ಸೈಫ್ ಆಲಿ ಖಾನ್, ಕರೀನಾ ಕಪೂರ್ ಮದುವೆ ಢಮಾರ್
ತಾಜ್ ಹೋಟೆಲ್‌ನಲ್ಲಿ ವ್ಯಕ್ತಿಯೊಬ್ಬರ ಮೇಲೆ ಕೈ ಮಾಡಿ ಕೈ ಸುಟ್ಟಿಕೊಂಡಿರುವ ಸೈಫ್ ಆಲಿ ಖಾನ್‌ರನ್ನು ಪೊಲೀಸರು ಬಂಧಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸೈಫ್ ಮತ್ತು ಕರೀನಾ ಕಪೂರ್ ಮದುವೆಗೆ ಭಾರಿ ವಿಘ್ನ ಎದುರಾದಂತಾಗಿದೆ. ಇವರಿಬ್ಬರ ಮದುವೆ ಮುಂದೂಡುವ ಸಾಧ್ಯತೆಗಳಿವೆ.
ಬಾಲಿವುಡ್‌ನ ಬಹು ಚರ್ಚಿತ ಪ್ರೇಮ ಜೋಡಿ ಸೈಫ್ ಅಲಿ ಖಾನ್ ಹಾಗೂ ಕರೀನಾ ಕಪೂರ್ ಮದುವೆಗೆ ದಿನಾಂಕ ಕೂಡ ಪಕ್ಕಾ ಆಗಿತ್ತು. ಏಪ್ರಿಲ್ ಮೊದಲ ವಾರದಲ್ಲಿ ಇಬ್ಬರು ಹಸೆಮಣೆ ಏರಲು ಸಿದ್ಧತೆ ನಡೆಸಿದ್ದರು. ಆದರೆ ಅಷ್ಟರಲ್ಲಾಗಲೇ ಸೈಫ್ ಎಡವಟ್ಟು ಮಾಡಿಕೊಂಡಿದ್ದಾರೆ.
ಬಹುನಿರೀಕ್ಷಿತ 'ಏಜೆಂಟ್ ವಿನೋದ್' ಚಿತ್ರದ ಬಿಡುಗಡೆಗಾಗಿ ಇಬ್ಬರು ಜಾತಕ ಪಕ್ಷಿಗಳಂತೆ ಕಾದಿದ್ದರು. ಫೆಬ್ರವರಿಯಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಕೊಂಚ ತಡವಾಗಿ ಮಾರ್ಚ್ 23ರ ವೇಳೆಗೆ ಬೆಳ್ಳಿತೆರೆಗೆ ಅಪ್ಪಳಿಸುವ ಸಾಧ್ಯತೆಯಿದೆ. ಮದುವೆ ನಂತರ ಮಧುಚಂದ್ರಕ್ಕೆ ಸೂಕ್ತ ಸ್ಥಳ ಆಯ್ಕೆ ಹುಡುಕಾಟದಲ್ಲೂ ಇತ್ತು ಈ ಜೋಡಿ. (ಒನ್‍ಇಂಡಿಯಾ ಕನ್ನಡ)
More from Filmibeat
English summary
Actress Kareena Kapoor and Saif Ali Khan marriage is in trouble, because a case under section 325 of the IPC has been registered against Saif Ali Khan. has been booked for allegedly assaulting a man after a heated argument with Iqbal Sharma.


Click it and Unblock the Notifications











