»   » ಪರಿಸ್ಥಿತಿ ಹೀಗೇ ಇದ್ರೆ ನಾನೇ ನಿರ್ಮಾಪಕ ಆಗ್ತೀನಿ -ಶಿವು

ಪರಿಸ್ಥಿತಿ ಹೀಗೇ ಇದ್ರೆ ನಾನೇ ನಿರ್ಮಾಪಕ ಆಗ್ತೀನಿ -ಶಿವು

Posted By:
Subscribe to Filmibeat Kannada


ಕನ್ನಡ ಚಲನಚಿತ್ರ ನಿರ್ಮಾಣ ಸ್ಥಗಿತಗೊಂಡಿರುವುದರ ವಿರುದ್ಧ ನಟ ಶಿವರಾಜ್‌ಕುಮಾರ್‌ ಇದೀಗ ಸೊಲ್ಲೆತ್ತಿದ್ದಾರೆ.

ಕೆಲವಾರು ವಾರಗಳಿಂದ ಚಿತ್ರ ನಿರ್ಮಾಣ ನಿಂತುಹೋಗಿದ್ದು, ಇದರ ವಿರುದ್ಧ ಅನೇಕ ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಶಿವು ಅಂಥ ನಿರ್ಮಾಪಕರ ಪರ ಈಗ ಮಾತನಾಡಿದ್ದಾರೆ.

ಚಿತ್ರರಂಗದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕೇ ವಿನಾ, ನಿರ್ಮಾಣ ಚಟುವಟಿಕೆಗಳನ್ನೇ ನಿಲ್ಲಿಸಿ ಬಿಡುವುದು ತರವಲ್ಲ ಎಂದೂ ಶಿವು ಅಭಿಪ್ರಾಯಪಟ್ಟಿದ್ದಾರೆ.

ಇಡೀ ಚಿತ್ರರಂಗ ಒಂದು ಅವಿಭಕ್ತ ಕುಟುಂಬದಂತೆ. ಒಳಜಗಳಗಳನ್ನು ಒಳಗೊಳಗೇ ಪರಿಹರಿಸಿಕೊಂಡು ನಾವೆಲ್ಲ ಮುಂದೆ ಸಾಗಬೇಕು. ಅದು ಬಿಟ್ಟು ಹಗೆತನ, ಸೇಡು ಭಾವನೆ ಸಾಧಿಸುವುದನ್ನು ತೊರೆಯಬೇಕು ಎಂದೂ ಅವರು ಹಿತನುಡಿ ಹೇಳಿದ್ದಾರೆ.

ನಿರ್ಮಾಪಕರು ತಮ್ಮ ನಿಲುವುಗಳನ್ನು ಸಡಿಲಿಸಿ ಪುನಃ ನಿರ್ಮಾಣ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕೆಂದು ಕರೆ ಕೊಟ್ಟಿರುವ ಶಿವು, ಹಾಗೆ ಆಗದಿದ್ದರೆ ತಾವೇ ಚಿತ್ರ ನಿರ್ಮಾಣಕ್ಕೆ ಕೈಹಾಕುವುದಾಗಿಯೂ ಸಣ್ಣ ಬೆದರಿಕೆ ಒಡ್ಡಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada