ಎಸ್ಪಿಬಿ ಚರಣ್‌ಗೆ ನಿರೀಕ್ಷಣಾ ಜಾಮೀನು ಮಂಜೂರು
ಖ್ಯಾತ ಹಿನ್ನೆಲೆ ಗಾಯಕ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಪುತ್ರ ಎಸ್ಪಿಬಿ ಚರಣ್ ಅವರಿಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಎಸ್ಪಿಬಿ ಚರಣ್ ವಿರುದ್ಧ ತಮಿಳಿನ ಹೊಸ ಸೆಕ್ಸ್ ಬಾಂಬ್ ಸೋನಾ ಹೈಡೆನ್ ಅತ್ಯಾಚಾರ ಪ್ರಯತ್ನ ಕೇಸ್ ಜಡಿದಿದ್ದರು.
ಚರಣ್‌ಗೆ ಎರಡು ವಾರಗಳ ಕಾಲ ಜಾಮೀನು ಮಂಜೂರು ಮಾಡಿರುವ ನ್ಯಾಯಾಲಯ, ರು.10,000 ಬಾಂಡ್ ಹಾಗೂ ಇಬ್ಬರು ಜಾಮೀನುದಾರರು ಅಷ್ಟೇ ಮೊತ್ತದ ಬಾಂಡ್ ನೀಡಬೇಕು ಎಂಬ ಷರತ್ತನ್ನು ವಿಧಿಸಿದೆ.
ಏತನ್ಮಧ್ಯೆ ಸೋನಾ ಹಾಗೂ ಚರಣ್ ತಮ್ಮ ನಡುವೆ ಉದ್ಭವಿಸಿರುವ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಮುಂದಡಿ ಇಟ್ಟಿದ್ದು, ಇಬ್ಬರೂ ರಾಜೀ ಸಂಧಾನಕ್ಕೆ ಯತ್ನಿಸುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಈ ಹಿಂದೆ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೋನಾ ಅವರನ್ನು ಭೇಟಿ ಮಾಡಿ ತಮ್ಮ ಪುತ್ರನ ವಿರುದ್ಧ ಕೇಸನ್ನು ವಾಪಸ್ಸು ಪಡೆಯುವಂತೆ ವಿನಂತಿಸಿಕೊಂಡಿದ್ದರು. (ಏಜೆನ್ಸೀಸ್)
More from Filmibeat
English summary
SPB Charan has been granted interim anticipatory bail from the Madras Hight Court on Thursday in the sexual assault case filed by actress Sona Heiden.


Click it and Unblock the Notifications











