For Quick Alerts
ALLOW NOTIFICATIONS  
For Daily Alerts

ಯಮುನಾ ಜೊತೆ ಇದ್ದ ಯುವ ರಾಜಕಾರಣಿ ಯಾರು?

By Rajendra
|

ಬಹುಭಾಷಾ ತಾರೆ ಯಮುನಾ ಕುರಿತಂತೆ ದಿನಕ್ಕೊಂದು ಸಂಗತಿಗಳು ಬಹಿರಂಗವಾಗುತ್ತಿವೆ.ಹೈಟೆಕ್ ವೇಶ್ಯಾವಾಟಿಕೆಯಲ್ಲಿ ಯಮುನಾ ಜೊತೆ ಸಿಕ್ಕಿಬಿದ್ದವರಲ್ಲಿ ಆಂಧ್ರಪ್ರದೇಶದ ಜನಪ್ರಿಯ ರಾಜಕಾರಣಿಯೊಬ್ಬರ ಪುತ್ರನೂ ಇದ್ದ ಎಂಬ ಸುದ್ದಿ ಇದೀಗ ಸ್ಫೋಟಗೊಂಡಿದೆ.

ನಟಿ ಯಮುನಾ ಜೊತೆ ಹಾಸಿಗೆ ಹಂಚಿಕೊಂಡ ರಾಜಕಾರಣಿಯ ಪುತ್ರ ಯಾರು ಎಂಬುದನ್ನು ಪೊಲೀಸರು ಸದ್ಯಕ್ಕೆ ಬಾಯಿಬಿಡುತ್ತಿಲ್ಲ. ಲೈಂಗಿಕ ಜಾಲದಲ್ಲಿ ಸಿಕ್ಕಿಬಿದ್ದ ರಾಜಕಾರಣಿಯ ತಂದೆ ಆಂಧ್ರ ರಾಜಕಾರಣದಲ್ಲಿ ಹಲವು ವರ್ಷಗಳ ಕಾಲ ಉನ್ನತ ಹುದ್ದೆಯಲ್ಲಿದ್ದವರು ಎನ್ನಲಾಗಿದೆ.

ಆ ರಾಜಕಾರಣಿಯ ಕುಟುಂಬಕ್ಕೆ ಚಿತ್ರರಂಗದೊಂದಿಗೆ ನಂಟು ಇತ್ತು. ಯುವ ರಾಜಕಾರಣಿ ಈಗಷ್ಟೇ ರಾಜಕಾರಣಲ್ಲಿ ನೆಲೆಕಂಡುಕೊಳ್ಳುತ್ತಿದ್ದಾನೆ. ಇವಿಷ್ಟು ವಿವರಗಳನ್ನು ಬಿಟ್ಟು ಇನ್ನೇನನ್ನೂ ಹೇಳುತ್ತಿಲ್ಲ ಹೈದರಾಬಾದ್ ಪೊಲೀಸ್ ಆಯುಕ್ತ ಎ ಕೆ ಖಾನ್.

ಬೇಸ್ತುಬಿದ್ದ ಸಾಫ್ಟ್‌ವೇರ್ ಉದ್ಯೋಗಿ: ಸಾಫ್ಟ್‌ವೇರ್ ಉದ್ಯೋಗಿ ನಂದಗೋಪಾಲ್ ಫೇಸ್ ಬುಕ್‌ ಮೂಲಕ ಯಮುನಾರಿಗೆ ಬಲೆ ಬೀಸಿದ್ದ. ಆಕೆಯ ಫೇಸ್‌ಬುಕ್ ಪ್ರೊಫೈಲ್ ನೋಡಿ ಮರುಳಾಗಿದ್ದ. ಆದರೆ ನಿಜವಾಗಿ ಆಕೆಯನ್ನು ನೋಡಿದಾಗ ನಿರಾಸೆ ವ್ಯಕ್ತಪಡಿಸಿದ್ದನಂತೆ!

ಫೇಸ್‌ಬುಕ್‌ನಲ್ಲಿ ಆಕೆಯನ್ನು ನೋಡಿ ಇಷ್ಟಪಟ್ಟಿದ್ದ ನಂದಗೋಪಾಲ್, ಬಳಿಕ ವಯಸ್ಸು ಜಾಸ್ತಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದ. ರೇಟು ಜಾಸ್ತಿಯಾಯ್ತು ಎಂದು ರಾಗ ತೆಗೆದಿದ್ದ ಎಂಬ ವಿವರಗಳು ಪೊಲೀಸ್ ವಿಚಾರಣೆಯಲ್ಲಿ ಬಹಿರಂಗವಾಗಿವೆ. [ಭುವನೇಶ್ವರಿ]

English summary
Sources says that son of a top politician from Andhra Pradesh was among those caught red-handed along with popular film and television actress Yamuna. Hyderabad police commissioner A K Khan has remained tight lipped as there was a flurry of enquirers from media persons as to who this son of high profile leader is.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more