ಬೆಂಗಳೂರು ಹುಡುಗನ ಜೊತೆ ಪೂಜಾ ಗಾಂಧಿ ಮದುವೆ

By Rajendra

"ನಟಿ ಪೂಜಾಗಾಂಧಿ ಶೀಘ್ರದಲ್ಲೆ ಹಸೆಮಣೆ ಏರಲಿದ್ದಾರೆ. ಅದರಲ್ಲೂ ಕನ್ನಡಿಗನ ಜೊತೆ ದಾಂಪತ್ಯಗೀತೆ ಹಾಡಲಿದ್ದಾರೆ ಎಂಬ ಸುದ್ದಿ ಸ್ಫೋಟಗೊಂಡಿತ್ತು. ಆದರೆ ಈ ಸುದ್ದಿಯನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ ಪೂಜಾಗಾಂಧಿ. ತಾವು ಇನ್ನೂ ಮೂರು ವರ್ಷ ಮದುವೆ ಆಗಲ್ಲ. ಆದರೆ ಕೈಹಿಡಿಯುವುದು ಮಾತ್ರ ಬೆಂಗಳೂರು ಹುಡುಗನನ್ನೇ ಎಂದಿದ್ದಾರೆ.

ಪೂಜಾಗಾಂಧಿ ಮದುವೆ ಸುದ್ದಿ ಗಾಂಧಿನಗರದಲ್ಲಿ ಸ್ಫೋಟವಾಗಿದ್ದೇ ತಡ, ಆಕೆಯ ಗೆಳೆಯ ಗೆಳತಿಯರು ಒಂದೇ ಸಮನೆ ಫೋನ್ ಮಾಡಿ. ನಮಗೆ ಹೇಳದೆ ಕೇಳದೆ ಮದುವೆ ಆಗ್ತಿದ್ದೀಯಾ. ಯಾವಾಗ ಮದುವೆ ಎಂದು ಕೇಳುತ್ತಿದ್ದಾರಂತೆ. ಅವರು ಹಾಗೆ ಕೇಳಿದ್ದೇ ತಡ ಪೂಜಾಗಾಂಧಿಗೆ ಶಾಕ್ ಆಯಿತಂತೆ. ಇದೆಲ್ಲಾ ಯಾರೋ ಹಬ್ಬಿಸಿದ ವದಂತಿ ಎಂದು ಹೇಳಿ ಅವರ ಬಾಯಿ ಮುಚ್ಚಿಸಬೇಕಾದರೆ ಸಾಕಪ್ಪಾ ಸಾಕು ಅನ್ನಿಸಿಬಿಟ್ಟ್ಟಿತಂತೆ.

ಸದ್ಯಕ್ಕೆ ನನ್ನ ಕೈಯಲ್ಲಿರುವ ಚಿತ್ರಗಳ ಕಡೆಗೆ ಗಮನಹರಿಸಿದ್ದೇನೆ. ಇನ್ನೂ ಮೂರು ವರ್ಷ ಮದುವೆ ಆಗಲ್ಲ. ಕೈಹಿಡಿಯುವುದಾದರೆ ಬೆಂಗಳೂರು ಹುಡುಗನನ್ನೇ ಕೈಹಿಡಿಯುತ್ತೇನೆ. ಮದುವೆ ಬಳಿಕ ಇಲ್ಲೇ ಸೆಟ್ಲ್ ಆಗುತ್ತೇನೆ. ಆದರೆ ಲವ್ ಮ್ಯಾರೇಜ್ ಅಂತೂ ಆಗಲ್ಲ. ಆರೇಂಜ್ ಮ್ಯಾರೇಜ್‌ಗೆ ನನ್ನ ಓಟು ಎಂದಿದ್ದಾರೆ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Actress Pooja Gandhi has slammed reports about her marriage plans stating that the news is just a rumours. The Kannada star reveals that she is not tying knot for another three years. She wants to marry a Bangalore boy and prefers arranged marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X