ನಾನು ಪೊಲೀಸರನ್ನು ವಂಚಿಸಿಲ್ಲ : ನಟ-ನಿರ್ದೇಶಕ ಪ್ರೇಮ್ ಸಮರ್ಥನೆ

By Staff

ಬೆಂಗಳೂರು : ತಾವು ಭದ್ರತಾ ವೆಚ್ಚವನ್ನು ನೀಡದೇ ಪೊಲೀಸ್ ಇಲಾಖೆಗೆ ವಂಚನೆ ಮಾಡಿರುವುದಾಗಿ ಪ್ರಕಟವಾಗಿರುವ ವರದಿಗಳನ್ನು ಚಲನಚಿತ್ರ ನಿರ್ದೇಶಕ-ನಟ ಪ್ರೇಮ್ ತಳ್ಳಿಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಪೊಲೀಸ್ ಕಲ್ಯಾಣ ನಿಧಿಗೆ ಹಣ ನೀಡುವುದಾಗಿ ಹೇಳಿದ್ದೆ. ಹಾಗೆಯೇ ಮಾಡಿದ್ದೇನೆ ಎಂದು ಸಮರ್ಥಿಸಿಕೊಂಡರು.

ನಟಿ ರಕ್ಷಿತಾರೊಂದಿಗೆ ನಡೆದ ತಮ್ಮ ಮದುವೆ ಸಂದರ್ಭದಲ್ಲಿ ಪೊಲೀಸ್ ಭದ್ರತೆ ಪಡೆದಿದ್ದಾಗಿ ಹೇಳಿದ ಅವರು, ಇದಕ್ಕಾಗಿ ಶುಲ್ಕ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ನಾನು ಭದ್ರತಾ ಶುಲ್ಕ ನೀಡದೆ ಪೊಲೀಸ್ ಇಲಾಖೆಗೆ ವಂಚಿಸಿದ್ದೇನೆ ಎಂಬ ವರದಿಗಳು ಸತ್ಯಕ್ಕೆ ದೂರವಾದವುಗಳು. ಪ್ರೀತಿ ಏಕೆ ಭೂಮಿ ಮೇಲಿದೆ ಚಿತ್ರದ ಚಿತ್ರೀಕರಣದಲ್ಲಿ ನಿರತವಾಗಿದ್ದ ಕಾರಣ, ನಿಗದಿತ ಸಮಯದಲ್ಲಿ ನಾನು ಹಣ ಪಾವತಿಸಲಿಲ್ಲ. ನನ್ನ ಎಲ್ಲ ಚಿತ್ರಗಳ ಮೊದಲ ಪ್ರದರ್ಶನದಿಂದ ಬರುವ ಗಳಿಕೆಯನ್ನು ಪೊಲೀಸ್ ಕಲ್ಯಾಣ ನಿಧಿಗೆ ನೀಡಲಿದ್ದೇನೆ ಎಂದು ಅವರು ಘೋಷಿಸಿದರು.

(ದಟ್ಸ್ ಕನ್ನಡ ವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X