ಜೋಗಯ್ಯನನ್ನು ಒಲ್ಲೆ ಎಂದ ನಯನತಾರಾ!

By Rajendra

'ಜೋಗಯ್ಯ' ಚಿತ್ರದ ನಾಯಕಿ ಯಾರು ಎಂಬ ಪ್ರಶ್ನೆಗೆ ಇನ್ನೂ ಸ್ಪಷ್ಟವಾದಉತ್ತರ ಸಿಕ್ಕಿಲ್ಲ. ಚಿತ್ರದಲ್ಲಿ ಒಬ್ಬಳೆ ನಾಯಕಿಯೇ ಅಥವಾ ಇನ್ನೂ ಇದ್ದಾರೆಯೇ ಎಂಬ ಪ್ರಶ್ನೆಗಳು ಪ್ರಶ್ನೆಗಳಾಗಿಯೇ ಉಳಿದಿವೆ. ಚಿತ್ರದ ನಿರ್ದೇಶಕ ಪ್ರೇಮ್ ಗುಟ್ಟು ಬಿಟ್ಟು ಕೊಡುತ್ತಿಲ್ಲ. ಜೋಗಯ್ಯ ಚಿತ್ರದ ನಾಯಕಿಯಾಗಿ ಅಮೀಷಾ ಪಟೇಲ್ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಚಾಲ್ತಿಯಲ್ಲಿತ್ತು. ಇದಕ್ಕೂ ಮುನ್ನ ಪ್ರಿಯಾಂಕಾ ಚೋಪ್ರಾ, ವಿದ್ಯಾಬಾಲನ್ ಹೆಸರುಗಳು ಕೇಳಿಬಂದಿದ್ದವು.

ಹೊಸ ಸುದ್ದಿ ಏನೆಂದರೆ ದಕ್ಷಿಣದ ಖ್ಯಾತ ತಾರೆ ನಯನತಾರಾ ಅವರನ್ನು ಸಂಪರ್ಕಿಸಿರುವುದು. ಉಪೇಂದ್ರ ಜೊತೆ 'ಸೂಪರ್' ಚಿತ್ರದಲ್ಲಿ ನಟಿಸುತ್ತಿರುವ ನಯನತಾರಾ 'ಜೋಗಯ್ಯ' ಚಿತ್ರವನ್ನು ಒಲ್ಲೆ ಎಂದಿದ್ದಾರೆ. ಇದಕ್ಕೆ ಕಾರಣ ಪ್ರಭುದೇವ ಎನ್ನಲಾಗಿದೆ. ಜೋಗಯ್ಯ ಚಿತ್ರದಲ್ಲಿ ನಟಿಸದಿರುವಂತೆ ನಯನತಾರಾಗೆ ಪ್ರಭುದೇವಾ ಆಜ್ಞಾಪಿಸಿದ್ದಾರೆ ಎನ್ನುತ್ತವೆ ಮೂಲಗಳು.

ನಯನತಾರಾಗೆ ಒಂದು ಕೋಟಿ ಸಂಭಾವನೆ ಕೊಡುವುದಾಗಿಯೂ ಹೇಳಲಾಗಿತ್ತು. ವಿಷಯ ಹೀಗಿದ್ದರೂ 'ಜೋಗಯ್ಯ'ನನ್ನು ನಯನತಾರಾ ತಿರಸ್ಕರಿಸಲು ಕಾರಣವೇನು ಎಂಬುದು ನಿಗೂಢವಾಗಿದೆ. ಒಟ್ಟಿನಲ್ಲಿ ಪ್ರಭುದೇವ ಸೂಚನೆ ಮೇರೆಗೆ ನಯನತಾರಾ ಹಿಂದಡಿ ಇಟ್ಟಿದ್ದಾರೆ. ಈಗಾಗಲೆ ಶೀರ್ಷಿಕೆ ವಿವಾದದಲ್ಲಿರುವ ಜೋಗಯ್ಯನಿಗೆ ಜೋಗಿನಿ ಹುಡುಕುವುದು ಕಷ್ಟಕರವಾಗಿ ಪರಿಣಮಿಸಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X