ಯಜ್ಞಾಶೆಟ್ಟಿ ಜೊತೆ ನಟ ಧರ್ಮನ ಲವ್ವಿ ಡವ್ವಿ ಪುರಾಣ!
ಸರಿಸುಮಾರು 95ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರಗಳನ್ನು ಪೋಷಿಸಿರುವ ನಟ ಧರ್ಮ ಏನಾದರು. ಇತ್ತ್ತೀಚೆಗೆ ಅವರ ಸುಳಿವೇ ಇಲ್ಲವಲ್ಲ. ಖಳನಟನಾಗಿ, ಪೊಲೀಸ್ ಅಧಿಕಾರಿಯಾಗಿ ತಮ್ಮ ಪಾತ್ರಗಳಿಗೆ ಧರ್ಮ ಜೀವತುಂಬುತ್ತಿದ್ದರು. ಈಗ ಧರ್ಮ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಅಂತಹದ್ದೇನಾಯಿತು!?
ತಮಿಳು, ಮಲಯಾಳಂ ಚಿತ್ರರಂಗದಲ್ಲೂ ಧರ್ಮ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿ ಅಭಿನಯಿಸುತ್ತಿರಬೇಕಾದರೆ ನಟಿ ಯಜ್ಞಾಶೆಟ್ಟಿಯೊಂದಿಗೆ ಪರಿಚಯವಾಗಿದೆ. ಬಳಿಕ ಅದು ಸ್ನೇಹ, ಪ್ರೀತಿಗೆ ದಾರಿ ಮಾಡಿಕೊಟ್ಟಿದೆ. ಇಬ್ಬರೂ ಒಬ್ಬರನ್ನೊಬ್ಬರು ಗಾಢವಾಗಿ ಪ್ರೀತಿಸುತ್ತಿದ್ದರು ಎಂಬುದು ಗಾಂಧಿನಗರದಲ್ಲಿ ಬಹಳ ದಿನ ಗುಟ್ಟಾಗಿ ಉಳಿಯಲಿಲ್ಲ.
ಶೂಟಿಂಗ್‍ನಲ್ಲಿ ಸಮಯ ಸಿಕ್ಕಾಗಲೆಲ್ಲಾ ಫೋನಿನಲ್ಲಿ ಹರಟುತ್ತಿದ್ದರು. ಇಬ್ಬರೂ ಮದುವೆಯಾಗಲೂ ನಿರ್ಧರಿಸಿದ್ದರಂತೆ. ಆದರೆ ಇವರಿಬ್ಬರ ಪ್ರೇಮ ದುರಂತದಲ್ಲಿ ಅಂತ್ಯವಾಗಿದೆ. ಇಬರಿಬ್ಬರ ಲವ್ವಿ ಡವ್ವಿ ಸ್ಟೋರಿ ಮನೆಯವರಿಗೆ ಗೊತ್ತಾಗಿದೆ. ಅತ್ತ ಧರ್ಮನ ಮನೆಯವರಿಗೂ ಹುಡುಗಿ ಓಕೆ ಆಗಲಿಲ್ಲ. ಇತ್ತ ಯಜ್ಞಾ ಮನೆಯವರ ಮಾತಿಗೆ ಬೆಲೆ ಕೊಟ್ಟು ತಮ್ಮ ಲವ್ ಸ್ಟೋರಿಗೆ ಫುಲ್ ಸ್ಟಾಪ್ ಇಟ್ಟಿದ್ದಾರೆ.
ಈಗ ಒಂಥರಾ ವಿರಹ ವೇದನೆಯಲ್ಲಿ ಧರ್ಮ ಕಾಲ ಕಳೆಯುತ್ತಿದ್ದು, ಅತ್ತ ಅವಕಾಶಗಳೂ ಇಲ್ಲದೆ ಇತ್ತ ಪ್ರೀತಿಸಿದ ಹುಡುಗಿಯೊ ಸಿಗದೆ ಧರ್ಮಸಂಕಟಕ್ಕೆ ಸಿಲುಕಿದ್ದಾರೆ. ಅಂದಹಾಗೆ ಧರ್ಮ ಅವರು ರೆಬೆಲ್ ಸ್ಟಾರ್ ಅಂಬರೀಷ್ ಅವರ ದೂರದ ಸಂಬಂಧಿ ಕೂಡ. ಏನ್ ಹುಡುಗರೊ ಇದ್ ಯಾಕಿಂಗಾಡ್ತಾರೊ...(ದಟ್ಸ್‌ಕನ್ನಡ ಸಿನಿವಾರ್ತೆ)


Click it and Unblock the Notifications











