»   » ಬಿಕಿನಿ ತೊಡಲು ಮಾನ್ಯಾ ನಕಾರ.. ನಿರ್ಮಾಪಕ ಕೆಂಡ!

ಬಿಕಿನಿ ತೊಡಲು ಮಾನ್ಯಾ ನಕಾರ.. ನಿರ್ಮಾಪಕ ಕೆಂಡ!

Subscribe to Filmibeat Kannada


ಬಿಕಿನಿ ತೊಡಲು ಅಡ್ಡಡ್ಡ ತಲೆಯಾಡಿಸಿದ ಚೂಪುಕಂಗಳ ಚೆಲುವೆ ಮಾನ್ಯಾಗೆ, ನಿರ್ಮಾಪಕ ಮೋಹನ್‌ದಾಸ್‌ ಪೈ ಮಾತಿನ ಬೆದರಿಕೆಯಾಡ್ಡಿದ್ದಾರಂತೆ. ಈ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಬಿಸಿಬಿಸಿ ಚರ್ಚೆ.

‘ಪ್ರೀತಿ ಒಂಥರಾ’ ಚಿತ್ರದಲ್ಲಿ ನಟಿಸುತ್ತಿರುವ ನಟಿ ಮಾನ್ಯಾ ಹೇಳುವ ಪ್ರಕಾರ, ನಿರ್ಮಾಪಕರು ಚಿತ್ರ ಆರಂಭಕ್ಕೆ ಮೊದಲು ಬಿಕಿನಿ ಬಗ್ಗೆ ತಿಳಿಸಿರಲಿಲ್ಲವಂತೆ. ಈ ಬಗ್ಗೆ ಕರಾರು ಪತ್ರದಲ್ಲೂ ನಮೂದಿಸಿಲ್ಲವಂತೆ(ಮೊದಲೇ ಹೇಳಿದ್ದರೆ ಒಪ್ತಿದ್ದರೇನೋ?)

‘ಇದೊಂದು ಕೌಟುಂಬಿಕ ಚಿತ್ರ. ಇಲ್ಲಿ ನಾನು ಬಿಕಿನಿ ಧರಿಸುವ ಅಗತ್ಯವಿಲ್ಲ. ಆದರೆ ಏಕಾಏಕಿ ನಿರ್ಮಾಪಕರು ಬಿಕಿನಿ ತೊಡು ಎಂದು ಪಟ್ಟು ಹಿಡಿದರು. ನಾನು ಒಪ್ಪದಿದ್ದಾಗ, ಗೂಂಡಾಗಳನ್ನು ಕರೆಸುವುದಾಗಿ ಬೆದರಿಸಿದರು. ಆದರೆ ನಾನು ಸಮ್ಮತಿಸಲಿಲ್ಲ’ ಎಂದಿದ್ದಾರೆ ಮಾನ್ಯಾ.

‘ನನಗಿದು 36ನೇ ಚಿತ್ರ. ಇಷ್ಟು ಕಾಲದ ಸಿನಿ ಬದುಕಿನಲ್ಲೂ ಯಾವುದೇ ವಿವಾದವಿಲ್ಲದೇ ಬಂದವಳು. ನಿರ್ಮಾಪಕ ವಿರುದ್ಧ ಕೋರ್ಟ್‌ ಮೆಟ್ಟಿಲೇರುತ್ತೇನೆ. ನಾನು ಯಾರಿಗೂ ಹೆದರುವುದಿಲ್ಲ. ಎಲ್ಲದಕ್ಕೂ ನಾನು ಸಿದ್ಧಳಿದ್ದೇನೆ’ ಎಂದು ಮಾನ್ಯಾ ಪ್ರತಿಕ್ರಿಯಿಸಿದ್ದಾರೆ.

ಮಾನ್ಯಾಬಗ್ಗೆ ಕೆಲವು ಸಂಗತಿಗಳು : ದಕ್ಷಿಣ ಭಾರತದ ಚಿತ್ರೋದ್ಯಮದಲ್ಲಿರುವ ಓಡುವ ಕುದುರೆಗಳಲ್ಲಿ ಮಾನ್ಯಾ ಸಹಾ ಒಬ್ಬರು. ಕನ್ನಡತಿಯರೆಂದು ಗುರ್ತಿಸಲ್ಬಡುವ ರಕ್ಷಿತಾ, ರಮ್ಯಾ ಬೆಚ್ಚುವಂತೆ ಮಾನ್ಯಾ ಕನ್ನಡ ಉಲಿಯುತ್ತಾರೆ. ಇದವರ ವಿಶೇಷತೆ. ಚಿಗುರುಮೀಸೆ ಹುಡುಗ ದರ್ಶನ್‌ನಿಂದ ದಪ್ಪ ಮೀಸೆಯ ವಿಷ್ಣುವರ್ಧನ್‌ ಜೊತೆ ನಾಯಕಿಯಾದದ್ದು ಇನ್ನೊಂದು ವಿಶೇಷತೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada