೆ ಎಸ್‌ಐಎಫ್‌ಸಿಸಿ

ಸಿನಿಬಿಕ್ಕಟ್ಟು ಸಂಧಾನಕ್ಕೆ ಎಸ್‌ಐಎಫ್‌ಸಿಸಿ

Subscribe to Filmibeat Kannada

ಬೆಂಗಳೂರು : ರಾಜ್ಯದಲ್ಲಿ ಪರಭಾಷಾ ಚಿತ್ರಗಳ ಮೇಲೆ ರಾಜ್ಯ ಸರ್ಕಾರ ವಿಧಿಸಿರುವ ಏಳು ವಾರಗಳ ನಿರ್ಬಂಧವನ್ನು ತೆಗೆದುಹಾಕುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆಎಫ್‌ಸಿಸಿ) ಯ ಜತೆ ದಕ್ಷಿಣ ಭಾರತ ಚಲನಚಿತ್ರ ವಾಣಿಜ್ಯ ಮಂಡಳಿ ( ಎಸ್‌ಐಎಫ್‌ಸಿಸಿ) ಸಂಧಾನ ನಡೆಸಲು ಉದ್ದೇಶಿಸಿದೆ.

ಕೆಎಫ್‌ಸಿಸಿಗೆ ಚುನಾವಣೆ ನಡೆದ ನಂತರ ರಾಜ್ಯದಲ್ಲಿ ಪರಭಾಷಾ ಚಲನಚಿತ್ರಗಳ ಬಿಡುಗಡೆ ಕುರಿತಂತೆ ಮಾತುಕತೆ ನಡೆಸಲಿದ್ದೇವೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಕದ ರಾಜ್ಯಗಳ ಚಲನಚಿತ್ರ ವಾಣಿಜ್ಯ ಮಂಡಳಿಗಳ ಜತೆ ಹಾಗೂ ಬಾಲಿವುಡ್‌ನ ಪ್ರಮುಖರೊಂದಿಗೆ ಮಾತುಕತೆ ನಡೆಸಲು ಉದ್ದೇಶಿಸಲಾಗಿದೆ ಎಂದು ಎಂದು ಎಸ್‌ಎಎಫ್‌ಸಿಸಿ ಅಧ್ಯಕ್ಷ ದೇವಿಪ್ರಸಾದ್‌ ಚೆನ್ನೈಯಲ್ಲಿ ತಿಳಿಸಿದ್ದಾರೆ.

ಪರಭಾಷೆಯ ಚಿತ್ರಗಳು ಬಿಡುಗಡೆಯಾದ ಏಳು ವಾರಗಳ ನಂತರವೇ ರಾಜ್ಯದಲ್ಲಿ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರ ವಿಧಿಸಿದ ನಿರ್ಬಂಧದ ಹಿನ್ನೆಲೆಯಲ್ಲಿ ಭಾರತೀಯ ಚಲನಚಿತ್ರ ಒಕ್ಕೂಟ (ಎಫ್‌ಎಫ್‌ಐ) ಯಾವುದೇ ಕ್ರಮವನ್ನು ಕೈಗೊಳ್ಳುವುದಿಲ್ಲ ಎಂದು ಹೇಳಿದೆ.

ಕರ್ನಾಟಕ ಸರ್ಕಾರದ ನಿರ್ಣಯದ ಬಗ್ಗೆಯಾಗಲೀ, ಎಫ್‌ಐಎಫ್‌ಸಿಸಿ ತೆಗೆದುಕೊಳ್ಳುವ ನಿರ್ಣಯದ ಬಗ್ಗೆಯೂ ಆಗಲಿ ನಾವು ಯಾವುದೇ ರೀತಿಯಲ್ಲಿಯೂ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಎಫ್‌ಎಫ್‌ಐ ಅಧ್ಯಕ್ಷ ಸಂತೋಷ್‌ ಕುಮಾರ್‌ ಜೈನ್‌ ಹೇಳಿದರು.

(ಇನ್ಫೋ ವಾರ್ತೆ)


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada