»   » ಅಕ್ಕನ ಮಗ ಯೋಗೀಶನಿಗೆ ವಿಜಯ್ ಗೂಸಾ

ಅಕ್ಕನ ಮಗ ಯೋಗೀಶನಿಗೆ ವಿಜಯ್ ಗೂಸಾ

Subscribe to Filmibeat Kannada
ನಡೆದದ್ದಿಷ್ಟು : ದುನಿಯಾ ವಿಜಯ್ ಅವರ ಅಕ್ಕನ ಮಗ ಯೋಗೀಶನ ಖಾಸಗಿ ಕಾರ್ಯಕ್ರಮ. ಸಂಬಂಧಿಕ ವಿಜಯ್ ಕೂಡ ಅಲ್ಲಿದ್ದ. ಈ ವರ್ಷ ವಿಜಯ್ ಎರಡು ಚಿತ್ರಗಳು ತೋಪಾಗಿವೆ. ಯೋಗೀಶನ ನಂದ ನಂದಿತ ಸೂಪರ್ ಹಿಟ್. ಅವನೀಗ ಇಪ್ಪತ್ತೈದು ಲಕ್ಷ ಕೇಳುವ ಮಟ್ಟಕ್ಕೆ ಬೆಳೆದಿದ್ದಾನೆ. ಮೊದಲ ಚಿತ್ರದ ಯಶಸ್ಸು ಅಪ್ಪ-ಅಮ್ಮನ ಪ್ರೀತಿಯನ್ನು ಹೆಚ್ಚಿಸಿದೆ. ಕೇಳಿದ ಕಾರು ಕೊಡಿಸಿದ್ದಾರೆ. ಪಿಯೂಸಿ ಪೂರೈಸದೆಯೂ ಬೇಗ ಇಷ್ಟೊಂದು ಶ್ರೀಮಂತಿಕೆ ಸಿಗುತ್ತಲ್ಲ ಅಂತ ಯೋಗೀಶ ಥ್ರಿಲ್ ಆಗಿರಲಿಕ್ಕೂ ಸಾಕು.
Yogish
ಈ ಎಲ್ಲಾ ಬೆಳವಣಿಗೆಯಿಂದ ಯೋಗೀಶ, ವಿಜಯ್ ಕಡೆ ಏನೋ ಒಂಥರಾ ನೋಡಿದ್ದಾನೆ. ವಿಜಯ್‌ಗೆ ಅವನು ನಾನು ಹೆಂಗೆ ಬೆಳೆದೆ ನೋಡ್ಲಾ ಅಂತ ಅಣಕಿಸುವಂತೆ ಗುರಾಯಿಸುತ್ತಿದ್ದಾನೆ ಅನ್ನಿಸಿದೆ. ವಿಜಯ್ ದುನಿಯಾ ಸ್ಟೈಲಲ್ಲೇ ರ್‍ಯಾಂಡಮ್ ಆಗಿ ಯೋಗಿಗೆ ಮಡಗಿದ್ದಾನೆ. ಒದೆ ಬಿದ್ದ ಜಾಗಗಳಲ್ಲಿ ಇನ್ನೂ ಪೂರ್ತಿ ಊತ ಇಳಿದಿಲ್ಲವಾದರೂ ಯೋಗೀಶ ಮೊನ್ನೆ ತಾನೆ ಸ್ವಿಟ್ಜರ್‍ಲೆಂಡಿಗೆ ಹೋಗಿ ಬಂದಿದ್ದಾನೆ.

ಸಿನಿಮಾ ನಟರು ನಿಜ ಬದುಕಿನಲ್ಲೂ ಹೇಗೆ ಹೊಡಿ-ಬಡಿ ಅಂತಾರೆ ಎಂಬುದಕ್ಕೆ ಈ ಘಟನೆ ಇನ್ನೊಂದು ಸಾಕ್ಷಿಯಷ್ಟೆ. ಮದುವೆ ಗೊತ್ತಾಗಿದ್ದ ಹುಡುಗನಿಗೆ ಗುಂಡಿಕ್ಕಿದ ಗೋವರ್ಧನ ಮೂರ್ತಿ ತರಹದವರೂ ಇದ್ದಾರಲ್ಲ!

'ಸ್ಲಂ ಬಾಲ'ನಿಗೆ ಸೆನ್ಸಾರ್ ನಿಂದ ಯು/ಎ ಪ್ರಮಾಣ ಪತ್ರ

ಅಂಬಾರಿ ಮೇಲೇರಿದ ಲೂಸ್ ಮಾದ ಯೋಗೀಶ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada