ಲಿಪು ಲಿಪು ಲಿಫ್ಟು ಕೊಡುತ್ತ ಹಾಡೇ ಲಿಫ್ಟು!

By * ಚಿತ್ರಗುಪ್ತ

Plagiarism by Hamsalekha?
ಲೊಕೇಷನ್ : ಯಮಲೋಕದ ಪಕ್ಕದ ಬಣ್ಣದ ಲೋಕ!
ಟೈಮ್ : ಸಾಡೇ ಸಾಥ್!

***
ಯಮಧರ್ಮ : ಎಲವೋ ಚಿತ್ರಗುಪ್ತಾ... ನಿನ್ನ ಅಕೌಂಟಿನಲ್ಲಿ ರಿಜಿಸ್ಟರ್ ಆಗಿರುವ ಸದ್ಯದ ಬಿಸಿ ಬಿಸಿ ಸುದ್ದಿ ಏನು?

ಚಿತ್ರಗುಪ್ತ : ಏನೆಂದು ಹೇಳಲಿ ಮಹಾಪ್ರಭು. ಈ ವಿಷಯ ಹೇಳಲು ಒಂಥರಾ ಮುಜುಗರವಾಗುತ್ತಿದೆ.

ಯಮಧರ್ಮ : ಏಕೆ ಚಿತ್ರಗುಪ್ತಾ... ಏನಾಯಿತು? ಹೇಳಿ, ಪರವಾಗಿಲ್ಲ...

ಚಿತ್ರಗುಪ್ತ : ಅದೇ ಯಮಧರ್ಮಾ... ನಿಮಗೆ ಸಂಗೀತ ನಿರ್ದೇಶಕ ಹಂಸಲೇಖ ಗೊತ್ತಲ್ಲವೇ?

ಯಮಧರ್ಮ : ಹಾಂ... ಕೇಳಿದ್ದೇನೆ... ಕಾಲೇಜು ಹುಡುಗರ ಬಾಯಿಲ್ಲಿ ಒಂದು ಕಾಲದ ಭಗವದ್ಗೀತೆಯಾಗಿದ್ದ ಪ್ರೇಮಲೋಕ ಚಿತ್ರಕ್ಕೆ ಅವರೇ ಅಲ್ಲವೇ ಸಂಗೀತ ನಿರ್ದೇಶಕರು?

ಚಿತ್ರಗುಪ್ತ : ಅಹುದು ಮಹಾಪ್ರಭು... ಅದೇ ಹಂಸಲೇಖ ತಮ್ಮ ವೃತ್ತಿಜೀವನದಲ್ಲಿ ಒಬ್ಬ ಸಾಹಿತಿಗೆ ಮೋಸ ಮಾಡಿರುವ ಸುದ್ದಿ ಇದೀಗ ತಾನೇ ಬಂದು ನನ್ನ ಅಕೌಂಟಲ್ಲಿ ದಾಖಲಾಗಿದೆ!

ಇದನ್ನೂ ಓದಿ : ಯಮಲೋಕದ ಸಿಇಓ ಯಮಣ್ಣನ ಪೀಕಲಾಟ!

ಯಮಧರ್ಮ : ವಿಷಯ ಕೌತುಕದಿಂದ ಕೂಡಿದೆ.. ಅದೇನು ಎಂದು ಶುದ್ಧ ಕನ್ನಡದಲ್ಲಿ ಹೇಳಿ ಚಿತ್ರಗುಪ್ತಾ...

ಚಿತ್ರಗುಪ್ತ : ಹೇಳುತ್ತೇನೆ ಕೇಳಿ ಮಹಾಪ್ರಭು... ಅದೇ ಹಂಸಲೇಖರು ಯೋಧ ಎಂಬ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅದೇ ಓಂ ಪ್ರಕಾಶ ರಾವರು ನಿರ್ದೇಶಿಸಿರುವ ಚಿತ್ರಕ್ಕೆ ಅವರು ಸಂಗೀತದ ಜೊತೆಗೆ ಎಲ್ಲಾ ಹಾಡುಗಳ ಸಾಹಿತ್ಯವನ್ನು ತಾವೇ ಕೈಯಾರೇ ಬರೆದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.. ಆದರೆ, ಅದರಲ್ಲಿ ಬರುವ ಒಂದು ಹಾಡನ್ನು ಅವರು ಬರೆದಿದ್ದಲ್ಲ...

ಯಮಧರ್ಮ : ಯಾವ ಹಾಡದು ಚಿತ್ರಗುಪ್ತಾ?

ಚಿತ್ರಗುಪ್ತ : ಲಿಪು ಲಿಪು ಲಿಪು ಲಿಫ್ಟು ಕೊಡೇ... ನಿನ್ನೇನೇ ಕೊಟ್ನಲ್ಲೋ... ಲಿಪ್ ಟು ಪಿಪ್ ಟು ಲಿಫ್ಟು ಕೊಡೇ...

ಯಮಧರ್ಮ : ಅದೇ ನಿಖಿತಮ್ಮನ ಜೊತೆ ದರ್ಶನರು ಕುಣಿದು ಕುಪ್ಪಳಿಸಿದ ಹಾಡಲ್ಲವೇ... ಹಾಗಾದರೆ ಆ ಹಾಡನ್ನು ಬರೆದಿದ್ದು ಹಂಸಲೇಖರು ಅಲ್ಲ ಎಂದಮೇಲೆ ಇನ್ಯಾರು?

ಚಿತ್ರಗುಪ್ತ : ಬನ್ನಿ ಇಲ್ಲಿ ಹತ್ತಿರ... ಕಿವಿಯಲ್ಲಿ ಹೇಳುತ್ತೇನೆ... ಆ ಹಾಡನ್ನು ಬರೆದಿದ್ದು ಕನ್ನಡದ ಸದ್ಯದ ಓಡುವ ಕುದುರೆ, ಗುರುಕಿರಣ್ ಅವರ ಪಟ್ಟಶಿಷ್ಯ ಕವಿರಾಜ್! ಇದು ಸತ್ಯ ಇದು ಸತ್ಯ ಇದು ಸತ್ಯ!

ಯಮಧರ್ಮ: ಎಂಥಾ ಕಾಲ ಬಂತು ಚಿತ್ರಗುಪ್ತರೇ... ಹೀಗೂ ಉಂಠೇ!

More from Filmibeat

English summary
Plagiarism controversy surrounds Kannada music director Hamsalekha. It has been alleged that Hamslekha has lifted songs written by Kaviraj for a movie Yodha, directed by Om Prakash Rao.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X