»   » ನಿತ್ಯಾನಂದನ ಹೊಸ ರಾಸಲೀಲೆಯಲ್ಲಿ ಯುವರಾಣಿ

ನಿತ್ಯಾನಂದನ ಹೊಸ ರಾಸಲೀಲೆಯಲ್ಲಿ ಯುವರಾಣಿ

Posted By:
Subscribe to Filmibeat Kannada

ಸ್ವಾಮಿ ನಿತ್ಯಾನಂದ ರಾಸಲೀಲೆಗಳು ಕೇವಲ ನಟಿ ರಂಜಿತಾರೊಂದಿಗಷ್ಟೆ ಸೀಮಿತವಾಗಿಲ್ಲ ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ. ತಮಿಳು ಚಿತ್ರರಂಗದ ಮತ್ತೊಬ್ಬ ನಟಿ ಯುವರಾಣಿ ಹೆಸರು ಈಗ ನಿತ್ಯಾನಂದ ರಾಸಲೀಲೆ ಪ್ರಕರಣಕ್ಕೆ ಹೊಸದಾಗಿ ಸೇರ್ಪಡೆಯಾಗಿದೆ.

ಈ ಹಿಂದೆ ನಟಿ ರಂಜಿತಾ ಮತ್ತು ಸ್ವಾಮಿ ನಿತ್ಯಾನಂದ ರಾಸಲೀಲೆಗಳು ಇಂಟರ್ ನೆಟ್ ಸೇರಿದಂತೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸ್ಫೋಟಗೊಂಡಿದ್ದವು. ಇದೀಗ ನಿತ್ಯಾನಂದನ ಹೊಸ ರಾಸಲೀಲೆಯ ವಿಡಿಯೋ ಇಂಟರ್ ನೆಟ್ ನ ಕೆಲವೊಂದು ತಾಣಗಳಿಗೆ ಸೇರ್ಪಡೆಯಾಗಿದೆ.

ಈ ಹೊಸ ರಾಸಲೀಲೆ ವಿಡಿಯೋದಲ್ಲಿ ನಿತ್ಯಾನಂದನ ಜೊತೆ ರಂಜಿತಾ ಬದಲಾಗಿ ನಟಿ ಯುವರಾಣಿ ಕಾಣಿಸಿಕೊಂಡಿದ್ದಾರೆ ಎನ್ನುತ್ತವೆ ಮೂಲಗಳು. ತಮಿಳಿನ ಸೂಪರ್ ಹಿಟ್ ಚಲನಚಿತ್ರ ರಜನಿಕಾಂತ್ ಅಭಿನಯದ 'ಭಾಷಾ' ಚಿತ್ರದಲ್ಲಿ ಯುವರಾಣಿ ನಟಿಸಿದ್ದಾರೆ.

ಈಗಾಗಲೆ ನಿತ್ಯಾನಂದ ವಿರುದ್ಧ ಬಿಡದಿ ಮತ್ತು ಚೆನ್ನೈ ಪೊಲೀಸ್ ಠಾಣೆಗಳಲ್ಲಿ ಹಲವಾರು ಪ್ರಕರಣಗಳು ದಾಖಲಾಗಿವೆ. ದಾಖಲಾಗಿರುವ ಎಫ್ಐಆರ್ ಗಳನ್ನು ರದ್ದುಪಡಿಸುವಂತೆ ನಿತ್ಯಾನಂದ ಮದ್ರಾಸ್ ಹೈಕೋರ್ಟ್ ಗೆ ರಿಟ್ ಅರ್ಜಿ ಸಲ್ಲಿಸಿದ್ದಾನೆ. ನನ್ನ ವಿರುದ್ಧ ಯಾರೂ ದೂರು ಕೊಟ್ಟಿಲ್ಲ. ಪೊಲೀಸರು ಸುಳ್ಳು ಕೇಸ್ ಗಳನ್ನು ದಾಖಲಿಸಿಕೊಂಡಿದ್ದಾರೆ ಎಂದು ನಿತ್ಯಾನಂದ ರಿಟ್ ಅರ್ಜಿಯಲ್ಲಿ ತಿಳಿಸಿದ್ದಾನೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada