ಹೈಕೋರ್ಟಲ್ಲಾದರೂ ಸಿಗುವುದೆ ದರ್ಶನ್ ಗೆ ಜಾಮೀನು?

By Prasad

Will Darshan get bail in HC?
ವಿಚಾರಣಾಧೀನ ಕೈದಿಯಾಗಿ ಪರಪ್ಪನ ಅಗ್ರಹಾರ ಸೇರಿರುವ ಕನ್ನಡ ನಟ ದರ್ಶನ್ ಅವರ ಜಾಮೀನು ವಿಚಾರಣೆ ಗುರುವಾರ (ಸೆ.22)ರಂದು ಕರ್ನಾಟಕ ಹೈಕೋರ್ಟ್ ನಲ್ಲಿ ನ್ಯಾಯಮೂರ್ತಿ ಬಿವಿ ಪಿಂಟೋ ಅವರ ಎದುರಿಗೆ ನಡೆಯಲಿದೆ.

1ನೇ ಎಸಿಎಂಎಂ ನ್ಯಾಯಾಲಯ ಮತ್ತು ಪ್ರಿನ್ಸಿಪಾಲ್ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದಿಂದ ಜಾಮೀನು ತಿರಸ್ಕೃತರಾಗಿರುವ ದರ್ಶನ್ ಅವರಿಗೆ ಇದು ಕಡೆಯ ಆಶಾಕಿರಣ. ಕೈದಿ ನಂ.8993 ಆಗಿ ಜೈಲು ಸೇರಿರುವ ದರ್ಶನ್ ಅವರ ನ್ಯಾಯಾಂಗ ಬಂಧನವನ್ನು ಅ.4ರವರೆಗೆ ವಿಸ್ತರಿಸಲಾಗಿದೆ.

ಪತ್ನಿ ವಿಜಯಲಕ್ಷ್ಮಿ ಮತ್ತು ಮಗ ವಿಜೇಶ್ ಮೇಲೆ ಹಲ್ಲೆ ಮಾಡಿ, ಕೊಲೆ ಬೆದರಿಕೆ ಒಡ್ಡಿ ಸೆ.9ರಂದು ಬಂಧಿತರಾಗಿದ್ದ ದರ್ಶನ್ 12 ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನ ರಾಗಿಮುದ್ದೆಯನ್ನು ತಪ್ಪಿಸಿಕೊಂಡು ಆಸ್ಪತ್ರೆ ಸೇರಿದ್ದರು. ಜೈಲು ಸೇರುತ್ತಿದ್ದಂತೆ ಅವರಲ್ಲಿ ಕಾಮಾಲೆ ರೋಗ ಕಾಣಿಸಿಕೊಂಡಿತ್ತು.

ಹೈಕೋರ್ಟ್ ನಲ್ಲಾದರೂ ತಮ್ಮ ನೆಚ್ಚಿನ ನಟ ದರ್ಶನ್ ಗೆ ಜಾಮೀನು ಸಿಗುವುದೆಂದು ಸಹಸ್ರಾರು ಅಭಿಮಾನಿಗಳು ಕಾದುಕುಳಿತಿದ್ದಾರೆ. ಅನೇಕರು ದೇವರಿಗೆ ಪೂಜೆ ಮಾಡಿಸುತ್ತಿದ್ದರೆ, ಕೆಲವರು ತಲೆ ಬೋಳಿಸಿಕೊಂಡು 'ಬಾಸ್' ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. [ದರ್ಶನ್ ಕರ್ಮಕಾಂಡ ಕುರಿತ ಎಲ್ಲಾ ಲೇಖನಗಳು]

More from Filmibeat

English summary
Kannada actor Darshan's bail plea will come for hearing in Karnataka high court on September 22 before Jusitce VB Pinto. Darshan has been put in Parappana Agrahara jail for assaulting his wife Vijayalakshmi.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X