ಅನುಷ್ಕಾ ತೆಲುಗು ಚಿತ್ರರಂಗಕ್ಕೆ ಸದ್ಯದಲ್ಲೇ ಗುಡ್ ಬೈ?

ದಿಢೀರ್ ಎಂದು ತೆಲುಗು ಚಿತ್ರರಂಗವನ್ನು ಬಿಡುವ ನಿರ್ಧಾರ ಕೈಗೊಂಡಿದ್ದಾರೆ ಅನುಷ್ಕಾ. ಅವರ ತೆಲುಗು ಅಭಿಮಾನಿಗಳಿಗಂತೂ ಇದನ್ನು ನಂಬಲೂ ಆಗುತ್ತಿಲ್ಲ. ಕಾರಣ ಅನುಷ್ಕಾ ಅಭುನಯ, ಮೈಮಾಟ ಕಾಲಿವುಡ್ ಅನ್ನು ಅಲ್ಲೋಲಕಲ್ಲೋಲ ಮಾಡಿದೆ. ಆದರೆ ಅನುಷ್ಕಾ ಈ ನಿರ್ಧಾರದ ಹಿಂದೆ ಬಲವಾದ ಕಾರಣವಿದೆ.
ಎರಡ್ಮೂರು ಬಾರಿ ಅನುಷ್ಕಾ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆದಿದೆ. ಆಗ ತೆಲುಗು ಚಿತ್ರೋದ್ಯಮ ತನ್ನ ಪರ ಮಾತನಾಡದೇ ತೆಪ್ಪಗೆ ಕುಳಿತಿದೆ. ಇನ್ನೊಂದು, ನಟ ನಾಗಾರ್ಜುನ ಫ್ಯಾಮಿಲಿಯೊಂದಿಗೆ ಆಕೆಯ ಹೆಸರು ಸುಖಾಸುಮ್ಮನೆ ಸೇರಿಕೊಂಡು ಸುದ್ದಿಯಾಗುತ್ತಿರುವುದು.
ಇದೀಗ ಮನೆಯನ್ನು ಚೆನ್ನೈಗೆ ಬದಲಾಯಿಸಿ ತಮಿಳು ಚಿತ್ರರಂಗದಲ್ಲಿ ಸೆಟ್ಲ್ ಆಗುವ ನಿರ್ಧಾರ ಅನುಷ್ಕಾರದು. ತಮಿಳು ಚಿತ್ರಗಳತ್ತ ತನ್ನ ಗಮನ ಕೇಂದ್ರೀಕರಿಸುತ್ತಿರುವ ಈಕೆ, ಸದ್ಯದಲ್ಲೇ ಹೈದ್ರಾಬಾದ್ ಸಹವಾಸ ಬಿಟ್ಟರೆ ಏನೂ ಆಶ್ಚರ್ಯವಿಲ್ಲ ಎನ್ನುತ್ತಿವೆ ಅನುಷ್ಕಾ ಆಪ್ತವರ್ಗ. (ಒನ್ ಇಂಡಿಯಾ ಕನ್ನಡ)
More from Filmibeat
English summary
Actress Anushka Shetty decided to to leave Hyderabad and wants Live in Chennai. She decided it because of some recent developments in Tollywood.


Click it and Unblock the Notifications











