ತೋಪೆದ್ದ ಮದುವೆ ಮನೆ; ನಿರ್ಮಾಪಕ ರಕ್ತ ಕಣ್ಣೀರು

By Rajendra
<ul id="pagination-digg"><li class="next"><a href="/news/25-why-ganesh-movie-maduve-mane-failed-aid0052.html">Next »</a></li></ul>

Producer Rehman
ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮದುವೆ ಮನೆ' ಚಿತ್ರ ತೋಪೆದ್ದು ತವರು ಮನೆ ಸೇರಿದೆ. ಈ ಅನಿರೀಕ್ಷಿತ ಆಘಾತದಿಂದ ನಿರ್ಮಾಪಕ ರೆಹಮಾನ್ ಇನ್ನೂ ಚೇತರಿಸಿಕೊಂದಿಲ್ಲ. ಮದುವೆ ಮಾಡಿ ನೋಡು ಮನೆ ಕಟ್ಟಿ ನೋಡು ಎಂಬ ಗಾದೆ ಮಾತೊಂದಿದೆ. ಆದರೆ ನಿರ್ಮಾಪಕರು ಮದುವೆ ಮನೆ ಕಟ್ಟಿ ಸ್ವಂತ ಮನೆ ಮಾರಿಕೊಂಡಿದ್ದಾರೆ.

ರೆಹಮಾನ್ ನಿರ್ಮಾಣದ 'ಯಜಮಾನ' ಚಿತ್ರ ಬಾಕ್ಸಾಫೀಸಲ್ಲಿ ಭರ್ಜರಿ ವಸೂಲಿ ಮಾಡಿತ್ತು. ಆದರೆ ಚಿತ್ರ ದುಡ್ಡು ಮಾಡುವ ಮುನ್ನವೇ ಅದನ್ನು ರೆಹಮಾನ್ ಮಾರಿದ್ದರು. ಕಡೆಗೆ ರೆಹಮಾನ್‌ಗೆ ಉಳಿದದ್ದು ಚಿತ್ರ ನಿರ್ಮಿಸಿದ ಹೆಮ್ಮೆ ಮಾತ್ರ. ಬಳಿಕ ರೆಹಮಾನ್ ಕೆಲವು ಚಿತ್ರಗಳನ್ನು ನಿರ್ಮಿಸಿದರಾದರೂ ಅವರ ಆರ್ಥಿಕ ಬಿಕ್ಕಟ್ಟು ಮಾತ್ರ ಸುಧಾರಿಸಲಿಲ್ಲ. ಗಣೇಶ್ ಕಾಲ್‌ಶೀಟ್ ಪಡೆದು ನಿರ್ಮಿಸಿದ 'ಮದುವೆ ಮನೆ' ಕೂಡ ಈಗ ಮಕಾಡೆ ಮಲಗಿದೆ.

ಚಿತ್ರವನ್ನು ನೋಡಿದವರು ಸೂಪರ್ ಎಂದರು, ಹಂಚಿಕೆದಾರ ಕೆ ಮಂಜು ಅದ್ಭುತ ಎಂದರು. ರೆಹಮಾನ್ ಇನ್ನೇನು ಸ್ವರ್ಗಕ್ಕೆ ಮೂರೇ ಗೇಣು ಎಂಬಂತಿದ್ದರು. ಚಿತ್ರ ಬಿಡುಗಡೆಯಾದ ಮೂರೇ ದಿನಕ್ಕೆ ಅವರು ಗಾಂಧಿನಗರಕ್ಕೆ ಬಂದಿಳಿದಿದ್ದಾರೆ. ಈಗ ಅವರ ಕಣ್ಮುಂದೆ ಮಾರಿದ ಮನೆಯ ಚಿತ್ರಣ ಮಾತ್ರ ಕಾಣುತ್ತಿದೆ.

ಸಾಲಸೋಲ ಮಾಡಿ ರೆಹಮಾನ್ ಮದುವೆ ಮನೆ ಕಟ್ಟಿದರು. ಈಗ ಮದುವೆ ಮನೆ ಗವ್ ಎನ್ನುತ್ತಿದೆ. ಕೆ ವಿ ನಾಗೇಶ್ ಕುಮಾರ್‍‌ಗೆ ಕೊಟ್ಟಿದ್ದ ರು.20 ಲಕ್ಷದ ಚೆಕ್ ಸಮಸ್ಯೆ ಬಗೆಹರಿಯುವ ದಾರಿ ರೆಹಮಾನ್‌ಗೆ ಕಾಣುತ್ತಿಲ್ಲ. ನಾಗೇಶ್ ನಿರ್ಮಾಪಕರ ಸಂಘಕ್ಕೆ ಮೊರೆ ಹೋಗಿದ್ದಾರೆ. ಸ್ವಲ್ಪ ದಿನ ಕಾಯಿರಿ ಎಂದು ಕೆ ಮಂಜು ಭವರಸೆ ನೀಡಿದ್ದು ನಾಗೇಶ್ ಸೈಲೆಂಟಾಗಿದ್ದಾರೆ. ಈಗಾಗಲೆ ಮನೆ ಮಾರಿಕೊಂಡಿರುವ ರೆಹಮಾನ್ ದುಡ್ಡು ಹೇಗೆ ಹೊಂಚುತ್ತಾರೆ ಎಂಬ ಪ್ರಶ್ನೆ ಭೂತಾಕಾರಾವಾಗಿ ಕಾಡುತ್ತಿದೆ.

<ul id="pagination-digg"><li class="next"><a href="/news/25-why-ganesh-movie-maduve-mane-failed-aid0052.html">Next »</a></li></ul>

More from Filmibeat

English summary
Golden Star Ganesh these days facing streak of bad luck. His latest movie Maduve Mane not doing well at box office. sources says producer Rehman sold his house and he is under loss.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X