'ಸತ್ಯಾನಂದ' ಚಿತ್ರೀಕರಣಕ್ಕೆ ಕೋರ್ಟ್ ಗ್ರೀನ್ ಸಿಗ್ನಲ್

By Rajendra

ಬಿಡದಿ ನಿತ್ಯಾನಂದ ಸ್ವಾಮಿಯ ರಾಸಲೀಲೆ ಪ್ರಕರಣದ ಕಥಾವಸ್ತುವನ್ನು ಒಳಗೊಂಡಿರುವ 'ಸತ್ಯಾನಂದ' ಚಿತ್ರಕ್ಕೆ ನಗರದ ಸಿಟಿ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಈಗ ಈ ಚಿತ್ರದ ಮೇಲಿನ ತಡೆಯಾಜ್ಞೆಯನ್ನು 15ನೇ ಸಿವಿಲ್ ನ್ಯಾಯಾಲಯ ತೆರೆವುಗೊಳಿಸಿದೆ. ಮದನ್ ಪಟೇಲ್ ನಿರ್ಮಿಸುತ್ತಿರುವ ಮಹತ್ವಾಕಾಂಕ್ಷಿ ಚಿತ್ರ ಇದಾಗಿದೆ.

ಕೋರ್ಟ್ ಆದೇಶದಂತೆ ಮದನ್ ಪಟೇಲ್ ಅವರು ಚಿತ್ರದ ನಿರ್ಮಾಣವನ್ನು ಮುಂದುವರಿಸಬಹುದಾಗಿದೆ. ನಿತ್ಯಾನಂದ ಅವರ ಜೀವನ ಆಧಾರವಾಗಿ ಚಿತ್ರವನ್ನು ತೆಗೆಯಲಾಗುತ್ತಿದೆ ಎಂದು ಮದನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಈ ಸಂಬಂಧ ನಿತ್ಯಾನಂದ ಚಿತ್ರದ ನಿರ್ಮಾಣಕ್ಕೆ ತಡೆಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸತ್ಯಾನಂದ ಚಿತ್ರದಿಂದ ತಮ್ಮ ಮಾನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ. ಈ ಚಿತ್ರದ ಮೂಲಕ ತಮ್ಮ ತೇಜೋವಧೆ ಮಾಡುವ ಹಾಗೂ ತಮ್ಮ ಘನತೆಗೆ ಕುಂದು ತರುವ ಪ್ರಯತ್ನ ಮಾಡಲಾಗುತ್ತಿದೆ. ಹಾಗಾಗಿ ಚಿತ್ರದ ನಿರ್ಮಾಣವನ್ನು ರದ್ದು ಪಡಿಸುವಂತೆ ಆದೇಶಿಸಲು ಸ್ವಾಮಿ ನಿತ್ಯಾನಂದ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಕೋರ್ಟ್ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವುಗೊಳಿಸಲು ಮದನ್ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಮಾನ್ಯ ಮಾಡಿದೆ.

More from Filmibeat

English summary
Fifteenth additional city civil court lifts interim stay to the production of the film titled ‘Sathyananda’, reportedly based on the life of the controversial godman Nithyananda, after Nithyananda filed a petition seeking damages for the same.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X