ವಿವಾಹ ವಿಚ್ಛೇದನಕ್ಕೆ ಮುಂದಾದ ಮಾಧುರಿ ದೀಕ್ಷಿತ್

By Rajendra

ಧಕ್ ಧಕ್ ಲಡಕಿ ಮಾಧುರಿ ದೀಕ್ಷಿತ್ ದಾಂಪತ್ಯದಲ್ಲಿ ಬಿರುಗಾಳಿ ಎದ್ದಿದೆ ಎಂಬ ಅಂಶ ಮುಂಬೈನಲ್ಲಿ ಸುನಾಮಿಯಂತೆ ಅಪ್ಪಳಿಸಿದೆ. ತನ್ನ ಪತಿ ಡಾ.ಶ್ರೀರಾಮ್ ಮಾಧವ್ ನೆನೆ ಹಾಗೂ ಮಾಧುರಿ ಡೈವೋರ್ಸ್‌ಗೆ ಮುಂದಾಗಿದ್ದಾರೆ ಎಂಬ ಅಂಶ ಖಚಿತವಾಗಿಲ್ಲದಿದ್ದರೂ ಗಲ್ಲಿ ಗಾಸಿಪ್‌ಗಳಲ್ಲಿ ಗರಮಾ ಗರಂ ಸುದ್ದಿಯಾಗಿ ಹರಿದಾಡುತ್ತಿದೆ.

ಸದ್ಯಕ್ಕೆ ಯುಎಸ್‌ನ ಡೆನ್ವರ್‌ನಲ್ಲಿ ವಾಸವಾಗಿರುವ ಮಾಧುರಿ ಭಾರತಕ್ಕೆ ಮರಳುತ್ತಿರುವುದಾಗಿ ತಿಳಿಸಿದ್ದರು. ಭಾರತದಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬಹುದು, ಸಾಂಸ್ಕೃತಿಕವಾಗಿಯೂ ತಮಗೆ ಹಾಗೂ ತಮ್ಮ ಮಕ್ಕಳಿಗೆ ಅನುಕೂಲವಾಗಲಿದೆ. ಹಾಗೆ ಹೀಗೆ ಎಂದು ಮಾಧುರಿ ಹೇಳಿಕೊಂಡಿದ್ದರು.

ಆದರೆ ಆಕೆ ಭಾರತಕ್ಕೆ ಮಾಧುರಿ ಮರಳುತ್ತಿರುವುದು ಮಕ್ಕಳ ವಿದ್ಯಾಭಾಸ್ಯಕ್ಕಲ್ಲ ಅಥವಾ ಇನ್ಯಾವುದೋ ಕೆಲಸಕ್ಕಾಗಿ ಅಲ್ಲ. ಕೌಟುಂಬಿಕ ಕಲಹಗಳಿಂದ ಕಂಗಾಲಾಗಿರುವ ಮಾಧುರಿ ತಮ್ಮ ಪತಿಯೊಂದಿಗೆ ಕಿತ್ತಾಡಿದ್ದು, ಸಂಬಂಧ ಕಡಿದುಕೊಂಡು ಭಾರತಕ್ಕೆ ಮರಳುತಿದ್ದಾರೆ ಎನ್ನಲಾಗಿದೆ. ಇದೆಲ್ಲಾ ಕೇವಲ ಟೈಂಪಾಸ್ ಗಾಸಿಪ್ ಆಗಿದ್ದರೆ ಪರವಾಗಿಲ್ಲ. ಆದರೆ ಸೀರಿಯಸ್ ಆಗದಿರಲಿ ಎಂಬುದು ಮಾಧುರಿ ಅಭಿಮಾನಿಗಳ ಮನದಾಳದ ಬಯಕೆ. (ಏಜೆನ್ಸೀಸ್)

More from Filmibeat

English summary
Ever since Madhuri Dixit Nene has pronounced her desire to relocate to India, the gossip mills have been working overtime suggesting that Madhuri's decision to return to Mumbai is due to her troubled relationship with husband Dr Sriram Madhav Nene. Rumours also state that Madhuri and husband are heading straight for divorce.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X