»   » ಧಿಕ್ಕಾರ, ಕಲ್ಲು- ಚಪ್ಪಲಿ ತೂರಾಟ, ಕಾರಿಗೆ ಬೆಂಕಿ, ಟ್ರಾಫಿಕ್‌ ಅಸ್ತವ್ಯಸ್ತ

ಧಿಕ್ಕಾರ, ಕಲ್ಲು- ಚಪ್ಪಲಿ ತೂರಾಟ, ಕಾರಿಗೆ ಬೆಂಕಿ, ಟ್ರಾಫಿಕ್‌ ಅಸ್ತವ್ಯಸ್ತ

Subscribe to Filmibeat Kannada

ಬೆಂಗಳೂರು : ಪರಭಾಷಾ ಚಲನಚಿತ್ರಗಳ ಪ್ರದರ್ಶನ ವಿರೋಧಿಸಿ ಗುರುವಾರ ನಡೆ ಕನ್ನಡ ಚಿತ್ರೋದ್ಯಮದ ಪ್ರತಿಭಟನೆ ಕಾರ್ಯಕ್ರಮದಲ್ಲಿ ಕೆಲವು ಅಹಿತಕರ ಘಟನೆಗಳೂ ನಡೆದಿದ್ದು , ಕಲ್ಲು ತೂರಾಟ ಹಾಗೂ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ವರದಿಯಾಗಿವೆ.

ಮೂರು ವಾರಗಳ ನಿರ್ಬಂಧವನ್ನು ಪ್ರದರ್ಶಕರು ಉಲ್ಲಂಘಿಸಿದ ಕಾರಣ ನಡೆಸಲಾದ ರಾಜ್‌ಕುಮಾರ್‌ ನೇತೃತ್ವದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಾವಿರಾರು ಮಂದಿ ವಿಧಾನಸೌಧದ ಬಳಿ ಜಮಾಯಿಸಿದ್ದರು.

ಇತ್ತ ಗುಂಪೊಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯಾಲಯದ ಮುಂದೆ ಪಾರ್ಕ್‌ ಮಾಡಲಾಗಿದ್ದ ನಾಲ್ಕು ಕಾರುಗಳಿಗೆ ಹಾಗೂ ಬಸವೇಶ್ವರ ವೃತ್ತದ ಬಳಿ ಒಂದು ಕಾರಿಗೆ ಕಲ್ಲು ತೂರಿತು. ಪ್ರತಿಭಟನಾಕಾರರು ಹಚ್ಚಿದ ಬೆಂಕಿಯಿಂದ ಕಾರೊಂದು ಹೆಚ್ಚೂಕಡಿಮೆ ಪೂರ್ಣವಾಗಿ ಸುಟ್ಟುಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಣಿಜ್ಯ ಮಂಡಳಿ ಕಾರ್ಯಾಲಯದ ಮುಂದಿನ ಕಾರುಗಳಿಗೆ ಬೆಂಕಿಯಿಟ್ಟ ಗುಂಪು, ಕಾರ್ಯಾಲಯ ಹಾಗೂ ಎಟಿಎಂ ಬ್ಯಾಂಕ್‌ಗೆ ಕಲ್ಲು ತೂರಿದ ಪರಿಣಾಮ ಸಾಕಷ್ಟು ನಷ್ಟ ಸಂಭವಿಸಿದೆ ಎಂದು ಪೋಲೀಸ್‌ ಮೂಲಗಳು ತಿಳಿಸಿವೆ.

ಕನ್ನಡ ಚಿತ್ರೋದ್ಯಮದ ಪ್ರತಿಭಟನೆಯಿಂದ ವಿಧಾನಸೌಧ ಹಾಗೂ ಸುತ್ತಮುತ್ತಲಿನ ರಸ್ತೆಗಳಲ್ಲಿ ತಾಸುಗಟ್ಟಲೆ ಟ್ರಾಫಿಕ್‌ ವ್ಯವಸ್ಥೆ ಹದಗೆಟ್ಟಿತ್ತು .

ಉದ್ರಿಕ್ತರ ಗುಂಪು ಮುಖ್ಯಮಂತ್ರಿ ಧರ್ಮಸಿಂಗ್‌ರತ್ತ ಚಪ್ಪಲಿಗಳನ್ನು ತೂರಿದ ಕಹಿ ಘಟನೆ ಕಾರ್ಯಕ್ರಮಕ್ಕೆ ಕಪ್ಪು ಚುಕ್ಕೆಯಂತಿತ್ತು .

(ಪಿಟಿಐ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada