For Quick Alerts
ALLOW NOTIFICATIONS  
For Daily Alerts

ಅಮ್ಮಾ ರಕ್ಷಿತಾ, ಸ್ವಲ್ಪ ಕನ್ನಡದಲ್ಲಿ ಮಾತನಾಡಮ್ಮಾ

By * ಜಯತೀರ್ಥ, ಕುಂದಾಪುರ
|

ಕನ್ನಡೇತರರು ಕನ್ನಡದಲ್ಲಿ ವ್ಯವಹರಿಸಬೇಕು ಎನ್ನುವುದು ಕನ್ನಡಿಗರ ಹೋರಾಟ. ಆದರೆ ಕನ್ನಡಿಗರೇ ಇಂಗ್ಲಿಷ್ ಮೊರೆ ಹೋದರೆ ಹೇಗೆ? ಇದು ಒಂದು ಕಾಲದಲ್ಲಿ ಕನ್ನಡದಲ್ಲಿ ನಂಬರ್ ಒನ್ ಸ್ಥಾನದಲ್ಲಿದ್ದ ನಾಯಕಿ ರಕ್ಷಿತಾ ಪ್ರೇಮ್ ಬಗ್ಗೆ. ಬಾಯ್ಬಿಟ್ಟರೆ ಬರೀ ಇಂಗ್ಲಿಷ್. ಹುಟ್ಟಿದ್ದು, ಬೆಳೆದಿದ್ದು, ನಟಿಸಿದ್ದು ಎಲ್ಲಾ ಇಲ್ಲೇ. ಆದ್ರೆ ಇವರಿಗೆ ಇಂಗ್ಲಿಷ್ ವ್ಯಾಮೊಹವೋ ಅಥವಾ ಸ್ಟೈಲೋ ಗೊತ್ತಿಲ್ಲ.

ಕನ್ನಡ ವಾಹಿನಿಗಳಲ್ಲಿ ನಡೆಯುವ ಸಂದರ್ಶನದ ವೇಳೆ ಬರೀ ಇಂಗ್ಲಿಷ್ ನಲ್ಲಿ ಮಾತನಾಡಿದರೆ ನಿರೂಪಕರಿಗೆ ಮತ್ತು ನೋಡುಗರಿಗೆ ಕಿರಿಕಿರಿ ಆಗಲ್ವೇನ್ರಿ? ಇದೇನು ಇಂಗ್ಲಿಷ್ ವಾಹಿನಿನಾ? ಕನ್ನಡ ವಾಹಿನಿನಾ ಎಂಬ ಡೌಟೂ ಬರುತ್ತೆ. ಇನ್ನು ರಮ್ಯ ಮೇಡಂ ಇದಕ್ಕೇನೂ ಹೊರತಾಗಿಲ್ಲ ಬಿಡಿ.

ಕಳೆದ ದಿನಗಳಿಂದ ನೀವು ಗಮನಿಸಿರಬಹುದು, 'ಜೋಗಯ್ಯ' ಚಿತ್ರ ಬಿಡುಗಡೆಗೆ ಮುನ್ನ ಮತ್ತು ನಂತರ ಚಿತ್ರತಂಡ ವಿವಿಧ ಚಾನಲ್ ಗಳ ಸಂದರ್ಶನದಲ್ಲಿ ಭಾಗವಹಿಸಿತ್ತು. ಚಿತ್ರದ ನಿರ್ಮಾಪಕಿಯಾದ ರಕ್ಷಿತಾ ಮಾತನಾಡುತ್ತಿರಬೇಕಾದರೆ ಈಕೆ ನಮ್ಮ ಕನ್ನಡ ನಟಿಯೇ ಎಂಬ ಅನುಮಾನ ಬರುವಂತಿತ್ತು. ಬರೀ ಆಂಗ್ಲ ಮೋಹ. ಕನ್ನಡದಲ್ಲಿ ಏನೇ ಪ್ರಶ್ನೆ ಕೇಳಿದರೂ ಇಂಗ್ಲಿಷ್ ನಲ್ಲಿ ಉತ್ತರನೀಡುತ್ತಿದ್ದರು.

ಸ್ಯಾಂಡಲ್ ವುಡ್‌ಗೆ ಬಂದು ಕನ್ನಡ ಕಲಿತ ಪರಭಾಷಾ ನಟಿಯರ ಬಗ್ಗೆ ನಾವು ಖಂಡಿತ ಹೆಮ್ಮೆ ಪಡಬೇಕಾಗುತ್ತದೆ. ಇವರಿಗೆ ಇರುವ ಶ್ರದ್ಧಾವಂತಿಕೆ ನಮ್ಮವರಿಗಿಲ್ಲವೇ? ಊರು ಬಿಟ್ಟು ಬೆಂಗಳೂರಿಗೆ ಬಂದು ಕನ್ನಡದಲ್ಲೇ ಮಾತನಾಡುವ ಪೂಜಾ ಗಾಂಧಿ ಅಥವಾ ಐಂದ್ರಿತಾ ರೇ ಮುಂತಾದ ನಟಿಯರನ್ನು ನೋಡಿಯಾದರೂ ಕಲೀರಮ್ಮ...

English summary
Kannada actress Rakshita, who has become produced with the movie Jogayya, prefers English to Kannada in all press meets and TV channels chat shows. Several reporters and Kannada activists are irked by her English behavior. Many have even appealed her to speak Kannada at-least in press meets.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more