twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡಿಗರ ಘರ್ಜನೆಗೆ ಬಾಲ ಮುದುಡಿಕೊಂಡ ಸಿಂಗಂ

    By Rajendra
    |
    <ul id="pagination-digg"><li class="next"><a href="/gossips/23-singham-controversy-karave-burnt-prakash-raj-effigy-aid0052.html">Next »</a></li></ul>

    ಕಡೆಗೂ ಕೆಚ್ಚೆದೆಯ ಕನ್ನಡಿಗರ ಆಕ್ರೋಶಕ್ಕೆ ಮಣಿದು ಬಾಲ ಮುದುಡಿದ ನಾಯಿಯಂತಾಗಿದೆ 'ಸಿಂಗಂ'. ಚಿತ್ರದಲ್ಲಿನ ಕನ್ನಡಿಗರ ಬಗೆಗಿನ ಅವಹೇಳನಕಾರಿ ಸಂಭಾಷಣೆಗೆ ಕತ್ತರಿ ಹಾಕಲಾಗಿದೆ. ಚಿತ್ರದಲ್ಲಿನ ಆಕ್ಷೇಪಾರ್ಹ ಸಂಭಾಷಣೆಯನ್ನು ಮ್ಯೂಟ್ ಮಾಡಿದ ಬಳಿಕ 'ಸಿಂಗಂ' ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.

    ರಾಜ್ಯದ ಉಳಿದ ಚಿತ್ರಮಂದಿರಗಳಲ್ಲೂ ಆಕ್ಷೇಪಾರ್ಹ ಸಂಭಾಷಣೆಗೆ ಕತ್ತರಿ ಹಾಕಬೇಕು. ಇಲ್ಲದಿದ್ದರೆ 'ಸಿಂಗಂ' ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಸಿದೆ. ರಾಜ್ಯದ ಉಳಿದಜಿಲ್ಲೆಗಳಲ್ಲೂ ಕರವೇ ಕಾರ್ಯಕರ್ತರು 'ಸಿಂಗಂ' ಚಿತ್ರವನ್ನು ವೀಕ್ಷಿಸಿ ಮುಂದಿನ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ.

    ಸಿಂಗಂ ಚಿತ್ರಕ್ಕೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ರಿಲಯನ್ಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ತಕ್ಷಣವೆ ಕ್ಷಮೆ ಯಾಚಿಸಿದೆ. ಕನ್ನಡಿಗರನ್ನು ನೋಯಿಸುವ ಉದ್ದೇಶ ಖಂಡಿತ ನಮಗಿಲ್ಲ. ಚಿತ್ರದಲ್ಲಿನ ಆಕ್ಷೇಪಾರ್ಹ ಸಂಭಾಷಣೆಗಳನ್ನು ತಕ್ಷಣ ಅಳಿಸಿಹಾಕುತ್ತೇವೆ. ವಿವಾದಾತ್ಮಕ ಸಂಭಾಷಣೆಗಳನ್ನು ಮ್ಯೂಟ್ ಮಾಡಿಸುತ್ತೇವೆ. ಶನಿವಾರದಿಂದ ನೆಗಟೀವ್ ಪ್ರದರ್ಶನದಲ್ಲಿ ಬದಲಾವಣೆಗಳಾಗುತ್ತವೆ ಎಂದಿದ್ದಾರೆ ರಿಲಯನ್ಸ್ ಸಮೂಹದ ಹಿರಿಯ ಉಪಾಧ್ಯಕ್ಷ ಎಸ್ ನರಸಿಂಹನ್ ಹಾಗೂ ವಕ್ತಾರ ಪ್ರಶಾಂತ್ ನಂಬರ್ಗಿ. (ದಟ್ಸ್‌ಕನ್ನಡ ಸಿನಿವಾರ್ತೆ)

    <ul id="pagination-digg"><li class="next"><a href="/gossips/23-singham-controversy-karave-burnt-prakash-raj-effigy-aid0052.html">Next »</a></li></ul>

    English summary
    Hindi movie Singham controversy has almost been solved. Karnataka Rakshana Vedike has solved the problem in the state. Karnataka Rakshana Vedike activists pulled down posters of the film and damaged several theatres in areas like Bidar, Hubli, Bagalkot, Raichur, Bijapur and other areas.
    Saturday, July 23, 2011, 17:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X