»   » ದೇವ್ರಾಣೆ ನಂಗೇನೂ ಗೊತ್ತಿಲ್ಲ ಕಣಣ್ಣ ..

ದೇವ್ರಾಣೆ ನಂಗೇನೂ ಗೊತ್ತಿಲ್ಲ ಕಣಣ್ಣ ..

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಈಗಾಗಲೇ ಮದುವೆಯಾಗಿ, ಎರಡು ಮಕ್ಕಳಿರುವ ಟೆನ್ನಿಸ್‌ ಕೃಷ್ಣ ಮೊನ್ನೆ ಆದದ್ದು ಎರಡನೇ ಮದುವೆಯಾ?

ಹೆಸರಿಗೆ ತಕ್ಕ ಮನುಷ್ಯ ಕಣ್ರೀ ಆತ. ಅದೂ ಹೆಗಡೆ ಮನೆಯವರ ಹುಡುಗಿಗೇ ಕಲ್ಲು ಹೊಡೆದಿದ್ದಾನೆ... ಅಂತ ಗಾಂಧಿನಗರದಲ್ಲಿ ಲೇವಡಿ ಜೋರಾದದ್ದೇ ತಡ, ಟೆನ್ನಿಸ್‌ ಕೃಷ್ಣ ಬೆಂಗಳೂರಿನ ಪ್ರೆಸ್‌ ಕ್ಲಬ್ಬಿನಲ್ಲಿ ಒಂದು ಸುದ್ದಿಗೋಷ್ಠಿ ಕರೆದೇ ಬಿಟ್ಟರು.

ಟೆನ್ನಿಸ್ಸು ಮದುವೆಯನ್ನು ನೋಡಿ, ಕ್ಯಾಮರಾ ಕಣ್ಣಲ್ಲಿ ತುಂಬಿಸಿಕೊಳ್ಳಲು ಹೋದ ಒಬ್ಬ ಛಾಯಾಗ್ರಾಹಕ ಹಲ್ಲೆಗೊಳಗಾಗಿ ಎರಡು ದಿನ ಕಳೆದಿತ್ತು. ಸಂಜೆಯ ಸುದ್ದಿಗೋಷ್ಠಿಯಾದ್ದರಿಂದ, ಮುಂಗಾರಿನ ಮೊದಲ ಹನಿಗಳು ಹುಲ್ಲು ಹಾಸನ್ನು ನೆನೆಸುತ್ತಿದ್ದವು. ಕರೆದ ಸಮಯಕ್ಕೆ ಸರಿಯಾಗಿ ಒಂದು ಗಂಟೆ ತಡವಾಗಿ ಬಂದ ಸೆಕೆಂಡ್‌ಹ್ಯಾಂಡ್‌ ಮದುಮಗ ಟೆನ್ನಿಸ್‌ ಕೃಷ್ಣರ ಕೈಯಲ್ಲಿ ಗೋರಂಟಿ ಬಣ್ಣ ಹಸಿಯಾಗೇ ಇತ್ತು. ಆದರೆ ಅವರು ಮಾತ್ರ ಕಸಿವಿಸಿಗೊಂಡಿದ್ದರು.

ಅಯ್ಯೋ ನಾನು ಎರಡನೇ ಮದುವೆ ಆಗ್ಲಿಲ್ಲ. ಯಾರೋ ಒಂದಷ್ಟು ಜನ ನನ್ನನ್ನ ಕಿಡ್ನಾ ್ಯಪ್‌ ಮಾಡಿ, ಬಿಜಾಪುರದ ಮೂಲೆಗೆ ಕರೆದುಕೊಂಡು ಹೋದರು. ಬಲವಂತವಾಗಿ ದೀಪಾ ಹೆಗಡೆಗೆ ತಾಳಿ ಕಟ್ಟಿಸಿದರು. 80 ಜನ ನನ್ನನ್ನು ಸುತ್ತುಗಟ್ಟಿ, ಓಡಿಹೋಗದಂತೆ ನೋಡಿಕೊಂಡು ಈ ಕೆಲಸ ಪೂರೈಸಿದರು. ಆಗ ಒಬ್ಬ ಫೋಟೋಗ್ರಾಫರ್‌ ಬಂದು ಫೋಟೋ ತೆಗೆಯಲು ಯತ್ನಿಸಿದ. ನಾನು ವಿರೋಧಿಸಿದೆ. ಇಲ್ಲಿ ಬಂದು ನೋಡಿದರೆ, ಎರಡು ಪತ್ರಿಕೆಗಳಲ್ಲಿ ಆಗಲೇ ಸುದ್ದಿ ಸ್ಫೋಟವಾಗಿತ್ತು. ನಾನು ನಿರ್ದೋಷಿ...

ಟೆನ್ನಿಸ್‌ ಕಾಮಿಡಿಯನ್‌ ಕಂಠ ಗಡಸಾಗಿತ್ತು. ಆತನ ಕೈಗೆ ಬಳಿದುಕೊಂಡಿದ್ದ ಗೋರಂಟಿ ಚಿತ್ತಾರ ಮಾತ್ರ ಹಸಿರಾಗಿತ್ತು. ಬಿಜಾಪುರಕ್ಕೆ ಹೋಗಿದ್ದ ಛಾಯಾಗ್ರಾಹಕ, ಟೆನ್ನಿಸ್‌ ಕೃಷ್ಣನ ನಿಜವಾದ ಕೃಷ್ಣಲೀಲೆಯನ್ನು ಹೊರಗೆಳೆಯಲು ಹೋಗಿಯೇ ಗೂಸಾ ತಿಂದು ಬಂದದ್ದು ಅಂತ ಸಾಕ್ಷಾತ್‌ ಟೆನ್ನಿಸ್‌ ಕೃಷ್ಣನ ಮೊದಲ ಹೆಂಡತಿಗೂ ಗೊತ್ತಿದೆಯಂತೆ.

ಅಂದಹಾಗೆ, ತಾವೇ ಕರೆದ ಸುದ್ದಿಗೋಷ್ಠಿಗೆ ಟೆನ್ನಿಸ್‌ ಕೃಷ್ಣ ಬರೋಬ್ಬರಿ ಒಂದು ಗಂಟೆ ತಡವಾಗಿ ಬಂದ ಕಾರಣ ಅನೇಕ ಸಿನಿಮಾ ಪತ್ರಕರ್ತರು ಅಲ್ಲಿಂದ ಮಾಯವಾಗಿದ್ದರು. ಮುದ ಕೊಡುತ್ತಿದ್ದ ಮಳೆ ಹನಿಗಳ ನಡುವೆ ಟೆನ್ನಿಸ್‌ ಗೋರಂಟಿ ಮಾತ್ರ ಮಿರಿಮಿರಿ ಮಿಂಚಿಂಗು.

ಇದು ಕೃಷ್ಣ ಲೀಲೆಯೋ- ಮುಗ್ಧತೆಯೋ ಏನಂತೀರಣ್ಣ ?

ಇದನ್ನೂ ಓದಿ
ಟೆನ್ನಿಸ್‌ ಕೃಷ್ಣ ‘ಗಲಾಟೆ ಮದುವೆ’


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada