For Quick Alerts
  ALLOW NOTIFICATIONS  
  For Daily Alerts

  ಹಳಸಿದ ನರ- ನಾರಾಯಣ ಸಂಬಂಧ !

  By Staff
  |

  *ಎಸ್ಕೆ.ಶಾಮಸುಂದರ

  ‘ವೀರಸಿಂಹ’ ಚಿತ್ರಕ್ಕೆ ಸದ್ದಿಲ್ಲದೆ ಮುಹೂರ್ತ ನಡೆಯಿತು. ಹಾಗೆನ್ನುವ ಸುದ್ದಿ , ವಿಷ್ಣುವರ್ಧನ್‌- ನಾರಾಯಣ್‌ ಜೋಡಿ ಹಾರ ಹಾಕಿಕೊಂಡಿರುವ ಫೋಟೊ ಪತ್ರಿಕೆಗಳಲ್ಲಿ ಪ್ರಕಟವಾಗಿ 15 ದಿನಗಳೇ ಕಳೆದಿವೆ. ಅದರ ಹಿಂದಿನ ದಿನವಷ್ಟೇ ‘ವೀರಸಿಂಹ’ದ ಪ್ರಾಜೆಕ್ಟೇ ರದ್ದಾದ ಸುದ್ದಿ ಇನ್ನು ಎಲ್ಲೂ ಬಂದಿಲ್ಲ .

  ‘ಸಿಂಹಾದ್ರಿಯ ಸಿಂಹ’ ಎರಡನೇ ವಾರಕ್ಕೆ ಸುಸ್ತಾಗಿ ಮಲಗಿದ್ದಕ್ಕೂ ‘ವೀರಸಿಂಹ’ ಸೆಟ್ಟೇರುವ ಮೊದಲೇ ರಿಟೈರ್‌ ಆಗಿರುವುದಕ್ಕೂ ಸಂಬಂಧ ಇದೆಯಾ? ವಿಷ್ಣು-ನಾರಾಯಣ್‌ ಜೋಡಿ ಮಧ್ಯೆ ಸಣ್ಣದೊಂದು ಬಿರುಕು ಉದ್ಭವ ಆಯಿತಾ? ವೈಜಾಗ್‌ ರಾಜು ಎಂಬ ಹಳೆ ಹುಲಿಗೆ ವಿಷ್ಣು ಮಾಡಿದ್ದ ಪ್ರಾಮಿಸ್‌ ವಿನಾ ಕಾರಣ ಬಿದ್ದು ಹೋಯಿತಾ?

  ಸ್ಯಾಂಡಲ್‌ವುಡ್‌ನಲ್ಲಿ ಪ್ರಶ್ನೆಗಳು ಇಟ್ಟಾಡುತ್ತಿವೆ. ಆದರೆ ನಾರಾಯಣ್‌ ಮತ್ತು ವಿಷ್ಣುವರ್ಧನ್‌ ಇಬ್ಬರೂ ಈ ಬೆಳವಣಿಗೆಯಿಂದ ಪ್ರಸನ್ನಚಿತ್ತರಾಗಿದ್ದಾರಂತೆ. ಮೂಲವೊಂದರ ಪ್ರಕಾರ ‘ವೀರಸಿಂಹ’ ಮುಹೂರ್ತ ನಡೆದ ಮೂರನೆ ದಿನವೇ ನಾರಾಯಣ್‌ ಸ್ಕಿೃಪ್ಟ್‌ ಹಾಳೆ ಹಿಡಿದುಕೊಂಡು ವಿಷ್ಣು ಮನೆಗೆ ಬಂದಿದ್ದರು. ‘ಈ ಕಥೆಯನ್ನು ನಿಭಾಯಿಸೋದಕ್ಕೆ ನನ್ಕೈಲಿ ಆಗೊಲ್ಲಪ್ಪ . ನಿಮ್ಮ ರೇಂಜ್‌ಗೆ ತಕ್ಕ ಹಾಗೆ ಈ ಸಿನಿಮಾನ ಡೈರೆಕ್ಟ್‌ ಮಾಡೋದಕ್ಕೂ ನನ್ನ ಕೈಲಿ ಸಾಧ್ಯವಿಲ್ಲ’ ಎಂದು ಕೈ ಮುಗಿದರು. ವಿಷ್ಣು ದೂಸರಾ ಮಾತಾಡದೆ ‘ಹಾಗೇ ಆಗಲಿ’ ಎಂದು ಕೈ ತೋರಿಸಿದ್ದು ಮಾತ್ರ ನಾರಾಯಣ್‌ ಅವರಿಗೆ ಆಶ್ಚರ್ಯವನ್ನೂ ಆಘಾತವನ್ನೂ ಉಂಟುಮಾಡಿತು. ಅದಕ್ಕೂ ಕಾರಣವಿತ್ತು . ‘ಸಿಂಹಾದ್ರಿಯ ಸಿಂಹ’ದ ನಂತರ ನಾರಾಯಣ್‌ ಸಹವಾಸ ಸಾಕು ಅನ್ನುವ ನಿರ್ಧಾರಕ್ಕೆ ವಿಷ್ಣು ಅವರು ಬಂದಿದ್ದರಂತೆ. ಆದರೆ ಸಂಬಂಧ ಕಡಿದುಕೊಳ್ಳುವ ಮುನ್ನ ಸಣ್ಣದೊಂದು ಪಾಠ ಕಲಿಸಬೇಕು ಎನ್ನುವ ಮಹದಾಸೆ ಅವರಿಗಿತ್ತಂತೆ. ಅದರ ವಾಸನೆಯನ್ನು ಮೊದಲೇ ಗ್ರಹಿಸಿದ ನಾರಾಯಣ್‌, ಅಡ್ವಾನ್ಸ್‌ ಆಗಿಯೇ ಬೇಲ್‌ ತೆಗೆದುಕೊಂಡಿದ್ದಾರೆ.

  ಆ ಆಘಾತದಿಂದ ನಿರ್ಮಾಪಕ ವೈಜಾಗ್‌ ರಾಜ್‌ ಮಕಾಡೆ ಮಲಗಿದ್ದರೆ, ರೆಹಮಾನ್‌ ಆದಿಯಾಗಿ ಮಿಕ್ಕವರು ವಿಷ್ಣು ಹಿಂದೆ ಇಲಿಗಳಂತೆ ಓಡಾಡುತ್ತಿದ್ದಾರೆ.

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X