twitter
    For Quick Alerts
    ALLOW NOTIFICATIONS  
    For Daily Alerts

    ಒರಟ ಪ್ರಶಾಂತ ಪೊಲೀಸ್ ಠಾಣೆಯಿಂದ ಎಸ್ಕೇಪ್

    |

    Prashanth
    ವಿವಾಹೇತರ ಸಂಬಂಧ ಹಾಗೂ ಕೌಟುಂಬಿಕ ಕಿರುಕುಳ ನೀಡಿದ್ದಕ್ಕಾಗಿ ಅಲಸೂರು ಠಾಣೆಯಲ್ಲಿ ನಾಯಕ ನಟ ಒರಟ ಪ್ರಶಾಂತ್ ವಿರುದ್ಧ ಕೇಸು ದಾಖಲಿಸಲಾಗಿತ್ತು. ಆದರೆ ಸಂಜಯನಗರದ ಡಾಲರ್ಸ್ ಕಾಲನಿಯಲ್ಲಿರುವ ಫ್ಲಾಟ್ ಒಂದರಲ್ಲಿ ಯುವತಿಯೊಡನೆ ಸಿಕ್ಕಿಬಿದ್ದ ಪ್ರಶಾಂತನನ್ನು ಅವರ ಪತ್ನಿ ಶಶಿರೇಖಾ ರೆಡ್ ಹ್ಯಾಂಡ್ ಆಗಿ ಹಿಡಿದು ಸಂಜಯನಗರದ ಪೊಲೀಸ್ ಠಾಣೆಗೆ ಒಪ್ಪಿಸಿದ್ದರು.

    ಆದರೆ ಅಲ್ಲಿ ಬಂದ ತಕ್ಷಣ ಪೊಲೀಸರಿಂದ ತಪ್ಪಿಸಿಕೊಂಡು ಪ್ರಶಾಂತ ಓಡಿಹೋಗಿದ್ದಾರೆ. ಅವರೊಡನೆ ಇದ್ದ ಯುವತಿ ಪತ್ರಕರ್ತರೊಬ್ಬರ ಮಗಳು ಎಂದು ಶಶಿರೇಖಾ ತಿಳಿಸಿದ್ದಾರೆ. ಸಿನಿಮೀಯ ರೀತಿಯಲ್ಲೇ ಆದ ಈ ಘಟನೆಗೆ ಸ್ಪಷ್ಟ ಕಾರಣ ಇನ್ನಷ್ಟೇ ತಿಳಿದು ಬರಬೇಕಾಗಿದೆ.

    ಈ ವಿಷಯವನ್ನು ಸ್ವತಃ ಪ್ರಶಾಂತ್ ಪತ್ನಿ ಶಶಿರೇಖಾ ಮಾಧ್ಯಮಗಳಿಗೆ ಹೇಳಿದ್ದಾರೆ. "ಸಂಜಯನಗರದ ಡಾಲರ್ಸ್ ಕಾಲನಿಯಲ್ಲಿರುವ ಫ್ಲಾಟ್ ಒಂದರಲ್ಲಿ ಯುವತಿಯೊಡನೆ ಪ್ರಶಾಂತ ಇದ್ದ. ನಾನು ಸ್ಪಷ್ಟ ಮಾಹಿತಿಯ ಮೇರೆಗೆ ಅಲ್ಲಿಗೆ ಹೋಗಿ ರೆಡ್ ಹ್ಯಾಂಡ್ ಆಗಿ ಹಿಡಿದು ಸಂಜಯ ನಗರ ಪೊಲೀಸ್ ಠಾಣೆಗೆ ಕರೆತಂದಿದ್ದೆ.

    ಆದರೆ ಠಾಣೆಗೆ ಬಂದ ತಕ್ಷಣ ಅವರು ಪೊಲೀಸರಿಂದ ತಪ್ಪಸಿಕೊಂಡು ಓಡಿ ಹೋಗಿದ್ದಾರೆ. ಅವರೇ ತಪ್ಪಿಸಿಕೊಂಡರೋ ಅಥವಾ ಪೊಲೀಸರೇ ಬಿಟ್ಟರೋ ತಿಳಿಯುತ್ತಿಲ್ಲ" ಈ ರೀತಿಯಾದರೆ ನಮ್ಮಂಥ ಹೆಂಗಸರ ಪಾಡೇನು" ಎಂದು ಪ್ರಶಾಂತ್ ಪತ್ನಿ ಶಶಿರೇಖಾ ಮಾಧ್ಯಮಗಳಲ್ಲಿ ಅವಲತ್ತುಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

    English summary
    Kannada Movie Hero Orata Fame Prashanth has been filed now under a Domestic Violence Act, in ulsoor police station. Yesterday, he was arrested by Sanjay Nagar police station and escaped from there. His Wife Shashirekha told this to media. 
 
    Tuesday, October 25, 2011, 12:16
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X