»   » ‘ಅಯ್ಯೋ ಪಾಂಡು’ಗೆ ಜೀವಭಯ !

‘ಅಯ್ಯೋ ಪಾಂಡು’ಗೆ ಜೀವಭಯ !

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

‘ಜಗಳಗಂಟ ಪಾಂಡು’ ; ಇದು ಪಾಪ ಪಾಂಡು ಖ್ಯಾತಿಯ ಚಿದಾನಂದ್‌ಗೆ ಹೊಸ ಹೆಸರು!

ವಿಷಯ ಇಷ್ಟು : ಕಿರುತೆರೆಯ ಖ್ಯಾತ ನಿರ್ದೇಶಕ ಸಿಹಿ ಕಹಿ ಚಂದ್ರು ಅವರ ‘ಪಾಪ ಪಾಂಡು’ ಧಾರಾವಾಹಿಯಿಂದ ಎತ್ತಂಗಡಿಯಾಗಿ, ಅಭಿಮಾನಿಗಳಿಂದ ‘ಅಯ್ಯೋ ಪಾಪ’ ಎನ್ನಿಸಿಕೊಂಡಿದ್ದ ಚಿದಾನಂದ್‌, ಈಗ ಹೊಸ ಗೆಳೆಯರೊಂದಿಗೂ ಜಗಳವಾಡಿಕೊಂಡಿದ್ದಾರೆ.

ಸಿಹಿಕಹಿ ಚಂದ್ರು ಅವರೊಂದಿಗಿನ ವಿರಸದ ನಂತರ ಚಿದಾನಂದ್‌ ಬಾ.ಮಾ.ಹರೀಶ್‌ ಹಾಗೂ ಹರೀಶ್‌ ಜೈನ್‌ ಎನ್ನುವ ನಿರ್ಮಾಪಕರೊಂದಿಗೆ ಗೆಳೆತನ ಬೆಳೆಸಿದ್ದರು. ಈ ನಿರ್ಮಾಪಕರ ‘ಅಯ್ಯೋ ಪಾಂಡು’ ಎನ್ನುವ ಚಿತ್ರದಲ್ಲಿ ಚಿದಾನಂದ್‌ ನಾಯಕ ನಟ. ಇದೇ ನಿರ್ಮಾಪಕರೊಂದಿಗೆ ಚಿದಾನಂದ್‌ ಕಿರುತೆರೆ ಧಾರಾವಾಹಿಯನ್ನು ಪಾಲುಗಾರಿಕೆಯಲ್ಲಿ ನಿರ್ಮಿಸುತ್ತಿದ್ದು , ಉದಯ ಟೀವಿಯಲ್ಲಿ ಪ್ರಸಾರವಾಗುತ್ತಿರುವ ‘ಪಾಂಡುರಂಗ’ ಧಾರಾವಾಹಿಯ ಮುಖ್ಯ ಪಾತ್ರದಲ್ಲಿ ಚಿದಾನಂದ್‌ ಅವರೇ ನಟಿಸಿದ್ದಾರೆ.

ಪ್ರಸ್ತುತ, ‘ಪಾಂಡುರಂಗ’ ಧಾರಾವಾಹಿಯೇ ಗೆಳೆಯರ ನಡುವಿನ ಮುನಿಸಿಗೆ ಕಾರಣವಾಗಿದೆ. ಹರೀಶ್‌ದ್ವಯರು ಧಾರಾವಾಹಿಯಲ್ಲಿ ಅಶ್ಲೀಲ ಸಂಭಾಷಣೆ ಹೇಳಲು ತಮ್ಮನ್ನು ಒತ್ತಾಯಿಸಿದರು. ಅಶ್ಲೀಲ ಮಾತುಗಳನ್ನು ಹೇಳಲು ನಿರಾಕರಿಸಿದ ಕಾರಣ, ನಿರ್ಮಾಪಕರು ತಮಗೆ ಜೀವ ಬೆದರಿಕೆಯಾಡ್ಡಿದ್ದಾರೆ ಎಂದು ಚಿದಾನಂದ್‌ ಪೊಲೀಸರಿಗೆ ದೂರು ನೀಡಿದ್ದಾರೆ. ನಿರ್ಮಾಪಕರು ಅಶ್ಲೀಲ ಸಂಭಾಷಣೆ ಹೇಳಲು ಸಭ್ಯವಾಗಿ ನಿರಾಕರಿಸಿದ ತಮ್ಮನ್ನು ಅಶ್ಲೀಲ ಶಬ್ದಗಳಿಂದ ಬಯ್ದರು ಎಂದೂ ಚಿದಾನಂದ್‌ ಅಲವತ್ತುಕೊಂಡಿದ್ದಾರೆ.

ಚಿದಾನಂದ್‌ ದೂರನ್ನು ದಾಖಲಿಸಿಕೊಂಡಿರುವ ತಿಲಕ್‌ನಗರ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada