»   » ಶ್ರೀ ರಾಮಚಂದ್ರ ಪಾತ್ರ ವಂಚಿತ ಸಲ್ಮಾನ್‌ಖಾನ್‌ ಪುರಾಣವು..

ಶ್ರೀ ರಾಮಚಂದ್ರ ಪಾತ್ರ ವಂಚಿತ ಸಲ್ಮಾನ್‌ಖಾನ್‌ ಪುರಾಣವು..

Posted By:
Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೊ

ಮುಂಬಯಿ: ಪುರಾಣ ಪುರುಷ ಶ್ರೀರಾಮಚಂದ್ರನ ಪಾತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದ ಬಾಲಿವುಡ್ಡಿಗ ಸಲ್ಮಾನ್‌ಖಾನ್‌, ಬೆದರಿಕೆಗಳು ಎದುರಾದ ಹಿನ್ನೆಲೆಯಲ್ಲಿ ರಾಮನ ಪಾತ್ರದಲ್ಲಿ ನಟಿಸಲು ನಿರಾಕರಿಸಿದ್ದಾರೆ.

ಬಾಲಿವುಡ್‌ನ ಬ್ಯಾಡ್‌ ಬಾಯ್‌ ಸಲ್ಮಾನ್‌ ರಾಮನ ಪಾತ್ರದಲ್ಲಿ ನಟಿಸುವುದು ನಿಶ್ಚಿತವಾಗಿತ್ತು. ಆದರೆ ಖಾನ್‌ ನಸೀಬು ಸರಿ ಇರಲಿಲ್ಲ. ಪ್ರೇಮ ಆಘಾತ, ಅಪಘಾತಗಳು ಆತನ ಚಾರಿತ್ರ್ಯವನ್ನು ಹರಣ ಮಾಡಿದ್ದು, ಈಗಷ್ಟೇ ಖಾನ್‌ ಚೇತರಿಸಿಕೊಳ್ಳುತ್ತಿದ್ದಾರೆ. 37 ವರ್ಷ ವಯಸ್ಸಿನ ಖಾನ್‌ಗೆ ಅತಿ ದೊಡ್ಡ ಬಜೆಟ್‌ನ ರಾಮಾಯಣ ಚಿತ್ರದಲ್ಲಿ ನಟಿಸಲು ಆಹ್ವಾನ ಬಂದಿರುವುದು ಪ್ರತಿಷ್ಠೆಯ ವಿಷಯವಾಗಿತ್ತು. ಆದರೆ ಬೆದರಿಕೆಗಳು ಬಂದಿರುವ ಹಿನ್ನೆಲೆಯಲ್ಲಿ ಖಾನ್‌ ಚಿತ್ರದಿಂದ ಹಿಂದೆ ಸರಿದ್ದಾನೆ ಎಂದು ಚಿತ್ರದ ನಿರ್ದೇಶಕ ಬಂಟಿ ವಾಲಿಯಾ ತಿಳಿಸಿದ್ದಾರೆ.

ಬೆದರಿಕೆಯ ಕರೆಗಳನ್ನು ಯಾರು ಮಾಡಿದ್ದಾರೆ ಎಂಬ ಬಗ್ಗೆ ಹೇಳುವುದಕ್ಕೆ ಇಚ್ಛಿಸುವುದಿಲ್ಲ. ಹೇಳಿದಲ್ಲಿ ಈ ವಿವಾದ ಬೃಹದಾಕಾರವಾಗಿ ಬೆಳೆಯಬಹುದು. ಬೆದರಿಸುವ ವ್ಯಕ್ತಿಗಳಿಗೆ ರಾಮನ ಪಾತ್ರದಲ್ಲಿ ಖಾನ್‌ ಒಬ್ಬ ನಟನಷ್ಟೇ ಎಂದು ಸಮಜಾಯಿಷಿ ಹೇಳಿದರೂ ಅವರು ತೃಪ್ತರಾಗಿಲ್ಲ ಎಂದು ಬಂಟಿ ಹೇಳಿದ್ದಾರೆ.

ನಾನು ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ರಾಮನ ಪಾತ್ರದಲ್ಲಿ ನಟಿಸಬಾರದೇ...? ನನ್ನ ಅಮ್ಮ ಹಿಂದೂ ಎಂಬುದನ್ನು ಇವರೇಕೆ ಅರ್ಥ ಮಾಡಿಕೊಳ್ಳುತ್ತಿಲ್ಲ ? ಎಂಬುದು ಸಲ್ಮಾನ್‌ ಅಳಲು.

ರಾಮಾಯಣ 1. 0 ಬಿಲಿಯನ್‌ ರೂಪಾಯಿ ವೆಚ್ಚದ ಚಿತ್ರ. ಬಂಟಿ ಹಾಗೂ ಖಾನ್‌ರ ಜಂಟಿ ಕಂಪೆನಿ ಜಿ. ಎಸ್‌. ಎಂಟರ್‌ಟೈನ್‌ಮೆಂಟ್‌ ಈ ಚಿತ್ರ ನಿರ್ಮಾಣವನ್ನು ಕೈಗೆತ್ತಿಕೊಂಡಿದೆ. ಆಂಗ್ಲ ಚಿತ್ರ ಲಾರ್ಡ್‌ ಆಫ್‌ ರಿಂಗ್ಸ್‌ ನ ಮಾದರಿಯಲ್ಲಿ ರಾಮಾಯಣವನ್ನು ನಿರ್ಮಿಸುವ ಯೋಚನೆ ಕಂಪೆನಿಗಿದೆ. ಖಾನ್‌ ತಮ್ಮ ಸೊಹೈಲ್‌ ಖಾನ್‌ ಲಕ್ಷ್ಮಣನ ಪಾತ್ರ ನಿರ್ವಹಿಸಲಿದ್ದಾರೆ. ಭಾರತೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಈ ಚಿತ್ರವನ್ನು ನಿರ್ದೇಶಿಸಲಾಗುತ್ತಿದೆ. ಚಿತ್ರಕ್ಕೆ ಇನ್ನಷ್ಟು ಅಂತರರಾಷ್ಟ್ರೀಯ ಮೌಲ್ಯ ತರುವುದಕ್ಕಾಗಿ ಭಾರತೀಯ ಆದರ್ಶ ನಾರಿ ಸೀತೆಯ ಪಾತ್ರಕ್ಕೆ ಹಾಲಿವುಡ್‌ ನಟಿಯಾಬ್ಬಳನ್ನು ಹಾಕಿಕೊಳ್ಳುವ ಪ್ರಯತ್ನಗಳು ನಡೆದಿವೆ. ರಾಮಜನ್ಮಭೂಮಿ ಅಯೋಧ್ಯೆ ಹಾಗೂ ನ್ಯೂರಿkುೕಲ್ಯಾಂಡ್‌ನಲ್ಲಿ ಚಿತ್ರದ ಶೂಟಿಂಗ್‌ ನಡೆಯಲಿದೆ.

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada