ಲವ್ಲಿ ಸ್ಟಾರ್ ಪ್ರೇಮ್ ಮೇಲೆ ಪತ್ನಿಗೆ ಏನೋ ಅನುಮಾನ!

By Rajendra

ತೆರೆಯ ಮೇಲೆ ಮಾಡುವುದೆಲ್ಲಾ ಕೇವಲ ನಟನೆಯಾದರೂ, ವೈಯಕ್ತಿಕ ಜೀವನದಲ್ಲೂ ಎಷ್ಟೆಲ್ಲ ಪರಿಣಾಮ ಬೀರುತ್ತದೆ ಎಂಬುದಕ್ಕೆ ನಮ್ಮ 'ನೆನಪಿರಲಿ' ಲವ್ಲಿ ಸ್ಟಾರ್ಪ್ರೇಮ್ ಅವರೆ ಜೀವಂತ ನಿದರ್ಶನ. ಅದು ಏನಾಯ್ತು ಎಂದರೆ 'ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ' ಚಿತ್ರದಲ್ಲಿ ಅವರದೊಂದು ಲಿಪ್ ಲಾಕ್ ಸೀನ್ ಇದೆಯಂತೆ. ಅದು ಹಾಗಂತೆ ಹೀಗಂತೆ ಎಂಬುದು ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ತರ್ಲೆ ಮಾಡಿತ್ತು.

ಚಿತ್ರದಲ್ಲಿ ಆ ತರಹದ್ದೇನು ಇಲ್ಲ. ಫ್ಯಾಮಿಲಿ ಸಮೇತ ಬಂದು ನಮ್ಮ ಚಿತ್ರ ನೋಡಬಹುದು ಎಂದು ಪ್ರೇಮ್ ಹೇಳಿದಬಳಿಕ ಎಲ್ಲವೂ ತಣ್ಣಗಾಗಿತ್ತು. ಆದರೆ ಅವರ ಪತ್ನಿಗೆ ಮಾತ್ರ ಆ ಅನುಮಾನ ಇನ್ನೂ ಹೋಗಿಲ್ಲವಂತೆ. ಚಿತ್ರದಲ್ಲಿ ಆ ರೀತಿಯ ಸೀನ್ ಇದೆ ಎಂಬುದು ಅವರ ಗುಮಾನಿ. ಈ ಬಗ್ಗೆ ಪ್ರೇಮ್ ಪತ್ನಿ ಪದೇ ಪದೇ ಕೇಳಿ ಅವರನ್ನು ಸತಾಯಿಸುತ್ತಿದ್ದಾರಂತೆ.

ಬಳಿಕ ಆಕೆಯನ್ನು ಒಪ್ಪಿಸುವಷ್ಟರಲ್ಲಿ ಪ್ರೇಮ್‌ಗೆ ಸಾಕು ಬೇಕಾಯಿತಂತೆ. ಈಗ ಆ ಅನುಮಾನ ಪ್ರೇಮ್ ಪತ್ನಿಗೆ ದೂರವಾಗಿದೆಯಂತೆ. ಇದೆಲ್ಲಾ ಕೇವಲ ಮಾಧ್ಯಮಗಳ ಕಿತಾಪತಿ ಎಂಬುದು ಆಕೆಗೆ ಗೊತ್ತಾಗಿದ್ದೇ ಇದಕ್ಕೆ ಕಾರಣವಂತೆ. ಈ ಚಿತ್ರದಲ್ಲಿ ಇಬ್ಬರು ನಾಯಕಿಯರು. ಒಬ್ಬ್ಬರು ಗಂಡ ಹೆಂಡತಿ ಸಂಜನಾ ಮತ್ತೊಬ್ಬರು ಕರೀಷ್ಮಾ ತನಾ. (ದಟ್ಸ್‌ಕನ್ನಡ ಸಿನಿವಾರ್ತೆ)

More from Filmibeat

English summary
Lovely Star Prem's upcoming Kannada film I Am Sorry Mathe Banne Preethisona's kissing scene mess up is not over yet! The smooching sequence, which took the Sandalwood by storm in January, has now been fueled again by the actor, as he has claimed that the issue has troubled his personal life.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X