ಒರಟ ಪ್ರಶಾಂತ ಪೊಲೀಸ್ ಠಾಣೆಯಿಂದ ಎಸ್ಕೇಪ್

ಆದರೆ ಅಲ್ಲಿ ಬಂದ ತಕ್ಷಣ ಪೊಲೀಸರಿಂದ ತಪ್ಪಿಸಿಕೊಂಡು ಪ್ರಶಾಂತ ಓಡಿಹೋಗಿದ್ದಾರೆ. ಅವರೊಡನೆ ಇದ್ದ ಯುವತಿ ಪತ್ರಕರ್ತರೊಬ್ಬರ ಮಗಳು ಎಂದು ಶಶಿರೇಖಾ ತಿಳಿಸಿದ್ದಾರೆ. ಸಿನಿಮೀಯ ರೀತಿಯಲ್ಲೇ ಆದ ಈ ಘಟನೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.
ಈ ವಿಷಯವನ್ನು ಸ್ವತಃ ಪ್ರಶಾಂತ್ ಪತ್ನಿ ಶಶಿರೇಖಾ ಮಾಧ್ಯಮಗಳಿಗೆ ಹೇಳಿದ್ದಾರೆ. "ಸಂಜಯನಗರದ ಡಾಲರ್ಸ್ ಕಾಲನಿಯಲ್ಲಿರುವ ಫ್ಲಾಟ್ ಒಂದರಲ್ಲಿ ಯುವತಿಯೊಡನೆ ಪ್ರಶಾಂತ ಇದ್ದ. ನಾನು ಸ್ಪಷ್ಟ ಮಾಹಿತಿಯ ಮೇರೆಗೆ ಅಲ್ಲಿಗೆ ಹೋಗಿ ರೆಡ್ ಹ್ಯಾಂಡ್ ಆಗಿ ಹಿಡಿದು ಸಂಜಯ ನಗರ ಪೊಲೀಸ್ ಠಾಣೆಗೆ ಕರೆತಂದಿದ್ದೆ.
ಆದರೆ ಠಾಣೆಗೆ ಬಂದ ತಕ್ಷಣ ಅವರು ಪೊಲೀಸರಿಂದ ತಪ್ಪಸಿಕೊಂಡು ಓಡಿ ಹೋಗಿದ್ದಾರೆ. ಅವರೇ ತಪ್ಪಿಸಿಕೊಂಡರೋ ಅಥವಾ ಪೊಲೀಸರೇ ಬಿಟ್ಟರೋ ತಿಳಿಯುತ್ತಿಲ್ಲ" ಈ ರೀತಿಯಾದರೆ ನಮ್ಮಂಥ ಹೆಂಗಸರ ಪಾಡೇನು" ಎಂದು ಪ್ರಶಾಂತ್ ಪತ್ನಿ ಶಶಿರೇಖಾ ಮಾಧ್ಯಮಗಳಲ್ಲಿ ಅವಲತ್ತುಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Kannada Movie Hero Orata Fame Prashanth has been filed now under a Domestic Violence Act, in ulsoor police station. Yesterday, he was arrested by Sanjay Nagar police station and escaped from there. His Wife Shashirekha told this to media.


Click it and Unblock the Notifications











