»   » ನಿರ್ಮಾಪಕರಿಗೆ ಜಯ ; ಸೇವಾ ಶುಲ್ಕ ರದ್ದು

ನಿರ್ಮಾಪಕರಿಗೆ ಜಯ ; ಸೇವಾ ಶುಲ್ಕ ರದ್ದು

Subscribe to Filmibeat Kannada

ಬೆಂಗಳೂರು : ಚಲನ ಚಿತ್ರ ನಿರ್ಮಾಪಕರು ಮತ್ತು ಪ್ರದರ್ಶಕರ ನಡುವಿನ ಬಿಕ್ಕಟ್ಟಿಗೆ ಕಾರಣವಾಗಿದ್ದ ಥಿಯೇಟರ್‌ಗಳ ಸೇವಾ ಶುಲ್ಕವನ್ನು ರಾಜ್ಯ ಸಚಿವ ಸಂಪುಟ ರದ್ದು ಪಡಿಸಿದೆ.

ಸೇವಾ ್ಫಶುಲ್ಕವನ್ನು ರದ್ದು ಪಡಿಸುವಂತೆ ನಿರ್ಮಾಪಕರ ಸಂಘ ಸಲ್ಲಿಸಿದ್ದ ಮನವಿಯನ್ನು ಪರಿಶೀಲಿಸಿದ ಸಂಪುಟ ಸಭೆ, ದೀರ್ಘಕಾಲದ ಚರ್ಚೆಯ ನಂತರ ಸೇವಾಶುಲ್ಕ ರದ್ದುಪಡಿಸಲು ನಿರ್ಧರಿಸಿತು. ಸರಕಾರದ ಆದೇಶವನ್ನು ಮೀರಿ ಸೇವಾ ಶುಲ್ಕವನ್ನು ವಸೂಲಿ ಮಾಡುವ ಚಲನಚಿತ್ರ ಮಂದಿರಗಳ ಮಾಲಿಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಹಾಗೂ ಮಂದಿರದ ಪರವಾನಗಿ ರದ್ದುಗೊಳಿಸಲು ಸಂಪುಟ ಸಭೆ ತೀರ್ಮಾನಿಸಿತು.

ಸರಕಾರದ ಈ ನಿರ್ಧಾರದಿಂದಾಗಿ ಚಿತ್ರಮಂದಿರಗಳಲ್ಲಿ ಟಿಕೇಟ್‌ ದರ ಕಡಿಮೆಯಾಗಲಿದೆ. ಹವಾ ನಿಯಂತ್ರಿತ ಚಲನ ಚಿತ್ರಮಂದಿರಗಳು ವಸೂಲಿ ಮಾಡುತ್ತಿದ್ದ 1. 50 ರೂ. ಹಾಗೂ ಹವಾ ನಿಯಂತ್ರಿತ ಸೌಲಭ್ಯ ಇಲ್ಲದೇ ಇರುವ ಥಿಯೇಟರ್‌ಗಳು ವಸೂಲಿ ಮಾಡುವ 50 ಪೈಸೆ ಸೇವಾ ಶುಲ್ಕ ಇನ್ನು ಮುಂದೆ ಇರುವುದಿಲ್ಲ .

(ಇನ್ಫೋ ವಾರ್ತೆ)

ಪೂರಕ ಓದಿಗೆ
ಟಿಕೇಟು ಸೇವಾಶುಲ್ಕ ಪಿರಿಪಿರಿ: ಉನ್ನತ ಮಟ್ಟದ ಸಭೆಯಲ್ಲಿ ಕಿರಿಕ್ಕು


ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada