»   » ಏಕಾಂಗಿ ಬಕ್ಕಾಬೋರಲು: ಆನಂದಿಸಿದ ಜಮೀನ್ದಾರ್ರು!

ಏಕಾಂಗಿ ಬಕ್ಕಾಬೋರಲು: ಆನಂದಿಸಿದ ಜಮೀನ್ದಾರ್ರು!

Posted By:
Subscribe to Filmibeat Kannada

ಮೀಸೆ ಪುರುಷ ಲಕ್ಷಣ!
ಮೀಸೆ ನಮ್ಮ ಸಂಸ್ಕೃತಿಯ ಪ್ರತೀಕ!
- ಮೀಸೆ ಮಹಾತ್ಮೆಯನ್ನು ವಿಷ್ಣು ವರ್ಧನ್‌ ಬಣ್ಣಿಸಿದ್ದು ಹೀಗೆ. ಉದಯ ಟೀವಿಯ ಲೈವ್‌ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ವಿಷ್ಣು ಮೀಸೆಯ ಕುರಿತು ಪುಟ್ಟ ಭಾಷಣ ಬಿಗಿದರು ; ಮೀಸೆ ಚಿತ್ರಗಳಲ್ಲಿ ತಾವು ನಟಿಸುವುದನ್ನು ಸಮರ್ಥಿಸಿಕೊಂಡರು.

ವಿಷ್ಣು ಈ ಮಟ್ಟಕ್ಕೆ ಇಳಿಯಬಾರದಿತ್ತು ?

ಅದ್ಯಾರೋ ಒಬ್ಬ ಅಭಿಮಾನಿ ನೇರವಾಗಿ ಮೀಸೆ ಸಂಸ್ಕೃತಿಯನ್ನು ವಿಷ್ಣು ಪೋಷಿಸುತ್ತಿರುವ ಕುರಿತು ಪ್ರಶ್ನೆಯೆತ್ತಿದ. ಮೀಸೆ ಸಂಸ್ಕೃತಿಗೆ ಕೊನೆ ಯಾವಾಗ ಎಂದು ಕೆಣಕಿದ. ಅವರೆಗೂ ಸುಮ್ಮನಿದ್ದ ವಿಷ್ಣು ಮೀಸೆ ಕುರಿತು ಬಣ್ಣಿಸತೊಡಗಿದ್ದು , ತಮಿಳು ಸಂಸ್ಕೃತಿಯನ್ನು ಕನ್ನಡ ಸಂಸ್ಕೃತಿಯೆಂದು ಕಥೆ ಕಟ್ಟತೊಡಗಿದ್ದು ಆಗಲೇ.

ಛೇ, ವಿಷ್ಣು ಈ ರೀತಿಯೂ ಮಾತನಾಡುತ್ತಾರಾ? ಅಭಿಮಾನಿಗಳು ಮೂಗಿನ ಮೇಲೆ ಬೆರಳಿಡುತ್ತಿದ್ದಂತೆಯೇ, ವಿಷ್ಣುವರ್ಧನ್‌ ಮತ್ತೊಂದು ಮುಖ ತೆರೆದುಕೊಳ್ಳತೊಡಗಿತ್ತು . ವಿಷ್ಣು ಸಹನಟನೊಬ್ಬನ ಸೋಲನ್ನು ಆಸ್ವಾದಿಸತೊಡಗಿದ್ದರು.

ಫೋನ್‌ ಮಾಡಿದ್ದ ಅಂಧ ಅಭಿಮಾನಿಯಾಬ್ಬ ವಿಷ್ಣು ಅಭಿನಯದ ಜಮೀನ್ದಾರ್ರು ಚಿತ್ರವನ್ನು ಹಿಗ್ಗಾಮುಗ್ಗ ಹೊಗಳತೊಡಗಿ, ಚಿತ್ರದ ಬಗ್ಗೆ ಕಟು ವಿಮರ್ಶೆ ಬರೆದ ಪತ್ರಕರ್ತರನ್ನು ವಾಚಾಮಗೋಚರ ಬಯ್ಯತೊಡಗಿದ. ಅಷ್ಟಕ್ಕೇ ಮುಗಿದಿದ್ದರೆ ಚೆನ್ನಾಗಿತ್ತು . ಆದರೆ, ಆತ ರವಿಚಂದ್ರನ್‌ರ ಏಕಾಂಗಿ ಕುರಿತು ಟೀಕಿಸಲಾರಂಭಿಸಿದ. ಏಕಾಂಗಿ ಚಿತ್ರವನ್ನು ಒಂದು ಗಂಟೆಯೂ ನೋಡಲು ಸಾಧ್ಯವಾಗಲಿಲ್ಲ . ಆದರೆ, ಅದರ ಬಗ್ಗೆ ಪತ್ರಕರ್ತರು ಹಾಡಿ ಹೊಗಳಿದ್ದಾರೆ. ಮನೆ ಮಂದಿಯೆಲ್ಲ ಕೂತು ನೋಡುವಂಥ ಸದಭಿರುಚಿಯ ಜಮೀನ್ದಾರ್ರು ಚಿತ್ರವನ್ನು ತೆಗಳಿದ್ದಾರೆ ಎನ್ನುವುದು ಆತನ ಆಕ್ಷೇಪ.

