ಫಿಲ್ಟರ್ ಲೆಸ್ ನಿರ್ದೇಶಕ ಓಂ ಕ್ಷಮೆ ಕೇಳಿದ್ದಾರಂತೆ
ಲಿಂಗಬೇಧ ಮಾಡದೆ ಎಲ್ಲರನ್ನೂ ಒಂದೇ ಭಾವದಿಂದ ನೋಡುವ ನಿರ್ದೇಶಕ ಓಂ ಪ್ರಕಾಶ್ ರಾವ್ ತಮ್ಮ ಫಿಲ್ಟರ್ ಲೆಸ್ ಟಾಂಗ್ ಮೂಲಕ ಗಾಂಧಿನಗರದಲ್ಲೇ ವರ್ಲ್ಡ್ ಫೇಮಸ್ ಆಗಿರುವುದು ಎಲ್ಲರಿಗೂ ತಿಳಿದ ವಿಷಯ.
ಹೀರೋಯಿನ್ ಗಳು ಓಂನಿಂದ ಬೈಯಿಸಿಕೊಳ್ಳದಿದ್ದರೆ ಅದು ಒಂದು ಆಶ್ಚರ್ಯದ ಸಂಗತಿ ಎನ್ನಬಹುದು. ರಕ್ಷಿತಾಳಿಂದ ಹಿಡಿದು ಇತ್ತೀಚಿನ ಪ್ರಣೀತಾ ತನಕ ಓಂ ಮಾತಿನ ಚಟಕ್ಕೆ ತುತ್ತಾಗಿದ್ದಾರೆ.
ಆದರೆ, ಓಂ ಕ್ಷಮೆ ಕೇಳಿದ್ದಾರಂತೆ. ಸ್ಸಾರಿ ಎಂದಿದ್ದು ನಟಿಮಣಿಯರಿಗಲ್ಲ.. ಬದಲಿಗೆ ಕೊರವ ಸಮುದಾಯಕ್ಕೆ.
ಭೀಮಾ ತೀರದಲ್ಲಿ ಚಿತ್ರದ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದ ಹಿರಿಯ ನಟ ಲೋಕನಾಥ್ ಅವರ ಪಾತ್ರದ ಬಗ್ಗೆ ಯಾರೋ ಪ್ರಶ್ನೆ ಕೇಳಿದ್ದಾರೆ.
ಅದಕ್ಕೆ ಆ ಪಾತ್ರನಾ...'ಕಳ್ಳ ಹಾಗೂ ಕೊರಮ'ನ ಪಾತ್ರ ಅಂದಿದ್ದಾರೆ. ಕಳ್ಳ ಓಕೆ.. ಕೊರಮ ಅಂದಿದ್ದು ಏಕೆ ಎಂದು ಕೊರವ ಸಮುದಾಯದವರು ಮುಗಿಬಿದ್ದಿದ್ದಾರಂತೆ. ನಮ್ಮ ಸಮುದಾಯವನ್ನು ಕಳ್ಳರಿಗೆ ಹೋಲಿಸಿ ಮಾತನಾಡಿದ ನಿರ್ದೇಶಕ ಓಂ ತಕ್ಷಣವೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಲಾಗಿದೆ.
ಕೊನೆಗೆ ಇದಕ್ಕೆ ಪರಿಹಾರ ಎಂಬಂತೆ ಓಂ ಕ್ಷಮೆಯಾಚಿಸಿ ಸುಮ್ಮನಾಗಿದ್ದಾರೆ. ಆಮೇಲೆ ಏನು ಗೊಣಗಿಕೊಂಡರು ಎಂಬುದು ಮಾತ್ರ ಯಾರ ಕಿವಿಗೂ ಬಿದ್ದಿಲ್ಲ.


Click it and Unblock the Notifications











