»   » ‘ಆದರ್ಶನಿಗೆ ಪೇಪರಲ್ಲಿ ವಿಷ್‌ ಮಾಡಿದ್ದು ನಾನಲ್ಲ’

‘ಆದರ್ಶನಿಗೆ ಪೇಪರಲ್ಲಿ ವಿಷ್‌ ಮಾಡಿದ್ದು ನಾನಲ್ಲ’

Subscribe to Filmibeat Kannada

*ದಟ್ಸ್‌ಕನ್ನಡ ಬ್ಯೂರೋ

ಇದುವರೆಗೆ ಮಾತೆತ್ತಿದರೆ ‘ಈ ಸಿನಿಮಾದಲ್ಲಿ ಹಾಡು, ಡ್ಯಾನ್ಸು ಚೆನ್ನಾಗಿತ್ತು’ ಅಂತಷ್ಟೇ ಪೆದ್ದು ಪೆದ್ದಾಗಿ ಮಾತಾಡುತ್ತಿದ್ದ ಮುದ್ದು ನಟಿ ರಾಧಿಕಾ ‘ಗಾಸಿಪ್ಪುಗಳಿಗೆ ನಾನು ಹೆದರೋದಿಲ್ಲ’ ಅಂತ ಮುಖ ಸಿಂಡರಿಸಿಕೊಂಡಿರುವ ವರದಿ ಗಾಂಧಿನಗರದ ಓಣಿಯಿಂದ ಹೊರಬಿದ್ದಿದೆ.

‘ದುಂಬಿ’ಯ ಸಕಲರಸ ನಾಯಕ ಆದರ್ಶ ಹಾಗೂ ತನ್ನ ಅಫೇರಿನ ವಿಷಯ ಕರ್ನಾಟಕದಿಂದ ಚೆನ್ನೈಗೆ ಶಿಫ್ಟಾಯಿತು ಎಂಬ ಸುದ್ದಿಯನ್ನು ಖಂಡಾತುಂಡಾಗಿ ನಿರಾಕರಿಸಿರುವ ರಾಧಿಕಾ, ಸಣ್ಣದಾಗಿ ಆದರ್ಶನ ಕಾಲನ್ನೇ ಎಳೆಯುತ್ತಿರುವುದು ಆತನ ಭವಿಷ್ಯಕ್ಕೆ ಕೊಡಲಿಯಾಗುವ ಮುನ್ಸೂಚನೆಯಿದೆ.

ಆದರ್ಶನ ಹುಟ್ಟುಹಬ್ಬಕ್ಕೆ ಪತ್ರಿಕೆಗಳಲ್ಲಿ ರಾಧಿಕಾ ಶುಭಾಶಯ ಕೋರಿದಾಗಿನಿಂದ ಇವರಿಬ್ಬರ ಜಿಂಗಿಚಕ್ಕದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಆದರೀಗ ರಾಧಿಕಾ ಹೇಳುತ್ತಾರೆ- ನಾನು ಆ ಶುಭಾಶಯ ಕೋರೇ ಇರಲಿಲ್ಲ. ದುಂಬಿ ಸಿನಿಮಾದ ಪ್ರಚಾರಕ್ಕೆ ಆದರ್ಶ ಬಳಸಿರುವ ತಂತ್ರ ಅದಿರಬೇಕು ಅಂತಷ್ಟೇ ಅಂದುಕೊಂಡಿದ್ದೆ. ‘ತವರಿಗೆ ಬಾ ತಂಗಿ’ ಶೂಟಿಂಗಲ್ಲೇ ಈ ಆದರ್ಶ ನನಗೆ ಪರಿಚಿತನಾಗಿದ್ದು. ಆಮೇಲೆ ಒಳ್ಳೆ ಸ್ನೇಹಿತನಾಗಿದ್ದಾರೆ ಅಷ್ಟೆ. ಅವರು ತಮ್ಮ ಸಿನಿಮಾದ ಪ್ರಚಾರ ತಂತ್ರಕ್ಕೆ ನನ್ನ ಹೆಸರು ಬಳಸಿಕೊಂಡಿದ್ದು ನನಗೆ ಎಡವಟ್ಟಾಗುತ್ತೆ ಅಂತ ಗೊತ್ತಿರಲಿಲ್ಲ. ನಾವು ಹುಷಾರಾಗಿರಬೇಕು ಅನ್ನೋದಕ್ಕೆ ಇವೆಲ್ಲ ಎಚ್ಚರಿಕೆಯ ಪಾಠಗಳು ಅನ್ನುತ್ತಾರೆ ರಾಧಿಕ.

ಇಷ್ಟಾಗಿ ರಾಧಿಕ ನಾನು ಹೆದರೋದಿಲ್ಲ ಅಂತ ನಗುತ್ತಾರೆ. ಅವರ ಮೊದಲ ಪತಿ (?) ಆತ್ಮಹತ್ಯೆ ಮಾಡಿಕೊಂಡಾಗಲೂ ರಾಧಿಕಾ ಹೀಗೇ ನಗುತ್ತಿದ್ದರು. ಕೈತುಂಬಾ ಚಿತ್ರಗಳನ್ನಿಟ್ಟುಕೊಂಡು ದಾಪುಗಾಲಿಕ್ಕುತ್ತಿರುವ ಈ ಹುಡುಗಿಯ ಹಿಂದೆ ಬಿದ್ದಿರುವುದು ಆದರ್ಶನ ಆದರ್ಶಕ್ಕೆ ತಕ್ಕುದಲ್ಲ ಎಂದು ಬಲ್ಲವರು ಕುಹಕ ಆಡುತ್ತಿರುವುದಂತೂ ದಿಟ.

ಇದನ್ನೂ ಓದಿ-
ಮುಖಪುಟ / ಸ್ಯಾಂಡಲ್‌ವುಡ್‌

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada