For Quick Alerts
  ALLOW NOTIFICATIONS  
  For Daily Alerts

  'ಪಾರ್ಟಿ ಅನಿಮಲ್' ಶ್ರಿಯಾ ನ್ಯೂಇಯರ್ ಪಾರ್ಟಿ ಯಾರ ಜೊತೆ!?

  By Srinath
  |

  2011ರ ವಿಕೃತಿ ನಾಮ ಸಂವತ್ಸರದ ವಿಕೃತಿಗಳೆಲ್ಲ ಹೋಗಿ, ಖರ ನಾಮ ಸಂವತ್ಸರಕ್ಕೆ ಶ್ರೀಕರ ಹಾಕುತ್ತಿದ್ದೇವೆ. ಈ ಸಂದರ್ಭದಲ್ಲಿ ಸದಾ ಕ್ಯಾಮರಾ ಜತೆ ರೊಮ್ಯಾನ್ಸ್ ಮಾಡುವ ಸಿನಿಮಾ ಮಂದಿ ನಿಜ ಜೀವನದಲ್ಲಿ ಹೊಸ ವರ್ಷದ ಪಾರ್ಟಿ ಹೇಗೆ ಆಚರಿಸುತ್ತಾರೆ, ನೋಡೋಣ.

  ಬಾಲಿವುಡ್ ಮಂದಿಯಂತೂ ನ್ಯೂ ಇಯರ್ ಪಾರ್ಟಿಯನ್ನು ಸಖತ್ ಆಗಿ, ಆಡಂಬರದಿಂದ ಆಚರಿಸುವುದು ವಾಡಿಕೆ. ನಮ್ಮ ದಕ್ಷಿಣದ ಬ್ಯೂಟಿ ಶ್ರಿಯಾ ಸರನ್ ಹೇಗೆ!? 'ಪಾರ್ಟಿ ಅನಿಮಲ್' ಅಂತಲೇ ಗುರುತಿಸಿಕೊಂಡಿರುವ ಶ್ರಿಯಾ ಯಾರ ಜತೆ ಹೊಸ ವರ್ಷದ ಪಾರ್ಟಿ ಆಚರಿಸುತ್ತಾರೆ?

  'ಇಡೀ ವರ್ಷ ಶೂಟಿಂಗ್ ಅದೂ ಇದೂ ಅಂತ ಇದ್ದದ್ದೇ. ಆದರೆ ಹೊಸ ವರ್ಷ ಅಡಿಯಿಡುವ ಮುನ್ನ, ಕ್ರಿಸ್ ಮಸ್ ವೇಳೆಗೆ ಫುಲ್ ರಿಲ್ಯಾಕ್ಸ್ ಮೂಡಿಗೆ ಜಾರಿಕೊಳ್ಳುತ್ತೇನೆ. ಆಗ ಏನು ಮಾಡುತ್ತೇನೆ ಗೊತ್ತಾ?' ಎನ್ನುತ್ತಾ ಶ್ರಿಯಾ ತಮ್ಮ ಕನಸನ್ನು ಬಿಚ್ಚಿಡುತ್ತಾರೆ.

  'ಜಸ್ಟ್ ನನ್ನ ಫ್ರೆಂಡ್ಸ್ ಮತ್ತು ಕ್ಲೋಸ್ ರಿಲೇಟಿವ್ಸ್ ಗೆ ಮೊರೆ ಹೋಗುತ್ತೇನೆ. ಛಲೋ ಪಾರ್ಟಿ ಹೋ ಜಾಯೆ ಅನ್ನುತ್ತೇನೆ. ಸಖತ್ ಪಾರ್ಟಿಗೆ ಪ್ಲಾನ್ ಮಾಡುವ ಹೊಣೆಗಾರಿಕೆಯನ್ನು ಅವರಿಗೇ ಬಿಟ್ಟುಬಿಡುತ್ತೇನೆ. ಕಳೆದ ವರ್ಷ ಗೋವಾಗೆ ಹೋಗಿದ್ದೆವು. ಈ ಸಲಿ ನೋಡ್ಬೇಕು ಎಲ್ಲಿಗೆ ಕರ್ಕೊಂಡು ಹೋಗ್ತಾರೋ! ಈ ದಕ್ಷಿಣದವರೂ ಅಂದ್ರೇನೆ ಹಾಗೆ ಅಲ್ವಾ!' ಅಂತ ಕಣ್ಣು ಮಿಟುಕಿಸುತ್ತಾಳೆ ಶ್ರಿಯಾ ಬ್ಯೂಟಿ.

  English summary
  New Year bashes spilling in. For sultry southern beauty, Shriya Saran, this is solely family and friends’ time. “Throughout the year, I am chasing shooting schedules and travelling. It’s only around New Year and Christmas that I finally take a breather and allot that time exclusively to catch up with my friends and family.” she says.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X