For Quick Alerts
  ALLOW NOTIFICATIONS  
  For Daily Alerts

  ಕನ್ನಡ ಚಿತ್ರೋದ್ಯಮ ಬಿಕ್ಕಟ್ಟು ನಿವಾರಣೆಯ ‘ಸಿದ್ಧ’ ಸೂತ್ರ ಅಂಗೀಕಾರ

  By Staff
  |

  ಬೆಂಗಳೂರು : ನವರಾತ್ರಿ ಮುನ್ನವೇ ರಾಜ್ಯದಲ್ಲಿನ ಬಿಕ್ಕಟ್ಟುಗಳು ದೂರವಾಗುತ್ತಿವೆ. ವರುಣನ ದಯೆಯಿಂದ ರೈತರು ಭರವಸೆಯಿಂದ ಬದುಕುತ್ತಿದ್ದಾರೆ. ವೀರಪ್ಪನ್‌ ಕರಾಳ ಅಧ್ಯಾಯ ಮುಕ್ತಾಯವಾಗಿದೆ. ಉತ್ತರ ಕರ್ನಾಟಕದವರ ಗೋಳು ಅರ್ಧ ಮುಗಿದಿದೆ. ಕನ್ನಡ ಚಿತ್ರೋದ್ಯಮದಲ್ಲಿನ ಗೊಂದಲದ ವಾತಾವರಣ ಸಹಾ ತಿಳಿಯಾಗಿದೆ.

  ಪರಭಾಷಾ ಚಿತ್ರಗಳ ನಿರ್ಬಂಧವನ್ನು ಮೂರು ವಾರಗಳಿಗೆ ಇಳಿಸುವುದು, ಈ ಚಿತ್ರಗಳ ಆರು ಪ್ರಿಂಟ್‌ಗಳ ಪ್ರದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸುವ ಸೂತ್ರದ ಪರಿಣಾಮ ಕನ್ನಡ ಚಿತ್ರೋದ್ಯಮದಲ್ಲಿನ ಬಿಕ್ಕಟ್ಟು ತಕ್ಷಣಕ್ಕೆ ಶಮನಗೊಂಡಿದೆ.

  ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ(ಅಕ್ಟೋಬರ್‌ 20)ದಂದು ನಡೆದ ಉನ್ನತಾಧಿಕಾರದ ಸಮಿತಿ ಸಭೆಯಲ್ಲಿ, ಈ ಸೂತ್ರವನ್ನು ಪ್ರಾಯೋಗಿಕವಾಗಿ ಒಂದು ವರ್ಷಗಳ ಕಾಲ ಅನುಸರಿಸಲು ಚಿತ್ರೋದ್ಯಮದ ಮೂರು ವಲಯಗಳು ಒಪ್ಪಿವೆ. ಪ್ರದರ್ಶಕರು ಹಾಗೂ ನಿರ್ಮಾಪಕರ ನಡುವೆ ಹಗ್ಗಜಗ್ಗಾಟ ನಡೆದು, ಕೆಲವು ರಹಸ್ಯ ಮಾತುಕತೆಗಳ ನಂತರ ಈ ಬಗೆಗೆ ಸಹಮತ ಮೂಡಿತು.

  ಸುಪ್ರಿಂಕೋರ್ಟ್‌ ಮೆಟ್ಟಿಲು ಹತ್ತಿರುವ ಶಂಕರ್‌ದಾದಾ ಎಂಬಿಬಿಎಸ್‌ ಚಿತ್ರಕ್ಕೆ ವಿನಾಯಿತಿ ನೀಡಲು ಸಭೆ ನಿರ್ಧರಿಸಿತು.

  ಸಭೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯಮಂಡಳಿ ಅಧ್ಯಕ್ಷ ಎಚ್‌.ಡಿ.ಗಂಗರಾಜು, ಪಾರ್ವತಮ್ಮ ರಾಜ್‌ಕುಮಾರ್‌, ಅಂಬರೀಷ್‌, ಬಸಂತ್‌ಕುಮಾರ್‌ ಪಾಟೀಲ್‌, ಓದುಗೌಡರ್‌, ರಾಮು, ಉಪೇಂದ್ರ, ಪರಭಾಷಾ ಚಿತ್ರಗಳ ವಿತರಕರು ಸೇರಿದಂತೆ ಚಿತ್ರೋದ್ಯಮದ ಗಣ್ಯರು ಭಾಗವಹಿಸಿದ್ದರು.

  (ಇನ್ಫೋ ವಾರ್ತೆ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X