»   » ಅಮೆರಿಕನ್ನಡತಿ ಸೌಮ್ಯ ತಲೆ ಮೇಲೆ ‘ಮುದ್ದು’ ಗೂಬೆ!

ಅಮೆರಿಕನ್ನಡತಿ ಸೌಮ್ಯ ತಲೆ ಮೇಲೆ ‘ಮುದ್ದು’ ಗೂಬೆ!

Subscribe to Filmibeat Kannada


‘ಸ್ನೇಹ ಪರ್ವ’ ಚಿತ್ರಕ್ಕಾಗಿ ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಕೊಡುತ್ತೇನೆ ಎಂದು ಹೇಳಿದ ಮುದ್ದು, ಇದೀಗ ಸಿನಿಮಾ ಕೆಟ್ಟದಾಗಿ ಬಂದಿದೆ ಎನ್ನುವ ಕಾರಣಕ್ಕೋ ಏನೋ ಸೌಮ್ಯಳನ್ನು ದೂರುತ್ತಿದ್ದಾನೆ.

ಮುದ್ದುರಾಜ್‌ ನಿರ್ದೇಶಿಸಿದ ಒಂದು ಸಿನಿಮಾ ಹೆಸರು ಹೇಳಿ? -ಬಹುಶಃ ಕನ್ನಡಿಗರ ಪೈಕಿ ಒಬ್ಬರಿಗಾದರೂ ಒಂದು ಹೆಸರು ನೆನಪಿದ್ದರೆ ದೇವರಾಣೆ. ಮೊನ್ನೆ ಮೊನ್ನೆ ‘ಮುರಾರಿ’ ಎಂಬ ಚಿತ್ರವನ್ನು ‘ಗೋಪಿ’ಎಂಬ ಹೆಸರಲ್ಲಿ ಕನ್ನಡಕ್ಕೆ ತಂದು ನಿರ್ಮಾಪಕರನ್ನು ಮಟಾಷ್‌ ಮಾಡಿದ ಈ ಪ್ರತಿಭೆ, ಇದೀಗ ಸೌಮ್ಯ ಎಂಬ ಹುಡುಗಿಯ ಮೇಲೆ ಗೂಬೆ ಕೂರಿಸಲು ಹೊರಟಿದೆ.

ಸೌಮ್ಯ ಅಮೆರಿಕಾದ ಹುಡುಗಿ. ಆಕೆಗೆ ಮೊದಲು ಅವಕಾಶ ಕೊಟ್ಟದ್ದು ಚೆಕ್‌ ಬೌನ್ಸ್‌ ರಾಮಕೃಷ್ಣ. ಆತನ ‘ಮಿಸ್‌ ಕ್ಯಾಲಿಫೋರ್ನಿಯಾ’ ಚಿತ್ರದಲ್ಲಿ ನಟಿಸಿದ ನಂತರ ಆಕೆ ಯಾರ ಸಹವಾಸವೂ ಬೇಡ ಅಂತ ಸುಮ್ಮನಿದ್ದಾಕೆ (ನಿಜಾನಾ ಸೌಮ್ಯ?).

‘ಸ್ನೇಹ ಪರ್ವ’ ಚಿತ್ರಕ್ಕಾಗಿ ಆಕೆಯನ್ನು ಮತ್ತೆ ಕರೆತಂದದ್ದು ಇದೇ ಮುದ್ದುರಾಜ್‌. ಇಪ್ಪತ್ತೆೈದು ಸಾವಿರ ಅಡ್ವಾನ್ಸ್‌ ಕೊಟ್ಟು, ಒಂದೂವರೆ ಲಕ್ಷ ರೂಪಾಯಿ ಸಂಭಾವನೆ ಕೊಡುತ್ತೇನೆ ಎಂದು ಹೇಳಿದ ಮುದ್ದು, ಇದೀಗ ಸಿನಿಮಾ ಕೆಟ್ಟದಾಗಿ ಬಂದಿದೆ ಎನ್ನುವ ಕಾರಣಕ್ಕೋ ಏನೋ ಸೌಮ್ಯಳನ್ನು ದೂರುತ್ತಿದ್ದಾನೆ.

ಅಷ್ಟಕ್ಕೂ ಸೌಮ್ಯಳಿಗೆ ಆತ ಕೊಟ್ಟಿರುವುದು 1.40 ಲಕ್ಷ ಮಾತ್ರ. ಇನ್ನೂ ಹತ್ತು ಸಾವಿರ ಬಾಕಿನೇ ಇದೆ!

ಇತ್ತೀಚೆಗಷ್ಟೆ ಪತ್ರಕರ್ತರನ್ನು ಭೇಟಿಯಾಗಿದ್ದ ಸೌಮ್ಯ ಸೌಮ್ಯವಾಗಿಯೇ ಮಾತನಾಡಿದ್ದಾರೆ. ಬೆಂಗಳೂರಿಗೆ ಬರ್ತೀನಿ. ಬಂದಾಗಲೆಲ್ಲ ಸಿನಿಮಾ ಮಾಡಬೇಕು ಅಂತಾ ಏನೂ ಇಲ್ಲ. ಸಿನಿಮಾ ನನಗೆ ಒಂದು ರೀತಿಯ ಮೋಹ. ದುಡ್ಡೇ ದೊಡ್ಡಪ್ಪ ಅಂತ ನಾನು ಭಾವಿಸಿಲ್ಲ ಎಂದು ನವಿರಾಗಿ ಹೇಳಿದ್ದಾರೆ. ಈ ಮಾತುಗಳು ಮುದ್ದುರಾಜ್‌ ಅವರನ್ನೇ ಉದ್ದೇಶಿಸಿ ಹೇಳಿದ್ದಾ?

ಸೌಮ್ಯ ಮೂರ್ತಿ ಗ್ಯಾಲರಿ
ಮಿಸ್‌ ಕ್ಯಾಲಿಫೋರ್ನಿಯಾ ಗ್ಯಾಲರಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada