For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಗರ್ಲ್ ರಮ್ಯಾ ಮದುವೆ ಮುರಿದು ಬಿತ್ತಾ?

  By Rajendra
  |
  <ul id="pagination-digg"><li class="next"><a href="/gossips/26-ramya-to-contest-assembly-election-mandya-aid0052.html">Next »</a></li></ul>

  "ನಟಿ ರಮ್ಯಾ ಮತ್ತಾಕೆಯ ಬಾಯ್‌ಫ್ರೆಂಡ್ ಪೋರ್ಚುಗಲ್‌ನ ರಫೆಲ್ ನಡುವಿನ ಅಫೇರ್ ಮುರಿದು ಬಿದ್ದಿದೆ. ರಮ್ಯಾಳಿಂದ ಬೇಸತ್ತ ಆತ ಆಕೆಯಿಂದ ದೂರಾಗಲು ಯತ್ನಿಸುತ್ತಿದ್ದಾನೆ. ಅವರಿಬ್ಬರ ನಡುವೆ ಈಗ ಮೊದಲಿನಂತೆ ಮಾತುಕತೆ ಇಲ್ಲ. ಹಾಗಾಗಿ ಅವರಿಬ್ಬರೂ ದೂರ ದೂರ. ರಮ್ಯಾಳಿಗೆ ಸ್ಯಾಂಡಲ್‌ವುಡ್ಡೇ ಗತಿ, ಅದಾಗದಿದ್ದರೆ ರಾಜಕೀಯದಲ್ಲಿ ಆಕೆ ಸಂಪೂರ್ಣವಾಗಿ ಬಿಜಿ" ಇಂತಹದೊಂದು ಸುದ್ದಿ ಕಳೆದೊಂದು ವಾರದಿಂದ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ.

  ಇಂತಹ ಸುದ್ದಿಗೆ ರೆಕ್ಕೆಪುಕ್ಕ ಕಟ್ಟಿ ಹಾರಿ ಬಿಡುವ ಮಂದಿಯೂ ಸ್ಯಾಂಡಲ್‌ವುಡ್ಡಿನಲ್ಲಿ ಇದ್ದಾರೆ. ನಟಿ ರಮ್ಯಾ ಟ್ವಿಟ್ಟರ್‌ನಲ್ಲಿ ತಾನು ವಿದೇಶಿ ಯುವಕನೊಬ್ಬನೊಂದಿಗೆ ಪ್ರೀತಿಯ ಸೆಳೆತಕ್ಕೆ ಬಿದ್ದಿರುವುದಾಗಿ ಬರೆದುಕೊಂಡಿದ್ದರು. ಅವತ್ತು ಫೇಸ್‌ಬುಕ್‌ನಲ್ಲಿ ಈಕೆಯ ಹೇಳಿಕೆ ಓದಿದ ಅಭಿಮಾನಿಗಳು ಸ್ಯಾಂಡಲ್‌ವುಡ್ ಕ್ವೀನ್‌ಗೆ ಬೌಲ್ಡ್ ಆದ ಅ ಯುವರಾಜನ್ಯಾರು ಎಂದು ಮರು ಪ್ರಶ್ನೆ ಹಾಕಿದ್ದರು.

  ಅಭಿಮಾನಿಗಳ ಪ್ರಶ್ನೆಗೆ ಕೆಲವೇ ದಿನಗಳಲ್ಲಿ ನಡೆಯಲಿರುವ ಐಪಿಎಲ್ ಕ್ರಿಕೆಟ್ ಲೀಗ್‌ನಲ್ಲಿ ನಾನು ನನ್ನ ಪ್ರಿಯತಮನೊಂದಿಗೆ ಕುಳಿತು ಕ್ರಿಕೆಟ್ ನೋಡುತ್ತೇನೆ ಎಂದಿದ್ದಳು. ಅಭಿಮಾನಿಗಳಿಗೆ ಕೊಟ್ಟ ಮಾತಿನಂತೆಯೇ ನಟಿ ರಮ್ಯಾ ಐಪಿಎಲ್ ಪಂದ್ಯ ನಡೆಯುತ್ತಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ತನ್ನ ವಿದೇಶಿ ಬಾಯ್‌ಫ್ರೆಂಡ್ ಜೊತೆ ಬಂದಿದ್ದರು. ಆತನೊಂದಿಗೆ ಕುಳಿತೇ ಕ್ರಿಕೆಟ್ ಪಂದ್ಯ ವೀಕ್ಷಿಸಿದ್ದರು.

  ತನ್ನ ಭಾವಿ ಪತ್ನಿಯ ತವರಿನ ಅಭಿಮಾನಿಗಳ ದಂಡು ಕಂಡು ರಮ್ಯಾ ಜೊತೆ ಕ್ರೀಡಾಂಗಣಕ್ಕೆ ಬಂದಿದ್ದ ಪೋರ್ಚುಗಲ್‌ನ ಯುವಕ ರಫೆಲ್ ನಾಚಿ ನೀರಾಗಿಬಿಟ್ಟಿದ್ದ. ಬಳಿಕ ಇವರಿಬ್ಬರು ಅಲ್ಲಿ ಇಲ್ಲಿ ಪಾರ್ಟಿಗಳಲ್ಲಿ ಜೊತೆಯಾಗಿಯೇ ಕಾಣಿಸಿಕೊಳ್ಳುತ್ತಿದ್ದರು. 'ಕಂಠಾರಿ ವೀರ ಸುರಸುಂದರಾಂಗಿ' ಚಿತ್ರಕ್ಕೆ ರಮ್ಯಾ ಆಯ್ಕೆಯಾಗುತ್ತಿದ್ದಂತೆ ಗಾಂಧಿನಗರದಲ್ಲಿ ರಮ್ಯಾಳಿಗೆ ಸಂಬಂಧಿಸಿದ ಗಾಳಿ ಸುದ್ದಿಗಳು ಹರಿಯಲಾರಂಭಿಸಿದವು. ಡೀಟೇಲ್ ಸ್ಟೋರಿಗಾಗಿ ಮುಂದೆ ಓದಿ...

  <ul id="pagination-digg"><li class="next"><a href="/gossips/26-ramya-to-contest-assembly-election-mandya-aid0052.html">Next »</a></li></ul>
  English summary
  The latest big rumour churned out from the ever-busy rumour mills in Gandhinagar is that actress Ramya break up with Her Boy Friend Raphael. But ‘Katari Veera Sura Sundari’ producer Munirathna Naidu denies all these rumours. From the starting days of IPL 4 season, media was trying to catch both of them on camera.
  Monday, December 26, 2011, 18:17
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X