ವಿಚ್ಛೇದನಕ್ಕೆ ಮುಂದಾದ ಮನಿಶಾ ಕೋಯಿರಾಲ

By Rajendra

ಮದುವೆಯಾಗಿ ಇನ್ನೂ ಆರು ತಿಂಗಳು ಕಳೆದಿಲ್ಲ ಆಗಲೆ ಮನಿಶಾ ಕೋಯಿರಾಲ ಸೋಡಾ ಚೀಟಿ ಕೊಡಲು ಮುಂದಾಗಿದ್ದಾರೆ. ಈ ಸಮಾಚಾರವನ್ನು ಸ್ವತಃ ಮನಿಶಾ ಕೋಯಿರಾಲ ಫೇಸ್ ಬುಕ್‌ನಲ್ಲಿ ಹಾಕಿ ಢಾಣಾ ಡಂಗುರ ಸಾರಿದ್ದಾರೆ. ಬಳಿಕ ತತ್ ಕ್ಷಣ ಎಚ್ಚೆತ್ತುಕೊಂಡಿರುವ ಆಕೆ ಫೇಸ್ ಬುಕ್‌ನಲ್ಲಿ ಸೋಡಾ ಚೀಟಿ ವಿಚಾರವನ್ನು ಡಿಲೀಟ್ ಮಾಡಿದ್ದಾರೆ.

"ನಾನು ವಿವಾಹ ವಿಚ್ಛೇದನ ನೀಡಲು ಬಯಸಿದ್ದೇನೆ. ನನ್ನ ಈ ನಿರ್ಧಾರಕ್ಕೆ ತಂದೆತಾಯಿ ಯಾವುದೇ ವಿರೋಧ ವ್ಯಕಪಡಿಸುವುದಿಲ್ಲ ಎಂಬ ವಿಶ್ವಾಸವಿದೆ" ಎಂದು ಮನಿಶಾ ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದರು. ಆಕೆ ಫೇಸ್‌ಬುಕ್‌ನಲ್ಲಿ ಹೀಗೆ ಬರೆದದ್ದೇ ತಡ ಕೆಲವೇ ಕ್ಷಣಗಳಲ್ಲಿ ಆಕೆಯ ಲಕ್ಷಾಂತರ ಅಭಿಮಾನಿಗಳಿಗೆ ಅದು ತಲುಪಿತ್ತು.

ಈ ಸುದ್ದಿ ಕ್ಷಿಪ್ರಗತಿಯಲ್ಲಿ ಹರಡಿದ್ದೇ ತಡ ಎಚ್ಚೆತ್ತುಕೊಂಡ ಆಕೆ ಕೂಡಲೆ ಡಿಲೀಟ್ ಮಾಡಿದ್ದಾರೆ. " ಅಯ್ಯೋ ದೇವರೇ ಏನಾಯ್ತು" ಎಂದು ಆಕೆಯ, ಸ್ನೇಹಿತರು, ಬಂಧು ಬಳಗದಿಂದ ಫೋನ್ ಕರೆಗಳು ಬರಲಾರಂಭಿಸಿದವು. ಕೆಲವರು ದುಡುಕಬೇಡ ಎಂದು ಎಚ್ಚರಿಸಿದರೆ ಮತ್ತೆ ಕೆಲವರು ನಿನ್ನಿಷ್ಟ ಎಂದಿದ್ದರು. ಕೆಲವರು "ಯಾವುದೇ ನಿರ್ಧಾರ ತೆಗೆದುಕೋ ನಿನ್ನೊಂದಿಗೆ ನಾವಿದ್ದೇವೆ" ಎಂದು ಬೆನ್ನುತಟ್ಟಿದ್ದರು.

ಒಟ್ಟಿನಲ್ಲಿ ಮನಿಶಾ ಕೋಯಿರಾಯ ಯಾಕೆ ಹೀಗೆ ಮಾಡಿದರು ಎಂಬುದು ನಿಗೂಢವಾಗಿದೆ. ಮನೀಷಾ ಸಂಸಾರ ಹಾಲು ಜೇನು ಒಂದಾದ ಹಾಗೆ ನನ್ನ ನಿನ್ನ ಜೀವನ ಎಂಬಂತಿದೆ. ಎಲ್ಲೋ ಸಣ್ಣಪುಟ್ಟ ಜಗಳ ನಡೆದಿರಬಹುದು, ಅಷ್ಟಕ್ಕೇ ಆಕೆ ಈ ನಿರ್ಧಾರಕ್ಕೆ ಬರುವುದು ಸರಿಯಲ್ಲ. ಮನಿಶಾ ಕೊಂಚ ಎಮೋಷನಲ್ ಎಂದಿದ್ದಾರೆ ಆಕೆಯ ಸ್ನೇಹಿತೆಯೊಬ್ಬರು.

More from Filmibeat

English summary
Actress Manisha Koirala posts her thoughts on wanting a divorce five months into her marriage on Facebook, then immediately deletes it. Says she wrote it during a moment and that it was silly. She married to Samrat Dahal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X