ಕುರುಡು ಅಭಿಮಾನಿ ಏಕಾಂಗಿಯನ್ನು, ಪತ್ರಕರ್ತರನ್ನು ಬಯ್ಯತೊಡಗಿದರೆ ವಿಷ್ಣು ಅದನ್ನು ಆಸ್ವಾದಿಸತೊಡಗಿದರು. ಚಿತ್ರ ಚೆನ್ನಾಗಿದೆ ಎಂದು ಹೇಳಬೇಕಾದವರು ನಿಮ್ಮಂಥ ಅಭಿಮಾನಿಗಳೇ ಹೊರತು ಪತ್ರಕರ್ತರಲ್ಲ ಎನ್ನುವ ಧಾಟಿಯಲ್ಲಿ ವಿಷ್ಣು ಮಾತನಾಡತೊಡಗಿದರು. ಏಕಾಂಗಿ ಚೆನ್ನಾಗಿಲ್ಲ ಎಂದಾಗ ಮೀಸೆಯಡಿಯಲ್ಲೇ ನಕ್ಕರು. ಜಮೀನ್ದಾರ್ರು ಚೆನ್ನಾಗಿದೆ ಎಂದಾಗ ಬೆಟ್ಟಪ್ಪನ ಸ್ಟೈಲಲ್ಲಿ ಬೀಗಿದರು.

ಸಾಮಾನ್ಯವಾಗಿ ಕೆಣಕು ಪ್ರಶ್ನೆಗಳು ಬಂದಾಗ, ಅಂಥ ಕರೆಗಳನ್ನು ಮಧ್ಯದಲ್ಲಿಯೇ ತುಂಡರಿಸುವ ಅಥವಾ ಓದುಗರ ಮಾತಿನ ದಿಕ್ಕನ್ನು ಪ್ರಯತ್ನ ಪೂರ್ವಕವಾಗಿ ಬೇರೆಡೆ ತಿರುಗಿಸುವ ಪ್ರಯತ್ನಗಳನ್ನು ಕಾರ್ಯಕ್ರಮದ ನಿರೂಪಕಿ ಮಾಡುವುದು ಈ ಹಿಂದಿನ ಕಾರ್ಯಕ್ರಮಗಳಲ್ಲಿ ಮಾಮೂಲಾಗಿತ್ತು . ಆದರೆ, ಈ ಬಾರಿ ಹಾಗಾಗಲಿಲ್ಲ . ಅಂದರದು ಪೂರ್ವ ನಿಯೋಜಿತ ಕರೆಯೇ?
ಕನ್ನಡ ಸಿನಿಮಾ ಇಂಡಸ್ಟ್ರಿಯ ನಾಯಕ ಎಂದು ಬಿಂಬಿಸಲ್ಪಡುತ್ತಿರುವ ವಿಷ್ಣು ಈ ಮಟ್ಟಕ್ಕೆ ಇಳಿದರೆ ಹೇಗೆ?

ವಾರ್ತಾ ಸಂಚಯ
ಬಣ್ಣ ಬಣ್ಣದ ಲೋಕ ಬಣ್ಣಿಸಲು ಸಾಲದು ಈ ಸಾಲು...
ಜಮೀನ್ದಾರರ ಜನ್ಮರಹಸ್ಯವೂ, ಕರುಳು ಕತ್ತರಿಸುವ ಸತ್‌ಸಂಪ್ರದಾಯವೂ...

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada