»   » ಮಾದೇಶನಿಗೆ ಸೆನ್ಸಾರ್ ನಿಂದ ಕೊನೆಗೂ ಮುಕ್ತಿ

ಮಾದೇಶನಿಗೆ ಸೆನ್ಸಾರ್ ನಿಂದ ಕೊನೆಗೂ ಮುಕ್ತಿ

Subscribe to Filmibeat Kannada

ಅಂತೂ ಇಂತೂ ರವಿಶ್ರೀವತ್ಸ ಬಳಗದ ಹೋರಾಟಕ್ಕೆ ಜಯ ಸಿಕ್ಕಿದೆ. ಶಿವರಾಜ್ ಕುಮಾರ್ ಅಭಿನಯದ ಮಾದೇಶ ಚಿತ್ರಕ್ಕೆ ಪರಿಷ್ಕೃತ 'ಎ' ಪ್ರಮಾಣ ಪತ್ರ ನೀಡಿ, ವಿವಾದಕ್ಕೆ ಅಂತ್ಯ ಹಾಡಿದೆ. ಸೆನ್ಸಾರ್ ಮಂಡಳಿ ನೀಡಿದ್ದ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಮಾದೇಶ ತಂಡ ಬಹಳಷ್ಟು ಕತ್ತರಿ ಪ್ರಯೋಗ ನಡೆಸಿ, ಸೆನ್ಸಾರ್ ಮಂಡಳಿಗೆ ಪುನಃ ಚಿತ್ರ ತೋರಿಸಿ ಒಪ್ಪಿಗೆ ಪಡೆದಿದೆ.

ಕಳೆದ ವಾರ ಮಾದೇಶ ಚಿತ್ರ ವೀಕ್ಷಿಸಿದ ಸೆನ್ಸಾರ್ ಮಂಡಳಿ, 'ಈ ಚಿತ್ರ ಯಾವುದೇ ವರ್ಗದ ಜನರು ನೋಡಲು ಯೋಗ್ಯವಾಗಿಲ್ಲ ಎಂದು ಹೇಳಿ ಪ್ರಮಾಣ ಪತ್ರ ನೀಡದೆ ಇಡೀ ಚಿತ್ರವನ್ನು ತಿರಸ್ಕರಿಸಿತ್ತು. ಈಗ ಪುನಃ ಸಂಕಲನಗೊಂಡ ಮೇಲೆ ಚಿತ್ರ ಸೆನ್ಸಾರ್ ಮಂಡಳಿಯ ನಿಯಮಕ್ಕೆ ಅನುಗುಣವಾಗಿದೆ. ಆದರೆ ಶೇ. 100 ರಷ್ಟು ಚಿತ್ರ ತೃಪ್ತಿ ತಂದಿಲ್ಲ ಎಂದು ಪ್ರಾದೇಶಿಕ ಮಂಡಳಿ ಅಧ್ಯಕ್ಷ ಚಂದ್ರಶೇಖರ್ ಹೇಳಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ಕೊನೆಗೂ ಪ್ರಮಾಣ ಪತ್ರ ಗಳಿಸುವಲ್ಲಿ ಸಫಲರಾದ ಚಿತ್ರದ ನಿರ್ಮಾಪಕ ಗೋವರ್ಧನ್ ಮೂರ್ತಿ ಅವರು, ಚಿತ್ರವನ್ನು ರಾಜ್ಯಾದ್ಯಂತ ಆಗಸ್ಟ್ 25 ರಂದು ಬಿಡುಗಡೆ ಮಾಡಲಾಗುವುದು ಎಂದು ಸುದ್ದಿಗಾರರಿಗೆ ತಿಳಿಸಿದರು.

(ದಟ್ಸ್ ಕನ್ನಡಸಿನಿವಾರ್ತೆ)

ಮಾದೇಶನಿಗೆ ಸೆನ್ಸಾರ್ ಮಂಗಳಾರತಿ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada