»   » ಸಾಕ್ಷಿ ತಂಗಿ ಶಿಲ್ಪಾಗೆ ಕಪಾಳ ಮೋಕ್ಷ !

ಸಾಕ್ಷಿ ತಂಗಿ ಶಿಲ್ಪಾಗೆ ಕಪಾಳ ಮೋಕ್ಷ !

Subscribe to Filmibeat Kannada

ಚಿತ್ರದ ಸೆಟ್‌ನಲ್ಲಿ ಗಲಾಟೆ ಮಾಡುವುದು ತೆಲುಗು ನಾಯಕ- ಸೂಪರ್‌ ಸ್ಟಾರ್‌ ಮೋಹನ್‌ಬಾಬುಗೆ ಹೊಸತಲ್ಲ. ಈ ಬಾರಿ ಈತನ ಕೋಪಕ್ಕೆ ತುತ್ತಾದವರು- ಶಿಲ್ಪಾ ಶಿವಾನಂದ್‌. ಸಾಕ್ಷಿ ಶಿವಾನಂದ್‌ ತಂಗಿಯೀಕೆ. ತೆಲುಗು ಚಿತ್ರವೊಂದರ ಸೆಟ್‌ನಲ್ಲಿ ಮೋಹನ್‌ಬಾಬುಗೆ ಸಿಟ್ಟು ನೆತ್ತಿಗೇರಿದ್ದೇ ್ಫತಡ, ಶಿಲ್ಪಾ ಶಿವಾನಂದ್‌ ಕೆನ್ನೆಗೆ ಬಾರಿಸಿಬಿಟ್ಟಿದ್ದಾರೆ !

ಮೋಹನ್‌ಬಾಬು ಸಿಟ್ಟಿಗೆ ಕಾರಣ ಮುತ್ತಿಡುವ ಸೀನ್‌ನಲ್ಲಿ ಶಿಲ್ಪಾ ಶಿವಾನಂದ್‌ ಸರಿಯಾಗಿ ನಟಿಸದೇ ಇರುವುದು. ಹೈದರಾಬಾದ್‌ನ ಜ್ಯೂಬಿಲಿ ಹಿಲ್ಸ್‌ನಲ್ಲಿ ಶೂಟಿಂಗ್‌ ನಡೆಯುತ್ತಿತ್ತು. ಅದು ಕಿಸ್ಸಿಂಗ್‌ ಸೀನ್‌. ದೃಶ್ಯ ಸರಿಯಾಗಿ ಮೂಡಿ ಬರದೇ ಇರುವುದರಿಂದ ಸಿಟ್ಟಿಗೆದ್ದ ಮೋಹನ್‌ ಸೆಟ್‌ನಲ್ಲೇ ತನ್ನ ಜುಟ್ಟು ಹಿಡಿದುಕೊಂಡು ಎಳೆದೊಯ್ದು ಕೆನ್ನೆಗೆರಡು ಬಿಗಿದಿರುವುದಾಗಿ ಟೀವಿ ಚಾನೆಲ್‌ವೊಂದರ ಸಂದರ್ಶನದಲ್ಲಿ ಶಿಲ್ಪಾ ದೂರಿದ್ದಾರೆ.

ಈ ಪ್ರಕರಣದಲ್ಲಿ ಮಗಳನ್ನು ಬಿಡಿಸುವುದಕ್ಕಾಗಿ ಶಿಲ್ಪಾ ಶಿವಾನಂದ್‌ ಅಮ್ಮ ಪರ್ವೀನ್‌ ಸುಲ್ತಾನ ಮಧ್ಯ ಪ್ರವೇಶಿಸಿದಾಗ ಮೋಹನ್‌ ಆಕೆಗೂ ಎರಡು ಬಿಗಿದು ದೂರಕ್ಕೆ ದಬ್ಬಿಬಿಟ್ಟಿದ್ದಾರೆ. ಆಕೆ ಕುಸಿದು ಬಿದ್ದಿದ್ದು ಕನ್ನಡಕ ಪುಡಿಪುಡಿಯಾಗಿದೆ.

ಮೋಹನ್‌ಬಾಬು ತನ್ನ ಮತ್ತು ಅಮ್ಮನ ಮೇಲೆ ಹಲ್ಲೆ ಮಾಡಿರುವುದಾಗಿ ಜ್ಯೂಬಿಲಿ ಹಿಲ್ಸ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಶಿಲ್ಪಾ ದೂರಿತ್ತಿದ್ದಾರೆ. ಪ್ರಕರಣದಿಂದ ಮನಸ್ಸು ಕೆಡಿಸಿಕೊಂಡು, ಸೆಟ್‌ನಿಂದ ಗಂಟು ಮೂಟೆ ಸಮೇತ ಹೊರಬಿದ್ದಿದ್ದಾರೆ.

ಈ ಹಿಂದೆ ಸೈನಿಕ ಚಿತ್ರ ಶೂಟಿಂಗ್‌ ಸಂದರ್ಭದಲ್ಲಿ ಸಾಕ್ಷಿ ಶಿವಾನಂದ್‌ ತಾನು ತನ್ನ ತಂಗಿ ಅವಳಿ ಜವಳಿ ಮಕ್ಕಳೆಂದೂ ಇಬ್ಬರೂ ಒಂದೇ ರೀತಿ ಕಾಣಿಸುವುದರಿಂದ ಶೂಟಿಂಗ್‌ ಶೆಡ್ಯೂಲ್‌ ನಿರ್ವಹಿಸುವುದಾಗಿಯೂ ಹೇಳಿ ಗುಲ್ಲೆಬ್ಬಿಸಿದ್ದರು.

ನಿರಾಕರಣೆ : ಈ ನಡುವೆ- ಶಿಲ್ಪಾಗೆ ತಾನು ಕಪಾಳಮೋಕ್ಷ ಮಾಡಿಲ್ಲ . ನಾವು 38 ಸಿನಿಮಾ ತೆಗೆದಿದ್ದೇವೆ. ಬೇರೆ ಬೇರೆ ನಾಯಕಿಯರೊಂದಿಗೆ ಕೆಲಸ ಮಾಡಿದ್ದೇವೆ. ಯಾರಿಗಾದರೂ ನಾನು ಯಾಕೆ ಹೊಡೆಯಬೇಕು ಎಂದು ಸ್ಪಷ್ಟನೆ ನೀಡಿರುವ ಮೋಹನ್‌ ಬಾಬು- ಶಿಲ್ಪಾ ಅವರ ವಿರುದ್ಧ ಪ್ರತಿ ದೂರು ಸಲ್ಲಿಸಿದ್ದಾರೆ.

(ಇನ್ಫೋ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada