»   » ಪ್ರದರ್ಶಕರ ಜಯ: ಬಸಂತ್‌, ರಾಜೇಂದ್ರಸಿಂಗ್‌ಬಾಬು ಕ್ಷಮಾಪಣೆ

ಪ್ರದರ್ಶಕರ ಜಯ: ಬಸಂತ್‌, ರಾಜೇಂದ್ರಸಿಂಗ್‌ಬಾಬು ಕ್ಷಮಾಪಣೆ

Subscribe to Filmibeat Kannada

ಹುಬ್ಬಳ್ಳಿ : ಪ್ರದರ್ಶಕರಲ್ಲಿ ನಿರ್ದೇಶಕರ ಸಂಘದ ಅಧ್ಯಕ್ಷ ರಾಜೇಂದ್ರ ಸಿಂಗ್‌ ಬಾಬು, ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್‌ ಕುಮಾರ್‌ಪಾಟೀಲ್‌ ಬೇಷರತ್‌ ಕ್ಷಮೆ ಕೇಳಿದ್ದಾರೆ. ಹೀಗಾಗಿ ಪ್ರದರ್ಶಕರು ಉತ್ತರ ಕರ್ನಾಟಕದಲ್ಲಿ ಕಾಂಚನ ಗಂಗಾ ಚಿತ್ರದ ಪ್ರದರ್ಶನಕ್ಕೆ ಸಮ್ಮತಿಸಿದ್ದಾರೆ.

ಮುಖ್ಯಮಂತ್ರಿ ಧರ್ಮಸಿಂಗ್‌ ನಿರ್ದೇಶನದ ಮೇಲೆ ಹುಬ್ಬಳ್ಳಿಯಲ್ಲಿ ಜಿಲ್ಲಾಧಿಕಾರಿಗಳು ನಡೆಸಿದ ಸಭೆಯಲ್ಲಿ ಕ್ಷಮೆ ಕೇಳಲಾಯಿತು. ಚಿತ್ರೋದ್ಯಮದ ಚಳವಳಿ ದಿನಗಳಲ್ಲಿ ಪ್ರದರ್ಶಕರ ನೀತಿಯನ್ನು ಟೀಕಿಸಲಾಗಿತ್ತು. ಚಿತ್ರಮಂದಿರದ ಮಾಲೀಕರನ್ನು ತೆರಿಗೆ ಕಳ್ಳರು, ಕನ್ನಡ ದ್ರೋಹಿಗಳೆಂದು ಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜೇಂದ್ರ ಸಿಂಗ್‌ ಬಾಬು ನಿರ್ದೇಶನದ, ಶಿವರಾಜ್‌ಕುಮಾರ್‌ ಅಭಿನಯದ ಕಾಂಚನ ಗಂಗಾ ಚಿತ್ರಕ್ಕೆ ಪ್ರದರ್ಶಕರ ಮಹಾ ಮಂಡಳಿ ಬಹಿಷ್ಕಾರ ಹಾಕಿತ್ತು. ಸಂಧಾನದ ಮೂಲಕ ಸಮಸ್ಯೆ ತಣ್ಣಗಾಗಿದೆ. ಡಿ.25ರಂದು ಹುಬ್ಬಳ್ಳಿ, ಗದಗ, ಧಾರವಾಡ, ರಾಣಿಬೆನ್ನೂರಿನಲ್ಲಿ ಕಾಂಚನ ಗಂಗಾ ಪ್ರದರ್ಶನಕ್ಕೆ ಸಜ್ಜಾಗಿದೆ.

ಬಾಬು ಸಿಟ್ಟು : ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರಾಜೇಂದ್ರ ಸಿಂಗ್‌ ಬಾಬು, ಓದುಗೌಡರ್‌ ಯಾರೆಂದು ನನಗೆ ಗೊತ್ತಿರಲಿಲ್ಲ. ಅವರನ್ನು ನೋಡಿದ್ದು ಇಲ್ಲಿಯೇ. ಉದ್ಯಮದ ಹಿತದೃಷ್ಟಿಯಿಂದ ಕ್ಷಮೆ ಕೇಳಿದ್ದೇನೆ. ಇಂತಹ ಪರಿಸ್ಥಿತಿ ಮುಂದುವೆರೆದರೆ, ಉತ್ತರ ಕರ್ನಾಟಕಕ್ಕೆ ಕನ್ನಡ ಚಿತ್ರಗಳು ಬಿಡುಗಡೆಯಾಗದಂತೆ ನೋಡಿಕೊಳ್ಳಬೇಕಾಗುತ್ತದೆ ಎಂದು ಗುಡುಗಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada